ಬೆಳ್ಳಿತೆರೆಗೆ ಸುನಿಲ್‌ಶೆಟ್ಟಿ ಪುತ್ರ

ಜನಪ್ರಿಯ ಬಾಲಿವುಡ್ ನಟ, ಕನ್ನಡಿಗ ಸುನಿಲ್ ಶೆಟ್ಟಿಯ ಪುತ್ರ ಅಹಾನ್ ಶೀಘ್ರದಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ತನ್ನ ಚೊಚ್ಚಲ ಚಿತ್ರಕ್ಕಾಗಿ ಈಗಾಗಲೇ ಲಂಡನ್‌ನಲ್ಲಿ ತರಬೇತಿ ಪಡೆಯುತ್ತಿರುವ ಅಹಾನ್ ಬಾಲಿವುಡ್‌ನಲ್ಲಿ ಭರವಸೆಯ ನಟನಾಗಲಿದ್ದಾನೆಂದು ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಬಾಲಿವುಡ್‌ನ ಹೆಸರಾಂತ ನಿರ್ದೇಶಕ ಸಾಜಿದ್ ನಡಿ ಯಾದ್‌ವಾಲಾ ನಿರ್ದೇಶನದ ಚಿತ್ರದ ಮೂಲಕ ಅಹಾನ್ ಬೆಳ್ಳಿತೆರೆ ಪ್ರವೇಶಿಸಲಿದ್ದಾರೆ. ಅಂದಹಾಗೆ ಅಹಾನ್ ಸಹೋದರಿ ಅತಿಯಾ ಕೂಡಾ ಬಾಲಿವುಡ್‌ನಲ್ಲಿ ಈಗಾಗಲೇ ತನ್ನ ಅದೃಷ್ಟ ಪರೀಕ್ಷಿಸಿದ್ದಾಳೆ. ಆಕೆ ನಟಿಸಿದ್ದ ‘ಹೀರೋ’ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಚಿತ್ರ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಅತಿಯಾಳ ಅಭಿನಯ ಪ್ರತಿಭೆಯ ಬಗ್ಗೆ ಒಳ್ಳೆಯ ಪ್ರಶಂಸೆಯ ಮಾತುಗಳು ಕೇಳಿಬಂದಿದ್ದವು.
ಚಿತ್ರರಂಗಕ್ಕೆ ಕಾಲಿಡುತ್ತಿರುವ ತನ್ನ ಪುತ್ರ ಅಹಾನ್‌ಗೆ ತಂದೆ ಸುನಿಲ್ ಶೆಟ್ಟಿ ಕೆಲವೊಂದು ಬುದ್ಧಿಮಾತುಗಳನ್ನು ಕೂಡಾ ಹೇಳಿದ್ದಾರೆ. ಓರ್ವ ಯಶಸ್ವಿ ನಟನಾಗಬೇಕಾದರೆ ಆತ ಯಾವತ್ತೂ ನೆಲದ ಮೇಲಿರಬೇಕೆಂದು ಟ್ವಿಟರ್‌ನಲ್ಲಿ ಹಿತವಚನ ಹೇಳಿದ್ದಾರೆ.





