Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಇಂದು ವಿಕಲಚೇತನರ ದಿನಾಚರಣೆ: ಶೇ.40ರಷ್ಟು...

ಇಂದು ವಿಕಲಚೇತನರ ದಿನಾಚರಣೆ: ಶೇ.40ರಷ್ಟು ವಿಕಲಚೇತನರಿಗೆ ಗುರುತಿನ ಚೀಟಿಯಿಲ್ಲ

-ಮಂಜುನಾಥ ದಾಸನಪುರ-ಮಂಜುನಾಥ ದಾಸನಪುರ2 Dec 2016 11:48 PM IST
share
ಇಂದು ವಿಕಲಚೇತನರ ದಿನಾಚರಣೆ: ಶೇ.40ರಷ್ಟು ವಿಕಲಚೇತನರಿಗೆ ಗುರುತಿನ ಚೀಟಿಯಿಲ್ಲ

ಬೆಂಗಳೂರು, ಡಿ.2: ಸಮಾಜದ ಅಲಕ್ಷಕ್ಕೆ ಒಳಗಾದ ಸಮುದಾಯಗಳಲ್ಲಿ ವಿಕಲಚೇತನರೇ ಮೊದಲಿಗರಾಗಿದ್ದಾರೆ. ಮನೆಯವರಿಂದಲೇ ನಿರ್ಲಕ್ಷ, ಉದಾಸೀನತೆ, ಅವಮಾನಕ್ಕೆ ಒಳಗಾದ ಅನೇಕ ವಿಕಲಚೇತನರು ಇಂದಿಗೂ ಸಂಘ, ಸಂಸ್ಥೆಗಳ ಆಶ್ರಯದಲ್ಲೇ ಬದುಕನ್ನು ಕಟ್ಟಿಕೊಂಡಿದ್ದಾರೆ.
ನಮ್ಮ ರಾಜ್ಯವೊಂದರಲ್ಲಿಯೇ ಸುಮಾರು 13.24ಲಕ್ಷ ವಿಕಲಚೇತನರಿದ್ದು, ಶೇ.40ರಷ್ಟು ನಗರ ಪ್ರದೇಶದಲ್ಲಿ, ಶೇ.60ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ನೆಲೆಸಿದ್ದಾರೆ. ಇದರಲ್ಲಿ ಶೇ.65ರಷ್ಟು ಮಂದಿ ಮಾತ್ರ ವಿಕಲಚೇತನರ ಗುರುತಿನ ಚೀಟಿ ಹೊಂದಿದ್ದಾರೆ. ಆದರೆ, ಶೇ.40ರಷ್ಟು ಮಂದಿಗೆ ಮಾಹಿತಿ ಕೊರತೆ, ಸಂಬಂಧಿಸಿದ ಅಧಿಕಾರಿಗಳ ಉದಾಸೀನತೆಯಿಂದಾಗಿ ಸರಕಾರದ ನ್ಯಾಯಯುತ ಸೌಲಭ್ಯಗಳು ಸಿಗುತ್ತಿಲ್ಲ.
 ವಿಕಲಚೇತನರ ಸಬಲಿಕರಣಕ್ಕೆ ಸರಕಾರಗಳು ಹತ್ತಾರು ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಮುಖ್ಯವಾಗಿ ‘ಮಾಸಿಕ ಭತ್ತೆ’ ಪ್ರಮುಖ ಯೋಜನೆಯಾಗಿದೆ. ಆದರೆ, ಮಾಹಿತಿಯ ಕೊರತೆಯಿಂದಾಗಿ 13ಲಕ್ಷಕ್ಕಿಂತಲೂ ಹೆಚ್ಚಿರುವ ವಿಕಲಚೇತನರಲ್ಲಿ ಕೇವಲ 7ಲಕ್ಷ ಮಂದಿ ಮಾಸಿಕ ಭತ್ತೆ ಪಡೆಯುತ್ತಿದ್ದಾರೆ. ಈ ಸೌಲಭ್ಯವು ಪ್ರತಿಯೊಬ್ಬ ವಿಕಲಚೇತನರಿಗೂ ತಲುಪಿಸುವ ಕೆಲಸವಾಗಬೇಕಿದೆ.
ಪೋಲಿಯೋ ಹಾಗೂ ಕುಷ್ಟ ರೋಗ ನಿವಾರಣೆಯಲ್ಲಿ ರಾಜ್ಯ ಸರಕಾರ ಯಶಸ್ವಿಯಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾಕಷ್ಟು ಬೆಳವಣಿಗೆಯಾಗಿದ್ದು, ಪ್ರತ್ಯೇಕವಾದ ಕಾರ್ಯನೀತಿಯನ್ನು ಹೊಂದಿದ್ದು, ಸುಮಾರು 1000ಕೋಟಿ ರೂ.ಗೂ ಹೆಚ್ಚು ಹಣವನ್ನು ವಿಕಲಚೇತನರಿಗೆ ಮೀಸಲಿಟ್ಟಿದೆ.

