ನೋಟು ಅಮಾನ್ಯ ಎಫೆಕ್ಟ್ : 2 ರೂ. ನಾಣ್ಯದಲ್ಲಿ ಪೆನ್ಷನ್ ಹಣ ಪಾವತಿ...!

ಜಲಂಧರ್, ಡಿ.3: ಅಧಿಕ ವೌಲ್ಯದ ನೋಟು ಅಪವೌಲ್ಯಗೊಳಿಸಿದ ಬಳಿಕ ಜನರು ಹಣಕ್ಕಾಗಿ ಪರದಾಡುತ್ತಿರುವುದು ದೈನಂದಿನ ವಿಷಯವಾಗಿರುವಂತೆಯೇ, ಜಲಂಧರ್‌ನ ಬ್ಯಾಂಕ್‌ಗಳಲ್ಲಿ ಪೆನ್ಷನ್‌ದಾರರಿಗೆ 2 ರೂ. ನಾಣ್ಯದಲ್ಲಿ ಪೆನ್ಷನ್ ಹಣ ಪಾವತಿಸಿದ ಘಟನೆ ನಡೆದಿದೆ.
10 ಸಾವಿರ ರೂ. ಮೊತ್ತದ ಪೆನ್ಷನ್ ಪಡೆಯುತ್ತಿರುವ ಪಿಂಚಣಿದಾರರಿಗೆ 9 ಸಾವಿರ ರೂ.ಗಳನ್ನು ನೋಟುಗಳ ಮೂಲಕ ಪಾವತಿಸಲಾಗುತ್ತಿದ್ದು ಉಳಿದ 1 ಸಾವಿರ ಮೊತ್ತವನ್ನು 2 ರೂ.ನಾಣ್ಯಗಳ ಮೂಲಕ ಪಾವತಿಸಲಾಗುತ್ತಿದೆ. ಈ ನಾಣ್ಯಗಳನ್ನು ಇಟ್ಟುಕೊಂಡು ನಾನೇನು ಮಾಡಲಿ ಎಂದು ಪಿಂಚಣಿದಾರರು ಕೇಳುತ್ತಿದ್ದಾರೆ.
ಇಂದಿನ ದಿನಗಳಲ್ಲಿ ಮಕ್ಕಳು ಕೂಡಾ ಎರಡು ರೂಪಾಯಿ ನಾಣ್ಯ ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. ಇದನ್ನು ಹೇಗೆ ಬಳಸುವುದು. ಕೇಂದ್ರ ಸರಕಾರ ನಮ್ಮ ಸ್ಥಿತಿಯನ್ನು ಈ ಮಟ್ಟಕ್ಕೆ ತಂದುಬಿಟ್ಟಿದೆ ಎಂದು ಕೆಲ ಪಿಂಚಣಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story





