Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸರಕಾರಿ ಕಚೇರಿಗಳಲ್ಲೇಕೆ ರಾಷ್ಟ್ರಗೀತೆ...

ಸರಕಾರಿ ಕಚೇರಿಗಳಲ್ಲೇಕೆ ರಾಷ್ಟ್ರಗೀತೆ ಕಡ್ಡಾಯವಿಲ್ಲ?

ವಾರ್ತಾಭಾರತಿವಾರ್ತಾಭಾರತಿ1 Dec 2016 12:01 AM IST
share
ಸರಕಾರಿ ಕಚೇರಿಗಳಲ್ಲೇಕೆ ರಾಷ್ಟ್ರಗೀತೆ ಕಡ್ಡಾಯವಿಲ್ಲ?

ಹಿಂದೊಮ್ಮೆ ಕರ್ನಾಟಕದಲ್ಲೇ ರಾಷ್ಟ್ರಗೀತೆಯ ಹೆಸರಲ್ಲಿ ಸಣ್ಣದೊಂದು ವಿವಾದ ಸೃಷ್ಟಿಯಾಗಿತ್ತು. ಅಂದಿನ ಇನ್ಫೋಸಿಸ್ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗಿೀತೆಯನ್ನು ನುಡಿಸುವ ಬದಲು ಅದರ ಸಂಗೀತವನ್ನಷ್ಟೇ ನುಡಿಸಲಾಗಿತ್ತು. ಈ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರೂ ಸಂಗೀತಕ್ಕೆ ತಮ್ಮ ಧ್ವನಿ ಸೇರಿಸುತ್ತಿದ್ದರು. ಆದರೆ ನಾರಾಯಣ ಮೂರ್ತಿಯವರು ಮಾತ್ರ ರಾಷ್ಟ್ರಗೀತೆಗೆ ಸ್ಪಂದಿಸಿರಲಿಲ್ಲ. ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು 'ವಿದೇಶಿ ವಿದ್ಯಾರ್ಥಿಗಳೂ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮುಜುಗರವಾಗುತ್ತದೆ ಎನ್ನುವ ಕಾರಣಕ್ಕೆ ರಾಷ್ಟ್ರಗೀತೆಯನ್ನು ಹಾಡಿಸಿಲ್ಲ'' ಎಂದಿದ್ದರು. ನಾರಾಯಣ ಮೂರ್ತಿಯವರ ಈ ವರ್ತನೆಯ ವಿರುದ್ಧ ಕೆಲವರು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ರಾಷ್ಟ್ರಗೀತೆಯ ಕುರಿತಂತೆ ಈ ದೇಶದ ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗ ಯಾವ ರೀತಿಯ ಮನಸ್ಥಿತಿಯನ್ನು ಹೊಂದಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿತ್ತು.

ರಾಷ್ಟ್ರಗೀತೆಯನ್ನು ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಹಾಡುವುದು ಒಂದು ಐಚ್ಛಿಕವಾದಂತಹ ವಿಷಯ. ಶಾಲೆಗಳು ಮತ್ತು ಇನ್ನಿತರ ಸಾರ್ವಜನಿಕ ಸಮಾರಂಭಗಳಲ್ಲಿ ರಾಷ್ಟ್ರಗೀತೆಯನ್ನು ನುಡಿಸುವ ಪರಿಪಾಠವಿದೆ. ಹಾಗೆಂದು ಯಾವುದೇ ಸಮಾರಂಭ ರಾಷ್ಟ್ರಗೀತೆಯನ್ನು ನುಡಿಸದೇ ಇದ್ದರೆ ಅವರಿಗೆ ದೇಶಪ್ರೇಮ ಇಲ್ಲ ಎಂದು ಅರ್ಥವಲ್ಲ. ರಾಷ್ಟ್ರಗೀತೆಯನ್ನು ಹಾಡುವಾಗ ಅದಕ್ಕೆ ಕೆಲವು ನಿಯಮಗಳಿವೆ. ಅದನ್ನು ಪಾಲಿಸದೇ ಇದ್ದರೆ ಆ ಹಾಡಿಗೆ ಅಗೌರವ ನೀಡಿದಂತಾಗುತ್ತದೆ. ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ನಿಯಮಗಳನ್ನು ಪಾಲಿಸುವುದು ತೀರಾ ಕಷ್ಟವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶಭಕ್ತಿ ಈ ಒಂದು ಹಾಡನ್ನೇ ತಳಕು ಹಾಕಿಕೊಂಡಿಲ್ಲ. ನಮ್ಮ ದೈನಂದಿನ ವರ್ತನೆ, ಪ್ರಾಮಾಣಿಕತೆ, ಸತ್ಯಸಂಧತೆ, ದೇಶದ ಮೇಲಿರುವ ಬದ್ಧತೆಯೇ ಅಂತಿಮವಾಗಿ ನಮ್ಮ ದೇಶಭಕ್ತಿಗೆ ಪ್ರಮಾಣವೇ ಹೊರತು, ರಾಷ್ಟ್ರಗೀತೆ ಹಾಡಿದ ಬಳಿಕ ಓರ್ವ ಸರಕಾರಿ ಅಧಿಕಾರಿ ಬಡವನ ಕೈಯಿಂದ ಲಂಚ ಇಸಿದುಕೊಂಡರೆ ಆ ಗೀತೆಗೆ ಅವಮಾನ ಮಾಡಿದಂತೆಯೇ ಸರಿ.

