ದೇಶಾದ್ಯಂತ 40 ಕಡೆಗಳಲ್ಲಿ ಇಡಿ ಶೋಧ ಕಾರ್ಯಾಚರಣೆ

ಹೊಸದಿಲ್ಲಿ,ನ.30: 500 ಮತ್ತು 1,000 ನೋಟುಗಳ ನಿಷೇಧದ ಹಿನ್ನೆಲೆಯಲ್ಲಿ ಕರೆನ್ಸಿ ವಿನಿಮಯ ಕೇಂದ್ರಗಳು,ಹವಾಲಾ ಏಜಂಟರು ಮತ್ತು ಇತರರು ಸೇರಿದಂತೆ ದೇಶಾದ್ಯಂತ 40 ಕಡೆಗಳಲ್ಲಿ ಇಂದು ಶೋಧ ಕಾರ್ಯಾಚರಣೆಗಳನ್ನು ಕೈಗೊಂಡ ಜಾರಿ ನಿರ್ದೇಶನಾಲಯ(ಇಡಿ)ವು ಕಪ್ಪುಹಣಕ್ಕಾಗಿ ತಪಾಸಣೆ ನಡೆಸಿತು.
ಇಡಿ ಅಧಿಕಾರಿಗಳು ಕೋಲ್ಕತಾದಲ್ಲಿ ವೈದ್ಯರೋರ್ವರ ನಿವಾಸದಿಂದ 10ಲ.ರೂ.ಗಳ ಹೊಸನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಅದೇ ಪ್ರದೇಶದಿಂದ ನಾಲ್ಕು ಲ.ರೂ. ವೌಲ್ಯದ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಳೆಯ ನೋಟುಗಳ ಅಕ್ರಮ ವಿನಿಮಯ ಮತ್ತು ಹವಾಲಾ ಹಾಗೂ ಹಣ ಚೆಲುವೆ ಚಟುವಟಿಕೆಗಳಿಗಾಗಿ ಹೊಸ ನೋಟುಗಳ ಸಂಗ್ರಹಗಳ ಮೇಲೆ ತಾವು ಕಣ್ಣಿರಿಸಿರುವುದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
Next Story





