ಡಿ.12ರಂದು ಮೀಲಾದುನ್ನಬಿ

ಮಂಗಳೂರು, ನ.30: ರಬೀವುಲ್ ಅವ್ವಲ್ ತಿಂಗಳ ಪ್ರಥಮ ಚಂದ್ರದರ್ಶನವು ಬುಧವಾರ ಅಸ್ತಮಿಸಿದ ಗುರುವಾರ(ನ.30) ರಾತ್ರಿ ಆಗಿರುವ ಹಿನ್ನೆಲೆಯಲ್ಲಿ ಡಿ.12ರ ಸೋಮವಾರದಂದು ಮೀಲಾದುನ್ನಬಿ (ಚಾಂದ್ 12) ದಿನ ಆಗಿರಲಿದೆ ಎಂದು ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ ಎಂದು ಝೀನತ್ ಭಕ್ಷ್ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನ.30ರ ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ರಬೀವುಲ್ ಅವ್ವಲ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವುದರಿಂದ ಚಾಂದ್ 12ನೆ ದಿನವಾದ ಡಿ.12ರಂದು ಮೀಲಾದುನ್ನಬಿ ಆಗಿರಲಿದೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