ಸಿನೆಮಾ ಥಿಯೇಟರ್‌ಗಳಲ್ಲಿ ಚಿತ್ರ ಆರಂಭಕ್ಕೆ ಮುನ್ನ ಮತ್ತು ಮುಕ್ತಾಯವಾದ ಬಳಿಕ ಕಡ್ಡಾಯವಾಗಿ 'ರಾಷ್ಟ್ರಗೀತೆ'ಯನ್ನು ಹಾಡಬೇಕು ಎಂದು ಸುಪ್ರೀಂಕೋರ್ಟ್ ಇದೀಗ ಆದೇಶ ನೀಡಿದೆ. ಜೊತೆಗೆ, ಈ ವೇಳೆ ಚಿತ್ರಮಂದಿರದ ಎಲ್ಲಾ ಬಾಗಿಲುಗಳನ್ನು ಮುಚ್ಚಬೇಕು ಮತ್ತು ತೆರೆಯ ಮೇಲೆ ರಾಷ್ಟ್ರಧ್ವಜವನ್ನು ಪ್ರದರ್ಶಿಸಬೇಕು ಎಂದೂ ಸೂಚಿಸಿದೆ. ಸುಪ್ರೀಂಕೋರ್ಟ್ ಅನಿರೀಕ್ಷಿತವಾಗಿ ಇಂತಹದೊಂದು ಆದೇಶವನ್ನು ನೀಡಿದ ಉದ್ದೇಶ ಏನು ಎಂದು ತಿಳಿಯಲಾಗದೆ ದೇಶದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಸಿನೆಮಾ ಎಂದರೆ ಅದೊಂದು ದೇಶಪ್ರೇಮಿ ಕಾರ್ಯಕ್ರಮವೇ? ಅಥವಾ ಸಾರ್ವಜನಿಕವಾಗಿ ಒಂದು ಉಪಯುಕ್ತವಾದ ಸಾರ್ವಜನಿಕ ಸಮಾರಂಭವೇ? ಇಂದಿನ ಸಿನೆಮಾಗಳು ಮನರಂಜನೆಯ ಹೆಸರಿನಲ್ಲಿ ಪ್ರದರ್ಶಿಸುತ್ತಿರುವುದನ್ನು ನೋಡಿದರೆ, ನಿಜಕ್ಕೂ ಇಂತಹ ಸಿನೆಮಾಗಳ ಆರಂಭಕ್ಕೆ ಮುನ್ನ ರಾಷ್ಟ್ರಗೀತೆಯನ್ನು ನುಡಿಸುವುದು ಆ ಗೀತೆಗೆ ಮಾಡುವ ಅವಮಾನವಲ್ಲವೆ? ಎಂದು ಸಾರ್ವಜನಿಕರು ತಮಗೆ ತಾವೇ ಪ್ರಶ್ನಿಸುವಂತಾಗಿದೆ. ಇಂದು ಸಿನೆಮಾ ಥಿಯೇಟರ್‌ಗಳಿಗೆ ಆಗಮಿಸುವ ಜನರಲ್ಲಿ ಹಲವು ಬಗೆಯ, ಹಲವು ವರ್ಗಗಳಿಗೆ ಸೇರಿದ ಜನರಿದ್ದಾರೆ. ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಯಾವ ರೀತಿಯಲ್ಲಿ ವರ್ತಿಸಬೇಕು ಎಂದು ತಿಳಿಯದ ಹಳ್ಳಿಗಾಡಿನ ಜನರೂ ಇದ್ದಾರೆ. ಅವರೆಲ್ಲರೂ ಸಮಯ ಕಳೆಯುವುದಕ್ಕಾಗಿ ಚಿತ್ರಮಂದಿರಕ್ಕೆ ಬರುತ್ತಾರೆ. ಶಿಸ್ತು, ಸಾಕ್ಷರತೆ, ದೇಶಭಕ್ತಿ ಇತ್ಯಾದಿಗಳ ಪ್ರದರ್ಶನಗಳನ್ನು ಆ ಸಂದರ್ಭದಲ್ಲಿ ಅವರಿಂದ ನಿರೀಕ್ಷಿಸುವುದೇ ದುಬಾರಿಯಾಗುತ್ತದೆ. ಇಷ್ಟಕ್ಕೂ ಕೆಲವು ಚಿತ್ರಮಂದಿರಗಳಲ್ಲಿ ಅಶ್ಲೀಲ ಚಿತ್ರಗಳು ಪ್ರದರ್ಶನವಾಗುತ್ತವೆ. ಅವುಗಳಿಗೆ ಯಾವುದೇ ಬದ್ಧತೆಗಳೂ ಇರುವುದಿಲ್ಲ. ಇಂತಹ ಸಂದರ್ಭದಲ್ಲೂ ರಾಷ್ಟ್ರಗೀತೆಯ ಜೊತೆಗೆ ಅವುಗಳನ್ನು ಪ್ರದರ್ಶನಕ್ಕಿಡುವುದು ರಾಷ್ಟ್ರಗೀತೆಯನ್ನು ಅಣಕ ಮಾಡಿದಂತಾಗುವುದಿಲ್ಲವೇ? ನಮ್ಮ ಸುಪ್ರೀಂಕೋರ್ಟ್‌ನ ನ್ಯಾಯಪಂಡಿತರಿಗೆ ಇದೇಕೆ ಹೊಳೆಯಲಿಲ್ಲ?

ಚಿತ್ರಮಂದಿರಗಳಲ್ಲಿ ಸಾಧಾರಣವಾಗಿ ನಾಲ್ಕೈದು ಶೋಗಳಿರುತ್ತವೆ. ರಾತ್ರಿ ಹಗಲು ಚಿತ್ರ ಪ್ರದರ್ಶನ ನಡೆಯುತ್ತವೆ. ರಾತ್ರಿ, ಬಾಗಿಲು ಮುಚ್ಚಿ ಕತ್ತಲಲ್ಲಿ ರಾಷ್ಟ್ರಗೀತೆಯನ್ನು ಹಾಡುವುದು ಅದರ ನಿಯಮದ ಉಲ್ಲಂಘನೆ ಮಾಡಿದಂತಲ್ಲವೇ? ಈ ಕತ್ತಲಲ್ಲಿ ಯಾರ್ಯಾರು ನಿಯಮಗಳನ್ನು ಪಾಲಿಸುತ್ತಾರೆ, ಶಿಸ್ತಿನಿಂದ ಎದ್ದು ನಿಲ್ಲುತ್ತಾರೆ, ಯಾರು ಅಗೌರವಿಸುತ್ತಾರೆ ಎನ್ನುವುದನ್ನು ಪರೀಕ್ಷಿಸುವುದಕ್ಕೆ ಪೊಲೀಸ್ ಪೇದೆಗಳನ್ನು ನಿಲ್ಲಿಸುವುದಕ್ಕೆ ಸಾಧ್ಯವೇ? ಈ ಹಿಂದೆ ರಾಷ್ಟ್ರಗೀತೆಯ ಹೆಸರಿನಲ್ಲಿ ದುಷ್ಕರ್ಮಿಗಳು ಸಿನೆಮಾಮಂದಿರದಲ್ಲಿ ನಡೆಸಿರುವ ದಾಂಧಲೆಗಳನ್ನು ನಾವು ಗಮನಿಸಿದ್ದೇವೆ. ಓರ್ವ ಅಂಗವಿಕಲೆ ಮಹಿಳೆ ಕುರ್ಚಿಯಿಂದ ಎದ್ದು ನಿಲ್ಲಲಾಗದ ಸಂದರ್ಭದಲ್ಲಿ ದುಷ್ಕರ್ಮಿಗಳು ಆಕೆಗೆ ಮತ್ತು ಆಕೆಯ ಕುಟುಂಬಕ್ಕೆ ಬರ್ಬರವಾಗಿ ಥಳಿಸಿದ್ದಾರೆ. ಇಂಥ ಕೃತ್ಯಗಳಿಗೆ ಯಾರನ್ನು ಹೊಣೆ ಮಾಡಬೇಕು? ಇಂದು