ಪ್ರತ್ಯೇಕ ಕೊಲೆ ಬೆದರಿಕೆ ಪ್ರಕರಣ: ಇಬ್ಬರ ಬಂಧನ
ಮೂಡುಬಿದಿರೆ, ನ.30: ಎರಡು ಪ್ರತ್ಯೇಕ ಕೊಲೆ ಬೆದರಿಕೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಮೂಡುಬಿದಿರೆ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪುಚ್ಚೆಮೊಗರು ಶಾಂತಿರಾಜ ಕಾಲನಿಯಲ್ಲಿ ಫೈಝಲ್ ಎಂಬಾತ ಹೊಸ ಮನೆ ಕಟ್ಟುತ್ತಿದ್ದು, ಅದಕ್ಕೆ ಈ ಹಿಂದೆ ಜಗದೀಶ್ ಎಂಬವರು ಮರದಕೆಲಸ ಮಾಡುತ್ತಿದ್ದರು. ಆ ಬಳಿಕ ಬೇರೆಯವರ ಬಳಿ ಫೈಝಲ್ ಮರದ ಕೆಲಸ ಮಾಡಿಸುತ್ತಿದ್ದು, ಜಗದೀಶ್ ತನಗೆ ಬರಬೇಕಾದ 25 ಸಾವಿರ ರೂ. ನೀಡುವಂತೆ ಫೈಝಲ್ ಬಳಿ ಕೇಳಿದ್ದರು. ಇದರಿಂದ ಸಿಟ್ಟಿಗೆದ್ದ ಫೈಝಲ್ ಜಗದೀಶ್‌ಗೆ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿರುವುದಾಗಿ ಮೂಡುಬಿದಿರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಫೈಝಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕೋಟೆಬಾಗಿಲಿನ ಜಮೀರ್ ಎಂಬಾತ ತನ್ನ ಸಹಪಾಠಿ ಪಡುಮಾರ್ನಾಡು ಸಂಜಯ್ ಎಂಬವನ ಜೊತೆ ಜಗಳವಾಡಿ, ಬೆದರಿಕೆಯೊಡ್ಡಿರುವುದಾಗಿ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿ ಜಮೀರ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Next Story





