ಉತ್ತರಾಖಂಡದಲ್ಲಿ ಭೂಕಂಪ
ಉ.ಭಾರತದಲ್ಲಿಯೂ ಕಂಪನ

ಹೊಸದಿಲ್ಲಿ,ಡಿ.1: ಗುರುವಾರ ರಾತ್ರಿ ಉತ್ತರಾಖಂಡವು ನಡುಗಿದ್ದು, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.2ರಷ್ಟಿತ್ತು. ಉತ್ತರ ಭಾರತದಾದ್ಯಂತ ಕಂಪನ ಅನುಭವಕ್ಕೆ ಬಂದಿತ್ತು.
ಭೂಕಂಪದ ಕೇಂದ್ರಬಿಂದು ಭಾರತ-ನೇಪಾಲ ಗಡಿ ಪ್ರದೇಶದಲ್ಲಿ, ಉತ್ತರಾಖಂಡದ ಸಮೀಪವಿರುವ ಧರ್ಚುಲಾದಲ್ಲಿ ಹತ್ತು ಕಿ.ಮೀ.ಆಳದಲ್ಲಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ. ದಿಲ್ಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಕಂಪನದ ಸ್ಪಷ್ಟ ಅನುಭವವಾಗಿದೆ. ಇತರ ಪ್ರದೇಶಗಳಲ್ಲಿಯೂ ಕಂಪನಗಳು ವರದಿಯಾಗಿವೆ.
ಚಂಪಾವತ್,ಶ್ರೀನಗರ,ಗಢ್ವಾಲ್ ಮತ್ತು ಅಲ್ಮೋರಾ ಸೇರಿದಂತೆ ಉತ್ತರಾಖಂಡದ ವಿವಿಧೆಡೆಗಳಲ್ಲಿ ಭೂಮಿಯು ನಡುಗಿದ್ದು, ಜನರು ಆತಂಕಕ್ಕೊಳಗಾಗಿದ್ದರು. 18 ನಿಮಿಷಗಳವರೆಗೂ ಪಶ್ಚಾತ್ ಕಂಪನಗಳು ಆಗುತ್ತಿದ್ದವಾದರೂ ಯಾವುದೇ ಹಾನಿ ವರದಿಯಾಗಿಲ್ಲ.
Next Story





