ಪ್ರತಿಭಟನೆ ಸಲ್ಲಿಸಿದ ಚೀನಾ
.jpg)
ಬೀಜಿಂಗ್, ಡಿ. 3: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್ ಜೊತೆ ಫೋನ್‌ನಲ್ಲಿ ಮಾತನಾಡಿರುವುದನ್ನು ಚೀನಾ ಪ್ರತಿಭಟಿಸಿದೆ.
ಇಬ್ಬರು ನಾಯಕರ ಮಾತುಕತೆಯನ್ನು ವಿರೋಧಿಸಿ ಚೀನಾ ಶನಿವಾರ ರಾಜತಾಂತ್ರಿಕ ಪ್ರತಿಭಟನೆಯನ್ನು ಸಲ್ಲಿಸಿದೆ. ಆದಾಗ್ಯೂ, ಈ ‘ಕ್ಷುಲ್ಲಕ’ ಕ್ರಮಕ್ಕೆ ತೈವಾನ್ ಕಾರಣ ಎಂದು ದೂಷಿಸಿದೆ.
ಅಮೆರಿಕದ ಸೂಕ್ತ ಪ್ರಾಧಿಕಾರಕ್ಕೆ ಪ್ರತಿಭಟನೆ ಸಲ್ಲಿಸಲಾಗಿದೆ ಎಂದು ಚೀನಾದ ವಿದೇಶ ಸಚಿವಾಲಯ ತಿಳಿಸಿದೆ.
ಚೀನಾ-ಅಮೆರಿಕ ಸಂಬಂಧಗಳಲ್ಲಿ ಯಾವುದೇ ಬಿರುಕು ಉಂಟಾಗುವುದನ್ನು ತಪ್ಪಿಸಲು ತೈವಾನ್ ವಿಷಯವನ್ನು ನಾಜೂಕಾಗಿ ನಿಭಾಯಿಸುವಂತೆ ಅದು ಅಮೆರಿಕವನ್ನು ಒತ್ತಾಯಿಸಿದೆ.
Next Story





