ಸರಕಾರಿ ಕಚೇರಿಗೆ ಎಸಿಬಿ ಪೊಲೀಸರ ದಾಳಿ: ಲಕ್ಷಾಂತರ ರೂ. ವಶ

ಮಂಗಳೂರು, ನ.30: ನಗರದ ಕೊಟ್ಟಾರದಲ್ಲಿರುವ ಕರ್ನಾಟಕ ಸರಕಾರದ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಅಧಿಕಾರಿಯ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿದ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು, ಅಧಿಕಾರಿಯನ್ನು ಬಂಧಿಸಿ ಮನೆ ಹಾಗೂ ಕಚೇರಿಯಿಂದ ಲಕ್ಷಾಂತರ ರೂ. ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಅಧಿಕಾರಿ ಎಚ್. ಸುರೇಶ್ ಬಂಧಿತ ಅಧಿಕಾರಿ.
ಈತನ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿರುವ ಎಸಿಬಿ ಪೊಲೀಸರು ಕಚೇರಿಯಿಂದ 1.12 ಲಕ್ಷ ರೂ. ಮತ್ತು ಮನೆಯಿಂದ 3 ಲಕ್ಷ ರೂ. ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದಾರೆ. ಎಸಿಬಿ ಇನ್‌ಸ್ಪೆಕ್ಟರ್ ಯೋಗೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
Next Story





