Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾದಕ ವ್ಯಸನದ ಅಮಲಿನಲ್ಲಿ ಯುವಜನತೆ!

ಮಾದಕ ವ್ಯಸನದ ಅಮಲಿನಲ್ಲಿ ಯುವಜನತೆ!

ಸಿನಾನ್ ಇಂದಬೆಟ್ಟುಸಿನಾನ್ ಇಂದಬೆಟ್ಟು2 Dec 2016 11:54 PM IST
share
ಮಾದಕ ವ್ಯಸನದ ಅಮಲಿನಲ್ಲಿ ಯುವಜನತೆ!

ನಮ್ಮದು ಯುವಕರ ದೇಶ. ಅನ್ಯರೂ ಹೊಟ್ಟೆಕಿಚ್ಚು ಪಟ್ಟುಕೊಳ್ಳುವಷ್ಟು ಯುವ ಸಮೂಹ ನಮ್ಮಲ್ಲಿದೆ. ದೇಶದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಯುವಕರೇ ತುಂಬಿದ್ದಾರೆ. ಭಾರತದ ಯುವ ಸಮೂಹವನ್ನು ಕಂಡು ಸ್ವತಃ ಚೀನೀಯರೇ ತಮ್ಮ ಕುಟುಂಬ ಯೋಜನೆಯಲ್ಲೇ ಬದಲಾವಣೆ ತಂದಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಭಾರತೀಯ ಯುವಕರಿಗೆ ಎಲ್ಲಿಲ್ಲದ ಬೇಡಿಕೆ. ಯುವ ಶಕ್ತಿಯ ಮೇಲೆ ಭಾರತ ಅಪಾರ ಭರವಸೆ ಹೊಂದಿದೆ. ಸುಭದ್ರ ಸದೃಢರಾಷ್ಟ್ರವನ್ನು ಕಟ್ಟಲು ಯುವಕರ ಪಾತ್ರ ಬಹು ಮುಖ್ಯವಾದುದು. ಆದರೆ ಯಾವ ಯುವಶಕ್ತಿ ಮುಂದೆ ದೇಶವನ್ನಾಳಬೇಕೋ, ಯಾವ ಯುವಕರು ದೇಶದ ಆಸ್ತಿಯಾಗಬೇಕೋ ಅದೇ ಯುವಜನತೆ ಮಾದಕ ಪದಾರ್ಥಗಳ ನಶೆಯಲ್ಲಿ ತೇಲಾಡುತ್ತಿದೆ!

‘ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್’ ಅನ್ನುತ್ತಾರೆ. ಕಾಲೇಜು ಜೀವನ ಒಬ್ಬನ ಜೀವನದ ಪ್ರಮುಖಘಟ್ಟ. ಜ್ಞಾನದೊಂದಿಗೆ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವ ಸಮಯವದು. ಕಾಲೇಜು ದೇಶದ ಭವಿಷ್ಯದ ಪ್ರಜೆಗಳನ್ನು ಸೃಷ್ಟಿ ಮಾಡಿ ಸಮೃದ್ಧ ಭಾರತದ ಕನಸಿಗೆ ಪುಷ್ಟಿ ನೀಡುವ ಕಾರ್ಖಾನೆ. ಆದರೆ ಅದೇ ಕಾಲೇಜು ಕ್ಯಾಂಪಸ್‌ಗಳು ಮಾದಕ ದ್ರವ್ಯಗಳ ಅಡ್ಡೆಗಳಾಗುತ್ತಿವೆ. ಚಾಕಲೆಟ್ ಕೊಂಡಂತೆ ಸುಲಭವಾಗಿ ಕಿಕ್ಕು ಬರಿಸುವ ವಸ್ತುಗಳು ವಿದ್ಯಾರ್ಥಿಗಳ ಕೈಸೇರುತ್ತಿವೆ. ಅದರ ಹಿಂದೆ ವ್ಯವಸ್ಥಿತವಾದ ಜಾಲವೇ ಇದೆ. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಅವರನ್ನು ಬಲಿಪಡೆಯುತ್ತಿದೆ.

