ಉಡುಪಿ : ಮಕ್ಕಳಿಂದ ತಂಬಾಕು ನಿಷೇಧ ಜಾಗೃತಿ ಜಾಥ
ಉಡುಪಿ, ಡಿ.3 : ಉದ್ಯಾವರ ಎಂ.ಇ.ಟಿ. ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದ ಮಕ್ಕಳಿಂದ ತಂಬಾಕು ನಿಷೇಧ ಜಾಗೃತಿ ಜಾಥವನ್ನು ಕೊರಂಗ್ರಪಾಡಿಯಲ್ಲಿ ಆಯೋಜಿಸ ಲಾಗಿತ್ತು.
ಶಾಲಾ ಆಡಳಿತಾಧಿಕಾರಿ ಖಲೀಲ್ ಅಹ್ಮದ್ ಜಾಥವನ್ನು ಉದ್ಘಾಟಿಸಿ ಶುಭಕೋರಿದರು.
ಜಾಥದಲ್ಲಿ ಸುಮಾರು 260 ವಿದ್ಯಾರ್ಥಿಗಳು ಮತ್ತು 15 ಶಿಕ್ಷಕರು ಭಾಗವಹಿಸಿದ್ದರು.
ಶಾಲಾ ಸುತ್ತಮುತ್ತಲಿನ ಹಲವು ಅಂಗಡಿಗಳಿಗೆ ತೆರಳಿ ತಂಬಾಕು ಉತ್ಪನಗಳನ್ನು ಮಾರಾಟ ಮಾಡದಂತೆ ಮಕ್ಕಳು ಮನವಿ ಮಾಡಿದರು.
ಸುಮಾರು ಎರಡುಕಿ.ಮೀ. ದೂರ ಸಾಗಿಬಂದ ಜಾಥದ ಉದ್ದಕ್ಕೂ ಮಕ್ಕಳು ರಿಕ್ಷಾ ಚಾಲಕರಿಗೆ, ಲಾರಿ ಚಾಲಕರಿಗೆ, ಗ್ಯಾರೇಜ್ ಕೆಲಸಗಾರರು ಹಾಗೂ ಸಾರ್ವಜನಿಕರಿಗೆ ಹೂ ನೀಡುವ ಮೂಲಕ ತಂಬಾಕು ನಿಷೇಧದ ಬಗ್ಗೆ ಜಾಗೃತಿ ಮೂಡಿಸಿದರು.
ಕೆಲವರು ಇನ್ನು ಮುಂದೆ ತಂಬಾಕು ಸೇವಿಸುವುದಿಲ್ಲ ಎಂದು ಇದೇ ವೇಳೆ ಪ್ರಮಾಣ ಮಾಡಿದರು.
Next Story





