ಸಂಕಷ್ಟಕ್ಕೆ ಸಿಲುಕಿದ ಸ್ಯಾಮ್ಸನ್

ಕೊಚ್ಚಿ, ಡಿ.1: ಭಾರತದ ಪರ ಏಕೈಕ ಟ್ವೆಂಟಿ-20 ಪಂದ್ಯವನ್ನು ಆಡಿರುವ ಕೇರಳದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇತ್ತೀಚೆಗೆ ನಡೆದ ಗೋವಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಅರೋಪದಲ್ಲಿ ಸ್ಯಾಮ್ಸನ್ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಶಿಸ್ತು ಕ್ರಮ ಎದುರಿಸುತ್ತಿದ್ದಾರೆ.
ಟೀಮ್ ಮ್ಯಾನೇಜ್‌ಮೆಂಟ್‌ಗೆ ಮಾಹಿತಿ ನೀಡದೇ ರಣಜಿ ಪಂದ್ಯ ನಡೆಯುತ್ತಿದ್ದ ಸ್ಟೇಡಿಯಂನಿಂದ ಹೊರ ನಡೆದಿದ್ದ ಸ್ಯಾಮ್ಸನ್ ತಂಡದ ಸಂಪರ್ಕಕ್ಕೂ ಲಭಿಸಿರಲಿಲ್ಲ.
ಕೇರಳ ಕ್ರಿಕೆಟ್ ಸಂಸ್ಥೆಯು ಸ್ಯಾಮ್ಸನ್‌ರ ಅಶಿಸ್ತಿನ ವರ್ತನೆಯ ತನಿಖೆ ನಡೆಸಲು ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಸಮಿತಿಯು ಸ್ಯಾಮ್ಸನ್ ತಂದೆ ದೂರವಾಣಿ ಸಂಭಾಷಣೆ ವೇಳೆ ಕೆಸಿಎ ಪದಾಧಿಕಾರಿಗಳೊಂದಿಗೆ ಅವಾಚ್ಯ ಶಬ್ದ ಬಳಸಿರುವ ಬಗ್ಗೆಯೂ ತನಿಖೆ ನಡೆಸಲಿದೆ.
Next Story





