ಹೆಂಡತಿಯ ಶೀಲ ಶಂಕಿಸಿ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪಿಗೆ ಜೈಲು
ಚಿಕ್ಕಮಗಳೂರು, ಡಿ.2: ಹೆಚ್ಚಿಗೆ ವರದಕ್ಷಿಣೆ ಕೊಟ್ಟಿಲ್ಲವೆಂದು ಹಾಗೂ ಹೆಂಡತಿಯ ಶೀಲವನ್ನು ಶಂಕಿಸಿ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ,2ನೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಶಿವನಿ ಹೋಬಳಿ ಕೆಂಚಾಪುರ ಗ್ರಾಮದ ವಾಸಿ ರಾಜಶೇಖರಯ್ಯನಿಗೂ ಹಾಗೂ ಮೃತ ಜ್ಯೋತಿಗೂ 3 ವರ್ಷಗಳ ಹಿಂದೆ ಮದುವೆಯಾಗಿ 3 ರಿಂದ 4 ತಿಂಗಳು ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು. ನಂತರ ಆರೋಪಿ ರಾಜಶೇಖರಯ್ಯ ತನ್ನ ಹೆಂಡತಿ ಜ್ಯೋತಿಯ ಶೀಲದ ಬಗ್ಗೆ ಶಂಕಸಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೊಡುತ್ತಿದ್ದುದಲ್ಲದೆ ಹೆಚ್ಚಿನ ವರದಕ್ಷಿಣೆ ತರಬೇಕೆಂದು ಪೀಡಿಸುತ್ತಿದ್ದನು.
ಈ ಹಿನ್ನೆಲೆ 2014 ಎ.2 ರಂದು ಗಂಡನ ಹಿಂಸೆ ತಾಳಲಾರದೆ ಜ್ಯೋತಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಜ್ಜಂಪುರ ಪೋಲಿಸ್ ಠಾಣೆಪ್ರಕರಣವನ್ನು ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ 2ನೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ರಾಜಶೇಖರಯ್ಯನಿಗೆ 6 ತಿಂಗಳು ಜೈಲು ಶಿಕ್ಷೆ ಹಾಗೂ 30ಸಾವಿರ ರೂ. ದಂಡ ಮತ್ತು ಕಲಂ 306ರ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ಮೃತ ಜ್ಯೋತಿ ತಂದೆ ತಾಯಿಗೆ ನೀಡಬೇಕೆಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.







