ಸರಕಾರವು ಕಾಳಧನಿಕರ ಶೇ.50 ಹಣವನ್ನು ಮರಳಿಸುತ್ತಿದೆ:ರಾಹುಲ್

ಹೊಸದಿಲ್ಲಿ,ನ.30: ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿಗಳನ್ನು ತರುವ ಮೂಲಕ ಸರಕಾರವು ಕಪ್ಪುಹಣ ಖದೀಮರಿಗೆ ನೆರವಾಗುತ್ತಿದೆ ಎಂದು ಇಂದಿಲ್ಲಿ ಆರೋಪಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಲೆಕ್ಕವಿಲ್ಲದ ಅರ್ಧದಷ್ಟು ಹಣವನ್ನು ಅವರಿಗೆ ಮರಳಿಸಲಾಗುತ್ತಿದೆ ಎಂದು ಹೇಳಿದರು.
ಸಂಸತ್ತಿನ ಹೊರಗೆ ಸುದ್ದಿಗಾರರೊಡನೆ ಮಾತನಾಡುತ್ತಿದ್ದ ಅವರು ಈ ಆರೋಪವನ್ನು ಮಾಡಿದರು.
ಬುಧವಾರ ಲೋಕಸಭೆಯಲ್ಲಿ ಪ್ರತಿಪಕ್ಷ ಸಂಸದರ ಸಭಾತ್ಯಾಗ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಾದರೂ ನಿಧನರಾದಾಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಸಂಸತ್ತಿನ ಪರಿಪಾಠವಾಗಿದೆ. ಇದೇ ಮೊದಲ ಬಾರಿಗೆ ಹುತಾತ್ಮ ಯೋಧರಿಗೆ(ನಗ್ರೋತಾ ಭಯೋತ್ಪಾದಕ ದಾಳಿಯಲ್ಲಿ)ಶ್ರದ್ಧಾಂಜಲಿಗಳನ್ನು ಸಲ್ಲಿಸಲಾಗಿಲ್ಲ. ಹೀಗಾಗಿ ಪ್ರತಿಪಕ್ಷ ಸಭಾತ್ಯಾಗ ನಡೆಸಿತು ಎಂದು ತಿಳಿಸಿದರು.
Next Story





