ಬರ ಪರಿಸ್ಥಿತಿ: ರೈತರಿಂದ ಸಾಲ ವಸೂಲಾತಿಗೆ ಮುಂದಾಗಬೇಡಿ
ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
ದಾವಣಗೆರೆ, ನ.30: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಿಲ್ಲಾಧಿ ಕಾರಿ ನೇತೃತ್ವದಲ್ಲಿ ನಡೆದ ವಿವಿಧ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ 2017ರ ನವೆಂಬರ್ 30ರ ವರೆಗೆ ರೈತರಿಂದ ಯಾವುದೇ ರೀತಿಯ ಸಾಲಗಳನ್ನು ಬ್ಯಾಂಕ್‌ಗಳು ವಸೂಲಾತಿ ಮಾಡಬಾರದೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆೆಯಲ್ಲಿ ಮುಂದಿನ ವರ್ಷದವರೆಗೂ ಸಾಲ ವಸೂಲಾತಿ ಮಾಡುವುದು ಬೇಡ. ನಂತರ 3 ವರ್ಷದ ಅವಧಿಯಲ್ಲಿ ವಾರ್ಷಿಕ ಕಂತುಗಳನ್ನು ಸಮನಾಗಿ 2020ರ ವರೆಗೆ ಸಾಲ ಮರುಪಾವತಿಸಲು ಸಮಯಾವಕಾಶ ಸಿಗಲಿದೆ. ಹಾಗೂ ರೈತರು ಪಡೆದಿರುವ ಅವಧಿ ಸಾಲಗಳನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸುವ ಕುರಿತು ಸಭೆೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲ ಬ್ಯಾಂಕ್‌ಗಳು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚಿಸಿದರು.
ಲೀಡ್ ಬ್ಯಾಂಕ್‌ನ ವಿಭಾಗೀಯ ಪ್ರಬಂಧಕ ಎನ್.ಟಿ. ಯರ್ರಿಸ್ವಾಮಿ ಮಾತನಾಡಿ, ಜಿಲ್ಲೆಯ ಆರು ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿದ್ದು, ಮೊದಲ ಹಂತದಲ್ಲಿ ಜಗಳೂರು, ಹರಪನಹಳ್ಳಿ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು.
ನಂತರ ಉಳಿದ ತಾಲೂಕುಗಳು ಬರ ಪಟ್ಟಿಗೆ ಸೇರಿದವು ಎಂದರು. ಬರ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗಲು ಆರ್‌ಬಿಐ ನಿರ್ದೇ ಶಳನ್ವಯ ಜಿಲ್ಲೆಯ ಬ್ಯಾಂಕ್‌ಗಳು ಕಾರ್ಯೋನ್ಮುಖವಾಗಿದ್ದು, ನಬಾರ್ಡ್ ನೆರವಿನೊಂದಿಗೆ ಎಲ್ಲಾ ಅಗತ್ಯ ಕ್ರಮ ಗಳನ್ನು ಕೈಗೊಳ್ಳಲಾಗಿದೆ. ಆದರೆ, ಈ ಕ್ರಮಗಳು ಗ್ರಾಮೀಣ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ ಎಂದರು. ರೈತರ ಅಲ್ಪಾವಧಿ ಸಾಲಗಳನ್ನು ಮಧ್ಯಮಾ ವಧಿ ಸಾಲಗಳಾಗಿ ಪರಿವರ್ತನೆ ಮಾಡುವುದು, ಇದರಲ್ಲಿ ಪ್ರಮುಖವಾಗಿ ಬೆಳೆ ಸಾಲ, ಬಂಗಾರದ ಆಭರಣಗಳ ಮೇಲಿನ ಸಾಲ ಸೇರಿದಂತೆ ಮುಂದಿನ 3 ವರ್ಷಗಳ ಅವಧಿಯಲ್ಲಿ ವಾರ್ಷಿಕ ಕಂತು ಕಟ್ಟಲು ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು. ಕೃಷಿಕರ ಸಾಲಗಳಲ್ಲದೆ ಇತರ ಸಾಲಗಳಾದ ಸಣ ್ಣ, ಅತೀಸಣ್ಣ ಉದ್ಯಮ, ಗ್ರಾಮೀಣ ಕುಶಲ ಕೆಲಸಗಾರರು, ವ್ಯಾಪಾರಿಗಳು ಪಡೆದ ಸಾಲದ ವಿಚಾರದಲ್ಲಿಯೂ ಆಯಾ ಬ್ಯಾಂಕಿಗೆ ಸಂಬಂಧಿಸಿದಂತೆ ಕಂತುಗಳನ್ನು ಮುಂದಿನ 01 ವರ್ಷದ ಅವಧಿಗೆ ಸಾಲ ವಸೂಲಾತಿ ಮುಂದೂಡುವುದು ಹಾಗೂ ಕಂತುಗಳ ಮರು ಜೊ ಅವಕಾಶ ನೀಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿ, ಆರ್‌ಬಿಐನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜಯಪ್ರಕಾಶ, ನಬಾರ್ಡ್ ಬ್ಯಾಂಕಿನ ರವೀಂದ್ರ, ಜಿಪಂ ಉಪಕಾರ್ಯದರ್ಶಿ ಷಡಾಕ್ಷರಪ್ಪ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಹಾಜರಿದ್ದರು.







