ಮಂಗಳೂರು ವಿವಿ: ದೂರ ಶಿಕ್ಷಣ ಸ್ನಾತಕ, ಸ್ನಾತಕೋತ್ತರ ಪದವಿ ಕೋರ್ಸ್ಗಳ ಪ್ರವೇಶಾತಿ ಅವಧಿ ವಿಸ್ತರಣೆ
ಮಂಗಳೂರು, ನ.30: ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಕಾರ್ಯಕ್ರಮದಡಿ 2016-17ನೆ ಸಾಲಿನ ಸ್ನಾತಕ ಪದವಿ (ಬಿಎ, ಬಿ.ಕಾಂ, ಬಿಬಿಎಂ) ಮತ್ತು ಸ್ನಾತಕೋತ್ತರ ಪದವಿ ಎಂ.ಎ, ಎಂ.ಕಾಂ, ಕೋರ್ಸ್ಗಳ ಪ್ರವೇಶಾತಿ ಆರಂಭಗೊಂಡಿದ್ದು, ದಂಡರಹಿತವಾಗಿ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನವನ್ನು ನವೆಂಬರ್ 30 ಆಗಿತ್ತು. ಆದರೆ ಇದೀ ಅದನ್ನು ಡಿಸೆಂಬರ್ 15ರವರೆಗೆ ವಿಸ್ತರಿಸಲಾಗಿದೆ. ಪಿಯುಸಿ/ಮೂರು ವರ್ಷದ ಡಿಪ್ಲೋಮಾ ಉತ್ತೀರ್ಣರಾದ ಯಾವುದೇ ವಯೋಮಿತಿಯ ಅಭ್ಯರ್ಥಿಗಳು ಪದವಿ ಕೋರ್ಸ್ಗೆ ಹಾಗೂ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಕೋರ್ಸ್ಗೂ ಪ್ರವೇಶ ಪಡೆಯಬಹುದಾಗಿದೆ ಎಂದು ವಿಶ್ವ ವಿದ್ಯಾನಿಲಯದ ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story