ಶಿಸ್ತು ಉಲ್ಲಂಘನೆ : ರಹ್ಮಾನ್, ಹುಸೈನ್‌ಗೆ ಭಾರೀ ದಂಡ

ಢಾಕಾ, ನ.30: ಮೈದಾನದ ಹೊರಗೆ ಗಂಭೀರ ಶಿಸ್ತು ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಶಬೀರ್ ರಹ್ಮಾನ್ ಹಾಗೂ ಅಲ್-ಅಮೀನ್ ಹುಸೈನ್‌ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಬುಧವಾರ ಭಾರೀ ದಂಡ ವಿಧಿಸಿದೆ.
ತಾವು ತಂಗಿದ್ದ ಹೊಟೇಲ್‌ಗೆ ಹುಡುಗಿಯರನ್ನು ಕರೆದೊಯ್ದು ಶಿಸ್ತು ಉಲ್ಲಂಘಿಸಿರುವ ರಹ್ಮಾನ್ ಹಾಗೂ ಹುಸೈನ್‌ಗೆ ಬಿಸಿಬಿ ಸುಮಾರು 15,000 ಡಾಲರ್ ದಂಡ ವಿಧಿಸಿದೆ.
ರಾಷ್ಟ್ರೀಯ ಕ್ರಿಕೆಟಿಗರಾಗಿ ಆಟಗಾರರ ಜವಾಬ್ದಾರಿಯನ್ನು ನೆನಪಿಸಲಾಗಿದೆ. ಮತ್ತೊಮ್ಮೆ ಇಂತಹ ತಪ್ಪನ್ನು ಪುನರಾವರ್ತಿಸಿದರೆ ಕಠಿಣ ಶಿಕ್ಷೆ ನೀಡುವ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಬಿಸಿಬಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಆಟಗಾರರ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಬಿಸಿಬಿ ವಿವರಣೆ ನೀಡಿಲ್ಲ. ಸ್ಥಳೀಯ ದಿನಪತ್ರಿಕೆಯ ಮಾಡಿರುವ ವರದಿ ಪ್ರಕಾರ, ಈ ಇಬ್ಬರು ಆಟಗಾರರು ತಾವು ವಾಸ್ತವ್ಯವಿದ್ದ ಹೊಟೇಲ್ ರೂಮ್‌ಗಳಿಗೆ ಹುಡುಗಿಯರನ್ನು ಕರೆದೊಯ್ದಿದ್ದರು
Next Story





