ಬ್ರೆಝಿಲ್‌ನ ವಿಮಾನ ಪತನ : 20 ಪತ್ರಕರ್ತರ ಸಾವು

ರಿಯೋಡಿಜನೈರೊ (ಬ್ರೆಝಿಲ್), ನ.30: ಬ್ರೆಝಿಲ್‌ನ ಚ್ಯಾಪಕೋಯನ್ಸ್ ಫುಟ್ಬಾಲ್ ತಂಡ ನಿರ್ನಾಮಗೊಂಡ ವಿಮಾನ ಅಪಘಾತದಲ್ಲಿ ಬ್ರೆಝಿಲ್‌ನ 20 ಪತ್ರಕರ್ತರೂ ಸಾವಿಗೀಡಾಗಿದ್ದಾರೆ. ಈ ಪತ್ರಕರ್ತರಲ್ಲಿ ಹಿರಿಯ ಅಂಕಣಕಾರರು ಮತ್ತು ಯುವಸ್ಥಳೀಯ ವರದಿಗಾರರು ಸೇರಿದ್ದಾರೆ.
ಕೊಲಂಬಿಯದ ಮೆಡೆಲಿನ್ ಸಮೀಪದಪರ್ವತ ಪ್ರದೇಶದಲ್ಲಿ ಸೋಮವಾರ ರಾತ್ರಿ ವಿಶೇಷ ವಿಮಾನ ಪತನಗೊಂಡಾಗ ಒಟ್ಟು 71 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅಪಘಾತದ ಬಳಿಕ ಹೆಚ್ಚಿನ ಗಮನಕೊಪಸುಡಮೆರಿಕಾನ ಪ್ರಾದೇಶಿಕ ಪಂದ್ಯಾವಳಿಯ ಫೈನಲ್‌ನಲ್ಲಿ ಆಡಲು ಹೊರಟಿದ್ದ ಫುಟ್ಬಾಲ್ ಆಟಗಾರರಮೇಲೆ ಕೇಂದ್ರೀಕೃತವಾಗಿತ್ತು. ವಿಮಾನದಲ್ಲಿ ಆಟಗಾರರ ಜೊತೆಗೆ ಪಂದ್ಯದ ವರದಿ ಮಾಡಲು ಹೋಗಿದ್ದ ಪತ್ರಕರ್ತರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಮೃತ ಪತ್ರಕರ್ತರಲ್ಲಿ ಫಾಕ್ಸ್‌ಸ್ಪೋರ್ಟ್ ಟೆಲಿವಿಶನ್‌ನ ಆರು ಮಂದಿ, ಗ್ಲೋಬೊದ ನಾಲ್ಕು ಮಂದಿ ಹಾಗೂ ಗ್ಲೋಬೊ ಸಮೂಹಕ್ಕೆ ಸೇರಿದ ಆರ್‌ಬಿಎಸ್ ಟಿವಿಯ ನಾಲ್ಕು ಮಂದಿ ಸೇರಿದ್ದಾರೆ.
ಆರು ಸಣ್ಣ ರೇಡಿಯೊ ನಿಲಯಗಳ ಆರು ವರದಿಗಾರರೂ ಇದ್ದರು.
ಅಪಘಾತದಲ್ಲಿ ಆರು ಮಂದಿ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಅವರಲ್ಲಿ ಓರ್ವರು ಪತ್ರಕರ್ತ ರಫೇಲ್ ಹೆಂಝೆಲ್‌ವಲ್ಮೋರ್ ಬಿಡ. ಅವರು ರೇಡಿಯೊ ಓಸ್ಟೆ ಕ್ಯಾಪಿಟಲ್‌ನಲ್ಲಿ ನೇರ ಫುಟ್ಬಾಲ್ ವೀಕ್ಷಕ ವಿವರಣೆಗಳನ್ನು ಕೊಡುತ್ತಾರೆ.
ಇನ್ನೋರ್ವ ಪತ್ರಕರ್ತ ‘ರೇಡಿಯೊಸೂಪರ್‌ಕೊಂಡ’ದ ಇವಾನ್ ಕಾರ್ಲೋಸ್ ಆ್ಯಗ್ನೊಲೆಟೊ ದುರದೃಷ್ಟಕರ ವಿಮಾನದಲ್ಲಿ ಪ್ರಯಾಣಿಸಬೇಕಾಗಿತ್ತು. ಆದರೆ, ಅವರು ಬರುವುದು ತಡವಾಗಿದ್ದರಿಂದ ವಿಮಾನ ತಪ್ಪಿತು, ಅವರುಬದುಕಿದರು.