ವರದಿಯೊಂದರ ಪ್ರಕಾರ ಮಾದಕ ವ್ಯಸನಿಗಳಲ್ಲಿ ಶೇ. ಐವತ್ತಕ್ಕೂ ಹೆಚ್ಚು ಹತ್ತರಿಂದ ಇಪ್ಪತ್ತು ವರ್ಷದೊಳಗಿನ ವಿದ್ಯಾರ್ಥಿಗಳೇ ಇದ್ದಾರೆ! ದಿನದಿನಕ್ಕೆ ಕೋರ್ಸುಗಳು, ಪದವಿಗಳು, ತೆಗೆದುಕೊಳ್ಳುವ ಅಂಕಗಳ ಸಂಖ್ಯೆ ಹೆಚ್ಚಾಗುವುದಕ್ಕಿಂತ ವೇಗವಾಗಿ ಮಾದಕದ್ರವ್ಯಗಳ ಚಟಕ್ಕೆ ಬಲಿಯಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಗೆಳೆಯರೊಂದಿಗೆ ಮೋಜಿಗಾಗಿ ಅಂಟಿಕೊಂಡ ಚಟ, ಜೀವನ ಪರ್ಯಂತ ಅಮಲಿಗೆ ದಾಸರಾಗಿ ಚಟ್ಟ ಸೇರುವವರೆಗೂ ಅವರನ್ನು ಬಿಡುವುದಿಲ್ಲ. ಕುತೂಹಲಕ್ಕಾಗಿ ಗೆಳೆಯರೊಂದಿಗೆ ಸೇರಿ ಸೇದಿದ ಸಿಗರೆಟ್, ಹಬ್ಬ ಹರಿದಿನಗಳಲ್ಲಿ ಸಂಬಂಧಿಕರೊಂದಿಗೆ ಸಾಮಾನ್ಯವೆಂಬಂತೆ ಕುಡಿದ ಬಿಯರಿನ ರುಚಿಯು ನಂತರ ಗುಟ್ಕಾ, ಗಾಂಜಾ, ಚರಸ್, ಹೆರಾಯಿನ್, ಕೊಕೇನ್, ಹನ್ಸ್, ಸ್ಪಿರಿಟ್‌ಮುಂತಾದ ಮಾದಕ ವಸ್ತುಗಳನ್ನು ಸೇವಿಸಲು ಪ್ರೆರೇಪಿಸುತ್ತದೆ. ಒಮ್ಮೆ ರುಚಿ ಹತ್ತಿದರೆ ಅವುಗಳ ಬೆನ್ನು ಬಿದ್ದು, ಅಮಲಿಗೆ ದಾಸರಾಗಿ ತಮ್ಮ ಅಮೂಲ್ಯ ವಿದ್ಯಾರ್ಥಿ ಜೀವನಕ್ಕೆ ತಾವೇ ತಮ್ಮ ಕೈಯ್ಯೆರೆ ಕೊಳ್ಳಿ ಇಡುತ್ತಿದ್ದಾರೆ.

ಓದಲೆಂದು ದೂರದೂರುಗಳಿಂದ ಬಂದು ಹಾಸ್ಟೆಲ್, ಮೆಸ್‌ಗಳಲ್ಲಿ ಉಳಿಯುವ ವಿದ್ಯಾರ್ಥಿಗಳು ಬೇಗನೆ ದುರ್ವ್ಯಸನಗಳಿಗೆ ಬಲಿಯಾಗುತ್ತಾರೆ. ಮನೆಯಿಂದ ಪಾಕೆಟ್ ಮನಿಗೆಂದು ನೀಡಿದ ಹಣದಿಂದ ಮಾದಕ ಪದಾರ್ಥಗಳನ್ನು ಕೊಂಡು ಅಮಲೇರಿಸಿಕೊಳ್ಳುತ್ತಾರೆ. ದುಶ್ಚಟಗಳನ್ನು ಮೈಗೂಡಿಸಿಕೊಂಡು ಅಮಲಿನಲ್ಲಿ ತೂರಾಡುತ್ತಾರೆ. ಡ್ರಗ್ಸ್ ಖರೀದಿಸಲು ಹಣವಿಲ್ಲದೆ ಕೈ ಬರಿದಾದಾಗ ಆ ಕಡೆ ಡ್ರಗ್ಸ್ ಖರೀದಿಸಲಾಗದೆ ಈ ಕಡೆ ವ್ಯಸನದಿಂದ ಹೊರ ಬರಲೂ ಆಗದೆ ನಶೆ ತೀರಿಸಿಕೊಳ್ಳಲು ಮಣ್ಣನ್ನೂ ತಿನ್ನುವವರಿದ್ದಾರೆ. ಯಾವ ತಂಬಾಕಿನ ಸೊಪ್ಪನ್ನು ಆಡುಕೂಡ ಮುಟ್ಟುವುದಿಲ್ಲವೋ ಆ ಸೊಪ್ಪಿನಿಂದ ನಮ್ಮ ಯುವಕರು ವಿವಿಧ ಶೈಲಿಗಳಲ್ಲಿ ಹೊಗೆ ಬಿಡುವುದನ್ನು ಕಂಡಾಗ ಯುವಜನತೆ ಎತ್ತಸಾಗುತ್ತಿದೆ ಎಂಬ ಭಯವುಂಟಾಗುತ್ತದೆ.

