ಎಎಫ್‌ಸಿ ಸದಸ್ಯ ಅಸೋಸಿಯೇಶನ್ ಪ್ರಶಸ್ತಿಗೆ ಭಾರತ ನಾಮನಿರ್ದೇಶನ
ಹೊಸದಿಲ್ಲಿ, ನ.30: ಏಷ್ಯನ್ ಫುಟ್ಬಾಲ್ ಕಾನ್ಫಡರೇಶನ್(ಎಎಫ್‌ಸಿ) ಸದಸ್ಯ ಅಸೋಸಿಯೇಶನ್(ಅಭಿವೃದ್ದಿ) ಪ್ರಶಸ್ತಿಗೆ ವಿಯೇಟ್ನಾಂ ಹಾಗೂ ಮಲೇಷ್ಯಾದ ಜೊತೆಗೆ ಭಾರತವೂ ಕೂಡ ನಾಮನಿರ್ದೇಶನಗೊಂಡಿದೆ.
ಅಬುಧಾಬಿಯಲ್ಲಿ ಗುರುವಾರ ರಾತ್ರಿ ನಡೆಯಲಿರುವ ಎಎಫ್‌ಸಿ ಅವಾರ್ಡ್ಸ್ ನೈಟ್‌ನಲ್ಲಿ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗುತ್ತದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಬುಧವಾರ ಪ್ರಕಟನೆಯಲ್ಲಿ ತಿಳಿಸಿದೆ.
ದೇಶದ ಎಲ್ಲ ಸ್ತರಗಳಲ್ಲಿ ಫುಟ್ಬಾಲ್‌ನ ಬೆಳವಣಿಗೆ ಹಾಗೂ ಉತ್ತೇಜನಕ್ಕೆ ನೀಡಿರುವ ಅದ್ಭುತ ಕೊಡುಗೆ, ವೃತ್ತಿಪರ ಆಡಳಿತವನ್ನು ಗಮನಿಸಿ ಸದಸ್ಯ ಅಸೋಸಿಯೇಶನ್ ಪ್ರಶಸ್ತಿ ನೀಡಲಾಗುತ್ತದೆ.
Next Story





