ಹಿರಿಯಡ್ಕದಲ್ಲಿ ಪೋಕ್ಸೊ ಕಾಯಿದೆ ಮಾಹಿತಿ ಶಿಬಿರ
ಉಡುಪಿ, ಡಿ.2: ಮಕ್ಕಳು ದೇವರಿಗೆ ಸಮಾನ ಎಂದು ಹೇಳುವ ನಮ್ಮ ಸಮಾಜದಲ್ಲಿ ಅದೇ ಮಕ್ಕಳನ್ನು ಲೈಂಗಿಕ ಉದ್ದೇಶಕ್ಕೆ ಬಳಸುವ ಸಾಕಷ್ಟು ಮಂದಿ ನಮ್ಮ ಸುತ್ತಮುತ್ತಲೂ ಇದ್ದಾರೆ. ಇವರಿಂದ ಮಕ್ಕಳನ್ನು ರಕ್ಷಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಬೊಮ್ಮಾರಬೆಟ್ಟು ಗ್ರಾಪಂ ಅಧ್ಯಕ್ಷೆ ಮಾಲತಿ ಬಿ. ಆಚಾರ್ಯ ಹೇಳಿದ್ದಾರೆ.
ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ ಬಾಳ್ಕುದ್ರು ಹಂಗಾರಕಟ್ಟೆ, ರೈತರ ಸಹಕಾರಿ ಸಂಘ ಹಿರಿಯಡಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡಕ ಇವರ ಸಂಯುಕ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡಕ ಇಲ್ಲಿ ನಡೆದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಪೋಕ್ಸೊ ಕಾಯಿದೆ -2012ರ ಕುರಿತ ಮಾಹಿತಿ ಶಿಬಿರ ಉದ್ಘಾಟಿಸಿ ಮಾತಾಡುತಿದ್ದರು.

ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಂಗನಾಥ ಭಟ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ಸದಾ ಜಾಗೃತರಾಗಿರುವುದು ನಮ್ಮ ಕರ್ತವ್ಯ. ಯಾವುದೇ ಮಗುವಾಗಿ ಕ್ರೌರ್ಯದಿಂದ ಅದು ಬಾಲ್ಯವನ್ನು ಕಳೆಯಬಾರದು. ಅಲ್ಲದೆ ಈ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ಮಕ್ಕಳ ಸಂರಕ್ಷಣೆ ನಮ್ಮೆಲ್ಲರ ಬಹುದೊಡ್ಡ ಜವಾಬ್ದಾರಿ ಎಂದರು.
ಮುಖ್ಯ ಅತಿಥಿಗಳಾಗಿ ಹಿರಿಯಡ್ಕ ರೈತರ ಸಹಕಾರಿ ಸಂಘದ ಅಧ್ಯಕ್ಷ ಬಿ. ಅಶೋಕ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಶೆಟ್ಟಿ, ಹಿರಿಯಡಕ ಪೋಲಿಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಗಂಗಪ್ಪ, ಪೆರ್ಡೂರು ವಿಭಾಗದ ಡೆಪ್ಯೂಟಿ ರೆಂಜ್ ಫಾರೆಸ್ಟ್ ಅಫೀಸರ್ ಕರುಣಾಕರ ಆಚಾರ್ಯ, ಕಾಲೇಜಿನ ಉಪಪ್ರಾಂಶುಪಾಲೆ ವೀಣಾ ಡಿ. ನಾಯಕ್, ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾದ್ಯಕ್ಷ ವಿನೋದ ಕುಮಾರ್ ಹಾಗೂ ಸಂಪನ್ಮೂಲ ವ್ಯಕ್ತಿ, ಉಡುಪಿ ಜಿಲ್ಲಾ ಸರಕಾರಿ ಅಭಿಯಾಜಕರು (ಪೋಕ್ಸೋ) ಉಡುಪಿ ವಿಜಯವಾಸು ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಭಿವೃದ್ಧಿ ಸಂಸ್ಥೆ ಬಾಳ್ಕುದ್ರು ಹಂಗಾರಕಟ್ಟೆ ಇದರ ಕಾರ್ಯದರ್ಶಿ ರಮೇಶ್ ವಕ್ವಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನಿತ ಉಡುಪಿ ಕಾರ್ಯಕ್ರಮ ನಿರೂಪಿಸಿ, ಶಕಿಲಾ ಡಿ.ರಾವ್ ವಂದಿಸಿದರು.
485ಕ್ಕೂ ಅಧಿಕ ವಿದ್ಯಾರ್ಥಿಗಳು ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡರು.