ಸಿನಿಮಾ ವೀಕ್ಷಣೆಗೆ ‘ಚಿಲ್ಲರೆ’ ಸಮಸ್ಯೆ

ಮಂಗಳೂರು, ಡಿ.3 : ತುಳುವಿನಲ್ಲಿ ಮೂಡಿಬಂದ 75ನೆ ಸಿನಿಮಾ ‘ಪನೋಡಾ ಬೊಡ್ಚಾ’ ಕರಾವಳಿಯ ಸಿನಿಮಾ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು , ತುಳುವರು ಸಿನಿಮಾವನ್ನು ಶ್ಲಾಸುತ್ತಿದ್ದಾರೆ. ಆದರೆ ನೋಟು ಅಮಾನ್ಯದ ಪರಿಣಾಮ ಚಿಲ್ಲರೆ ಕೊರತೆಯಿಂದಾಗಿ ಸಿನಿ ಮಂದಿರಗಳಲ್ಲಿ ವೀಕ್ಷಕರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದಾಗಿ ಚಿತ್ರದ ಸಂಭಾಷಣೆ ಮತ್ತು ನಿರ್ವಹಣೆ ಹೊತ್ತಿರುವ ಸುಂದರ್ ರೈ ಮಂದಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಚಿತ್ರವು ಕರಾವಳಿಯ 13 ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಮೊದಲ ವಾರದಲ್ಲಿ ಪ್ರೇಕ್ಷಕರು ಚಿತ್ರಕ್ಕೆ ಒಳ್ಳೆಯ ಬೆಂಬಲ ಸೂಚಿಸಿದ್ದಾರೆ. ಜನವರಿ ತಿಂಗಳಲ್ಲಿ ಮುಂಬೈ, ಮಲೆನಾಡು ಹಾಗೂ ವಿದೇಶಗಳಲ್ಲೂ ಚಿತ್ರ ಪ್ರದರ್ಶನ ಮಾಡಲು ಉದ್ದೇಶಿಸಿರುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ ಮಧು ಸುರತ್ಕಲ್,ಚಂದ್ರಹಾಸ ಶೆಟ್ಟಿ ಮಾಣಿ, ಎಚ್ಕೆ ನಯನಾಡು ಉಪಸ್ಥಿತರಿದ್ದರು.
Next Story