13ಲಕ್ಷ ಜನಸಂಖ್ಯೆಯಿರುವ ಅಂಗವಿಕಲರ ಸಮಸ್ಯೆಗಳು ವಿವಿಧ ಬಗೆಯವು. ಅಂಗವಿಕಲತೆ ಸಮಸ್ಯೆಗಳಿಗೆ ಸ್ಪಂದಿಸುವ ಪ್ರತ್ಯೇಕ ತರಬೇತಿ ಹೊಂದಿದ ಪರಿಣಿತರ ಅಗತ್ಯವಿದೆ. ಅಂಗವಿಕಲತೆಯನ್ನು ಆರಂಭದಲ್ಲೇ ಪತ್ತೆ ಹಚ್ಚುವವರು ಹಾಗೂ ಸರಕಾರಿ ಸೌಲಭ್ಯಗಳ ಮಾಹಿತಿ ತಲುಪಿಸಲು ಸಾಮಾಜಿಕ ಕಾರ್ಯಕರ್ತರ ಅವಶ್ಯಕತೆಯಿದೆ. ರಾಜ್ಯದಲ್ಲಿ ಅಂಗವಿಕಲ ಕ್ಷೇತ್ರವನ್ನು ಗಮನಿಸಿದಾಗ ಸುಮಾರು 300-350 ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದು ಹದಿಮೂರು ಲಕ್ಷವಿರುವ ವಿಕಲಚೇತನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಬಹಳಷ್ಟು ಪ್ರಯತ್ನ ಪಡುತ್ತಿದ್ದರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಸಂಪೂರ್ಣವಾಗಿ ವೈದ್ಯರನ್ನು ನೇಮಿಸಲು ಸಾಧ್ಯವಾಗುತ್ತಿಲ್ಲ. ಇನ್ನು ತೀವ್ರತರ ಆರೋಗ್ಯದ ಸಮಸ್ಯೆಗಳಾದ ಮೆದುಳುವಾತ, ಬುದ್ಧಿಮಾಂದ್ಯತೆ, ಬಹುವಿಧ ಮತ್ತು ಆಟಿಸಂ ಹೊಂದಿರುವ ಅಂಗವಿಕಲರಿಗೆ ನ್ಯಾಷನಲ್ ಟ್ರಸ್ಟ್ ಆಕ್ಟ್ ಮೂಲಕ ನಿರಮಯ ಆರೋಗ್ಯವಿಮೆ ಪಡೆಯಲು ಸಂಘ, ಸಂಸ್ಥೆಗಳ ಮೊರೆ ಹೋಗಬೇಕಾದ ಅನಿವಾರ್ಯತೆಯಿದೆ. ರಾಜ್ಯದಲ್ಲಿ ಸುಮಾರು 3.60ಲಕ್ಷ ಅಂಗವಿಕಲರು ತೀವ್ರತರ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂಗವಿಕಲರು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು ಅಗತ್ಯ. ಆದರೆ, ಔದ್ಯೋಗಿಕ ಕ್ಷೇತ್ರದಲ್ಲಿ ಅಂಗವಿಕಲರ ಪರಿವಾಗಿರುವಂತಹ ಬದಲಾವಣೆಗಳು ಆಗಿಲ್ಲ. ಸಂಸತ್‌ನಲ್ಲಿ ಮಂಡಿಸಲಾದ ಮಾಹಿತಿಯ ಪ್ರಕಾರ ನಮ್ಮ ದೇಶದಲ್ಲಿ ಶೇ.34ವಿಕಲಚೇತನರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಉಳಿದ ಶೇ.66ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಇತ್ತೀಚೆಗೆ ಕೆಲವು ಸಂಸ್ಥೆಗಳು ನಿರುದ್ಯೋಗಿ ಅಂಗವಿಕಲರಿಗೆ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಾಭಿಮಾನಿಗಳನ್ನಾಗಿ ರೂಪಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಕರ್ನಾಟಕ ಅಂಗವಿಕಲರ ಸಂಖ್ಯೆ
ದೃಷ್ಟಿನ್ಯೂನತೆ-264170, ವಾಕ್-ಶ್ರವಣ ನ್ಯೂನತೆ-326432, ದೈಹಿಕ-271982, ಬುದ್ಧಿ ಮಾಂದ್ಯರು-93974, ಮಾನಸಿಕ ಅಸ್ವಸ್ಥತೆ-20913, ಇತರೆ-246721, ಬಹುವಿಧ-100013 ವಿಕಲಚೇತನರು ಹೊಂದಿದ್ದಾರೆ.

share
-ಮಂಜುನಾಥ ದಾಸನಪುರ
-ಮಂಜುನಾಥ ದಾಸನಪುರ
Next Story
X