ಮೊದಲಿಗೆ ಗಿರಾಕಿಗಳನ್ನು ಸೆಳೆಯಲು ಉಚಿತವಾಗಿ ಅಥವಾ ಕಡಿಮೆ ಬೆಲೆಯಲ್ಲಿ ನಾನಾ ಮಾದಕ ದ್ರವ್ಯಗಳನ್ನು ಕೊಟ್ಟು ಕುತೂಹಲ ಕೆರಳಿಸಿ, ಅವರನ್ನು ವ್ಯಸನಿಗಳನ್ನಾಗಿ ಮಾಡಿ ಬಳಿಕ ಬಡ್ಡಿ ಸಮೇತ ಸುಲಿಗೆ ಮಾಡುತ್ತಾರೆ. ವಿದ್ಯಾಸಂಸ್ಥೆಗಳ ಬಳಿ ಮಾದಕ ಪದಾರ್ಥಗಳು ಮಾರಾಟ ಮಾಡಬಾರದೆಂಬ ಕಠಿಣ ಕಾನೂನಿದ್ದರೂ ಅವೆಲ್ಲಾ ಗಾಳಿಯಲ್ಲಿ ತೂರಾಡುತ್ತಿವೆ. ಪೊಲೀಸ್ ಠಾಣೆಗಳ ಬಳಿಯಲ್ಲೇ ಡ್ರಗ್ಸ್ ಮಾಫಿಯ ನಡೆಯುತ್ತಿದ್ದರೂ ಪೊಲೀಸರು ನಶೆ ಏರಿಸಿಕೊಂಡವರಂತೆ ಸುಮ್ಮನೆ ಕುಳಿತಿದ್ದಾರೆ. ಡ್ರಗ್ಸ್ ಜಾಲ ಆಳವಾಗಿ ಬೀಡುಬಿಟ್ಟು, ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಿ ಡ್ರಗ್ಸ್ ಡಾನ್‌ಗಳು ಮೆರೆಯುತ್ತಿದ್ದರೂ ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಅಬಕಾರಿ ಸಚಿವರಂತೂ ‘‘ಕ್ವಾಲಿಟಿ ಮದ್ಯ ಕುಡಿಯಿರಿ’’ ಎಂದು ಪುಕ್ಕಟೆ ಸಲಹೆ ಕೂಡ ಕೊಟ್ಟಿದ್ದಾರೆ!

ಮಾದಕ ವ್ಯಸನಗಳಿಗೆ ದಾಸನಾದನೆಂದರೆ ಕಾಸು ಕೊಟ್ಟು ರೋಗಗಳನ್ನು ಕೊಂಡಂತೆ. ಒಂದು ದಿವಸ ಅಮಲೇರಿಸಿಕೊಳ್ಳದಿದ್ದರೆ ಸರಿಯಾಗಿ ನಿದ್ದೆಕೂಡ ಹತ್ತುವುದಿಲ್ಲ. ದೈಹಿಕವಾಗಿ ದುರ್ಬಲನಾಗಿ ಹಲವು ರೋಗಗಳಿಗೆ ತುತ್ತಾಗುತ್ತಾರೆ. ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಮೆದುಳು, ಹೃದಯ ಸಂಬಂಧಿ ಕಾಯಿಲೆಗಳು, ನಪುಂಸಕತ್ವ, ರಕ್ತದೊತ್ತಡ ಹೀಗೆ ಹಲವು ಮಾರಕ ರೋಗಗಳಿಗೆ ಆಧಿಪತಿಯಾಗುತ್ತಾನೆ.ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಂತಹ ಹಲವು ಪ್ರಸಂಗಗಳು ನಮ್ಮ ಕಣ್ಣ ಮುಂದೆಯೇ ಇದೆ.

