ಅಧ್ಯಕ್ಷ ಚುನಾವಣೆಗೆ ಮಿಶೆಲ್ ಸ್ಪರ್ಧಿಸುವ ಬಗ್ಗೆ ಒಬಾಮ ಹೇಳಿದ್ದೇನು ?

ವಾಶಿಂಗ್ಟನ್, ನ. 30: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮಿಶೆಲ್ ಒಬಾಮ ಯಾವತ್ತೂ ಸ್ಪರ್ಧಿಸುವುದಿಲ್ಲ ಎಂಬುದಾಗಿ ಅವರ ಗಂಡ ಹಾಗೂ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಚ್ಚರಿಯ ವಿಜಯ ಸಾಧಿಸಿದ ಒಂದು ದಿನದ ಬಳಿಕ ‘ರೋಲಿಂಗ್ ಸ್ಟೋನ್’ ಮ್ಯಾಗಝಿನ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಮಿಶೆಲ್‌ರನ್ನು ಒತ್ತಾಯಿಸಿರುವುದನ್ನು ಸ್ಮರಿಸಬಹುದಾಗಿದೆ.
‘‘ಆಕೆ ನನಗೆ ಗೊತ್ತಿರುವಂತೆ ಪ್ರತಿಭಾವಂತೆ. ಅಮೆರಿಕದ ಜನತೆಯೊಂದಿಗೆ ಅವರು ಭಾವನಾತ್ಮಕ ಬೆಸುಗೆ ಹೊಂದಿದ್ದಾರೆ. ಆದರೆ, ಅವರು ತೀರಾ ಸೂಕ್ಷ್ಮ ಸಂವೇದನೆಯವರಾಗಿದ್ದು, ರಾಜಕೀಯ ಅವರಿಗೆ ಒಗ್ಗುವುದಿಲ್ಲ ಎಂದು ನಾನು ತಮಾಷೆಯಾಗಿ ಹೇಳುತ್ತೇನೆ’’ ಎಂದು ಒಬಾಮ ಹೇಳಿದ್ದಾರೆ.
Next Story





