ಸುಂಟಿಕೊಪ್ಪ: ವಿದ್ಯುತ್ ತಂತಿ ತಗಲಿ ಯುವಕ ಸಾವು
ಸುಂಟಿಕೊಪ್ಪ, ಡಿ.2: ತನ್ನ ಸ್ವಂತ ಮನೆಯ ಕಾಮಗಾರಿ ನಿರ್ವಹಿಸುತ್ತಿದ್ದ ಸಂದಭರ್ದಲ್ಲಿ ಆಕಸ್ಮಿಕ ವಾಗಿ ವಿದ್ಯುತ್ ತಂತಿ ತಗಲಿ ಯುವಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಗದ್ದೆಹಳ್ಳದ ನಾರ್ಗಾಣೆ ಗ್ರಾಮದ ದಿವಗಂತ ಥೋಮಸ್ ಅವರ ಪುತ್ರ ಸಬಾಸ್ಟೀನ್ (24) ಶುಕ್ರವಾರ ಬೆಳಗ್ಗೆ ತಮ್ಮ ಸ್ವಂತ ಮನೆಯ ಸ್ನಾನಗೃಹದ ಕಾಮಗಾರಿ ನಿರ್ವಹಿಸುತ್ತಿದ್ದಾಗ ಸಿಮೆಂಟ್ ಇಟ್ಟಿಗೆಯನ್ನು ಯಂತ್ರದಲ್ಲಿ ತುಂಡರಿಸುವ ಸಂದಭರ್ದಲ್ಲಿ ಆಕಸ್ಮಿಕವಾಗಿ ಅವರಿಗೆ ವಿದ್ಯುತ್ ಸ್ಪರ್ಶಗೊಂಡಿದೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ನೀಡುವ ಸಂದಭರ್ ಸಾವನ್ನಪ್ಪಿದ್ದಾರೆ. ಸಬಾಸ್ಟೀನ್ ತಂದೆ 6 ತಿಂಗಲ ಹಿಂದೆ ನಿಧರಾದ್ದರು. ಈ ಅವಿವಾಹಿತ ಮಗನ ಅಗಲಿಕೆಯಿಂದ ಕುಟುಂಬ ವರ್ಗದವರು ದುಃಖದ ಕಡಲಿನಲ್ಲಿ ಮುಳುಗಿ ದ್ದಾರೆ.
Next Story





