ದ. ಕೊರಿಯ ಅಧ್ಯಕ್ಷೆ ವಿರುದ್ಧ ಪ್ರತಿಪಕ್ಷಗಳಿಂದ ವಾಗ್ದಂಡನೆ ಮಸೂದೆ

ಸಿಯೋಲ್, ಡಿ. 3: ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿರುವ ದಕ್ಷಿಣ ಕೊರಿಯದ ಅಧ್ಯಕ್ಷೆ ಪಾರ್ಕ್ ಗುಯನ್ ಹೈ ವಿರುದ್ಧ ಮೂರು ಪ್ರತಿಪಕ್ಷಗಳು ಶನಿವಾರ ಸಂಸತ್ತಿನಲ್ಲಿ ವಾಗ್ದಂಡನೆ ಮಸೂದೆಯನ್ನು ಮಂಡಿಸಿವೆ.
ಸಂಸತ್ತಿನ ಒಟ್ಟು 300 ಸದಸ್ಯರ ಪೈಕಿ 171 ಸದಸ್ಯರು ಮಸೂದೆಗೆ ಸಹಿ ಹಾಕಿದ್ದಾರೆ.
ತನ್ನ ಅಧ್ಯಕ್ಷೀಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪಾರ್ಕ್ ಸಂವಿಧಾನ ಮತ್ತು ಕ್ರಿಮಿನಲ್ ಕಾನೂನು ಉಲ್ಲಂಘಿಸಿದ್ದಾರೆ ಎಂದು ಮಸೂದೆ ಆರೋಪಿಸಿದೆ.
‘‘ಅಧ್ಯಕ್ಷೆ ಪಾರ್ಕ್ ಗುಯನ್ ಹೈ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಸಂವಿಧಾನದ ವೌಲ್ಯಗಳನ್ನು ಮರು ಸ್ಥಾಪಿಸಲು ಹಾಗೂ ಸಂವಿಧಾನವನ್ನು ರಕ್ಷಿಸಲು ವಾಗ್ದಂಡನೆ ಮಸೂದೆಯನ್ನು ನಾವು ಮಂಡಿಸುತ್ತಿದ್ದೇವೆ’’ ಎಂದು ಅದು ತಿಳಿಸಿದೆ.
ಖಾಸಗಿ ಟ್ರಸ್ಟ್‌ಗಳಿಗೆ ದೇಶದ ಕಂಪೆನಿಗಳಿಂದ ದೇಣಿಗೆ ಸಂಗ್ರಹಿಸಲು ತನ್ನ ಸ್ನೇಹಿತೆಗೆ ಅಧಿಕಾರ ನೀಡಿರುವ ಆರೋಪವನ್ನು ಪಾರ್ಕ್ ಎದುರಿಸುತ್ತಿದ್ದಾರೆ.
Next Story





