ಕೊಹ್ಲಿ, ಜಡೇಜ ಜೀವನಶ್ರೇಷ್ಠ ಸಾಧನೆ
ಐಸಿಸಿ ಟೆಸ್ಟ್ ರ್ಯಾಂಕಿಂಗ್:

ಹೊಸದಿಲ್ಲಿ, ನ.30: ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೀವನಶ್ರೇಷ್ಠ 3ನೆ ರ್ಯಾಂಕಿಗೆ ಲಗ್ಗೆ ಇಟ್ಟಿದ್ದಾರೆ.
ಮೊಹಾಲಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೆ ಟೆಸ್ಟ್‌ನಲ್ಲಿ ಕ್ರಮವಾಗಿ 62 ಹಾಗೂ ಅಜೇಯ 6 ರನ್ ಗಳಿಸಿದ್ದ ಕೊಹ್ಲಿ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ 833 ಅಂಕ ಗಳಿಸಿ ಒಂದು ಸ್ಥಾನ ಭಡ್ತಿ ಪಡೆದರು. ಕಳೆದ ವಾರ ಬಿಡುಗಡೆಯಾಗಿದ್ದ ರ್ಯಾಂಕಿಂಗ್‌ನಲ್ಲಿ ಕೊಹ್ಲಿ 4ನೆ ರ್ಯಾಂಕ್‌ನಲ್ಲಿದ್ದರು.
ಮೊಹಾಲಿ ಟೆಸ್ಟ್‌ನಲ್ಲಿ90 ರನ್ ಕಲೆ ಹಾಕಿ, 4 ವಿಕೆಟ್‌ಗಳನ್ನು ಉರುಳಿಸಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾಗಿದ್ದ ರವೀಂದ್ರ ಜಡೇಜ ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ ನಾಲ್ಕನೆ ಸ್ಥಾನಕ್ಕೇರಿದ್ದಾರೆ.
493 ಅಂಕ ಗಳಿಸಿರುವ ಆರ್.ಅಶ್ವಿನ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮೊಹಾಲಿಯಲ್ಲಿ ಒಟ್ಟು ಐದು ವಿಕೆಟ್‌ಗಳನ್ನು ಪಡೆದಿರುವ ವೇಗದ ಬೌಲರ್ ಮುಹಮ್ಮದ್ ಶಮಿ ಬೌಲರ್‌ಗಳ ಪಟ್ಟಿಯಲ್ಲಿ 21ನೆ ರ್ಯಾಂಕ್‌ನಿಂದ 19ನೆ ರ್ಯಾಂಕಿಗೆ ಭಡ್ತಿ ಪಡೆದಿದ್ದಾರೆ.
ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಮೂರು ಸ್ಥಾನ ಮೇಲಕ್ಕೇರಿ ಜೀವನಶ್ರೇಷ್ಠ 9ನೆ ಸ್ಥಾನಕ್ಕೆ ತಲುಪಿದರು.