ಇಂದಿನ ಯುವಜನತೆ ಹಲವಾರು ಕ್ಷೇತ್ರಗಳಲ್ಲಿ ಬುದ್ಧಿವಂತರಾಗಿದ್ದರೂ, ದುಶ್ಚಟಗಳು ಅವರನ್ನು ಅವನತಿಯ ಹಂತಕ್ಕೆ ತಲುಪಿಸಿದೆ. ಮೋಜಿನ ಹೆಸರಿನಲ್ಲಿ ಕ್ಷಣಿಕ ತೃಪ್ತಿಗಾಗಿ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾವ ಉದ್ದೇಶಕ್ಕಾಗಿ ಕಾಲೇಜು ಸೇರಿದರೋ ಆ ಉದ್ದೇಶವನ್ನು ಮರೆತು ಚಟದಾಸರಾಗಿ ಪೋಷಕರ ಕನಸುಗಳಿಗೆ ಎಳ್ಳುನೀರು ಬಿಟ್ಟು ಇಡೀ ಕುಟುಂಬವನ್ನೇ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುತಿದ್ದಾರೆ. ‘‘ನನಗೆ ನೂರು ಶಕ್ತ ಯುವಕರನ್ನು ಕೊಡಿ ಇಡೀ ದೇಶದ ಚಿತ್ರಣವನ್ನೇ ಬದಲಾಯಿಸಬಲ್ಲೆ’’ ಎಂದು ವಿವೇಕಾನಂದರು ಘರ್ಜಿಸಿದ ನಾಡಿನ ಯುವಕರು ಮತ್ತೇರಿಸಿಕೊಂಡು ಅಬ್ಬೇಪಾರಿಗಳಂತೆ ಅಲೆಯುತ್ತಿದ್ದಾರೆ.

ಬದುಕೆಂಬ ಆಟ ನಮ್ಮಿಷ್ಟದಂತೆ ಯಾವತ್ತೂ ಇರುವುದಿಲ್ಲ. ಅಲ್ಲಿ ಹಲವು ತಿರುವುಗಳು ಇರುತ್ತವೆ. ಜೀವನದ ಒಂದು ಕೆಟ್ಟ ಘಳಿಗೆಯಲ್ಲಿ ಅಂಟಿಕೊಂಡ ದುಶ್ಚಟ ಕ್ಷಣಿಕ ತೃಪ್ತಿ ನೀಡಬಲ್ಲುದೇ ಹೊರತು ನಮ್ಮ ಬದುಕಿಗೆ ಸ್ಫೂರ್ತಿಯನ್ನು ನೀಡಲಾರದು. ನಾಳಿನ ಬದುಕಿನ ಮುನ್ನುಡಿಯನ್ನು ಬರೆಯಬೇಕಾದ ಯುವಕರು ದೇಶಕಟ್ಟುವ ಕಾಯಕದಲ್ಲಿ ತೊಡಗಬೇಕು. ಇಲ್ಲ ಸಲ್ಲದ ಚಟಗಳಿಗೆ ಬಲಿಯಾಗುವುದಕ್ಕಿಂತ ಮುಂಚೆ ನಮ್ಮ ಭವಿಷ್ಯದ ಕನಸುಗಳು, ನಮ್ಮ ಮೇಲಿನ ತಂದೆತಾಯಿಯ ಭರವಸೆಗಳು, ನಾವೇ ಮಾಡಬೇಕಾದ ಹಲವಾರು ಕೆಲಸಗಳ ಬಗ್ಗೆ ಆಲೋಚಿಸಬೇಕು. ನಮ್ಮ ಜೀವನ ಕಲ್ಲಿನ ಮೇಲೆ ಬರೆದ ಹೆಸರಾಗಬೇಕೇ ಹೊರತು ಮರಳಿನ ಮೇಲೆ ಬರೆದ ಹೆಸರಾಗಿರಬಾರದು. ದೇಶಕ್ಕಾಗಿ ಯುವಕರು ಮಾಡಬೇಕಾದ ಕೆಲಸ ಸಾಕಷ್ಟಿವೆ. ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಡ್ರಗ್ಸ್‌ನಂತಹ ಹಲವು ಪೀಡೆಗಳ ಸಮಾಧಿಯ ಮೇಲೆ ಸದೃಢ ಸಮೃದ್ಧ ಭಾರತವನ್ನು ಕಟ್ಟಬೇಕಾಗಿದೆ.

share
ಸಿನಾನ್ ಇಂದಬೆಟ್ಟು
ಸಿನಾನ್ ಇಂದಬೆಟ್ಟು
Next Story
X