ದೇಶದಲ್ಲಿ ನಕಲಿ ದೇಶಭಕ್ತರ ಸಂಖ್ಯೆ ಹೆಚ್ಚಿದೆ. ರಾಜಕೀಯ ಕಾರಣಗಳಿಗಾಗಿ, ಸಮಾಜದ ಶಾಂತಿಯನ್ನು ಭಂಗಗೊಳಿಸುವುದಕ್ಕಾಗಿಯೇ ರಾಷ್ಟ್ರಗೀತೆ, ರಾಷ್ಟ್ರಧ್ವಜ ಮೊದಲಾದವುಗಳನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಸಿನೆಮಾ ಥಿಯೇಟರ್‌ಗಳಿಗೆ ಶಾಂತಿ ಭಂಗಕ್ಕಾಗಿಯೇ ಆಗಮಿಸುವವರಿಗೆ ಒಂದು ಕಾರಣವನ್ನು ಸ್ವತಃ ನ್ಯಾಯಾಲಯವೇ ಒದಗಿಸಿಕೊಟ್ಟಂತಾಗಿದೆ. ಸಾಧಾರಣವಾಗಿ ಸಿನೆಮಾ ಥಿಯೇಟರ್‌ನಲ್ಲಿ ಕುರ್ಚಿಗಾಗಿ ಜಗಳಗಳು ನಡೆಯುತ್ತಿದ್ದವು. ಇನ್ನು ಮುಂದೆ, ರಾಷ್ಟ್ರಗೀತೆಗೆ ಗೌರವ ನೀಡಲಿಲ್ಲ ಎಂದು ಹಲ್ಲೆ, ಹೊಡಿಬಡಿ ನಡೆದು, ಪರಸ್ಪರ ಕೇಸು ದಾಖಲಾಗಲಿವೆ. ಯಾರು ದೇಶಪ್ರೇಮಿಗಳು, ಯಾರು ದೇಶಪ್ರೇಮಿಗಳಲ್ಲ ಎನ್ನುವುದನ್ನು ಗಮನಿಸಲು ಅನೈತಿಕ ಪೊಲೀಸರು ಸಿನೆಮಾ ಥಿಯೇಟರ್‌ನೊಳಗೂ ಆಗಮಿಸುವ ಸಾಧ್ಯತೆಗಳಿವೆ. ಇವೆಲ್ಲಕ್ಕೂ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರೇ ಹೊಣೆಗಾರರಾಗುತ್ತಾರೆ. ಹಾಗೆಯೇ ಸಿನೆಮಾ ಥಿಯೇಟರ್‌ಗಳಲ್ಲಿ ರಾಷ್ಟ್ರಗೀತೆಗೆ ಅಗೌರವ ಸಲ್ಲಿಸಿದ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದಕ್ಕಾಗಿಯೇ ನ್ಯಾಯಾಲಯಗಳಲ್ಲಿ ಪ್ರತ್ಯೇಕ ವಿಭಾಗವೊಂದನ್ನು ತೆರೆಯಬೇಕಾದ ಸನ್ನಿವೇಶ ಎದುರಾಗುತ್ತದೆ. ಇರುವ ಪ್ರಕರಣಗಳನ್ನೇ ಇತ್ಯರ್ಥಗೊಳಿಸಲಾಗದೇ ಏದುಸಿರು ಬಿಡುತ್ತಿರುವ ನ್ಯಾಯಾಲಯ ಈ ಹೊಸ ಭಾರವನ್ನು ಅದು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X