ಗಡ್ಕರಿ ಪುತ್ರಿಯ ವಿವಾಹಕ್ಕೆ ರಾಜಕೀಯ ದಿಗ್ಗಜರ ನಿರೀಕ್ಷೆ

ನಾಗಪುರ, ಡಿ.3: ನಾಳೆ ನಡೆಯಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಪ್ರಕಾಶ್ ಜಾವಡೆಕರ್ ಹಾಗೂ ಶೀವಸೇನಾ ವರಿಷ್ಠ ಉದ್ಧವ್ ಠಾಕ್ರೆ ಸಹಿತ ರಾಜಕೀಯ ದಿಗ್ಗಜರು ಭಾಗವಹಿಸುವ ನಿರೀಕ್ಷೆಯಿದೆ.
ಗಡ್ಕರಿಯವರ ಮೂವರು ಮಕ್ಕಳಲ್ಲಿ ಕಿರಿಯವಳಾದ ಕೇತಕಿ, ಅಮೆರಿಕದಲ್ಲಿ ಫೇಸ್‌ಬುಕ್‌ನಲ್ಲಿ ಕೆಲಸ ಮಾಡುತ್ತಿರುವ ಆದಿತ್ಯ ಕಾಸ್ಖೇಡಿಕರ್‌ನನ್ನು ವರಿಸಲಿದ್ದಾಳೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇಂದು ರಾತ್ರಿ ದಿಲ್ಲಿಯಿಂದ ನಾಗಪುರಕ್ಕೆ ಆಗಮಿಸಲಿದ್ದು, ವಿವಾಹದ ಬಳಿಕ ಹಿಂದಿರುಗಲಿದ್ದಾರೆಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಛತ್ತೀಸ್‌ಗಡದ ಮುಖ್ಯಮಂತ್ರಿ ರಮಣ್ ಸಿಂಗ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಯೋಗ ಗುರು ಬಾಬಾ ರಾಮದೇವ್ ಹಾಗೂ ಎಂಎನ್‌ಎಸ್ ವರಿಷ್ಠ ರಾಜ್ ಠಾಕ್ರೆ ಸಹ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
Next Story





