2025ರ ವೇಳೆಗೆ ಡೀಸೆಲ್ ವಾಹನಗಳಿಗೆ 4 ನಗರಗಳ ವಿದಾಯ

ಮೆಕ್ಸಿಕೊ ಸಿಟಿ, ಡಿ. 3: 2025ರ ವೇಳೆಗೆ ಡೀಸೆಲ್ ವಾಹನಗಳಿಗೆ ವಿದಾಯ ಹೇಳಲು ಮೆಕ್ಸಿಕೊ, ಪ್ಯಾರಿಸ್, ಮ್ಯಾಡ್ರಿಡ್ ಮತ್ತು ಅಥೆನ್ಸ್ ನಗರಗಳು ನಿರ್ಧರಿಸಿವೆ.
ಮೆಕ್ಸಿಕೊ ರಾಜಧಾನಿಯಲ್ಲಿ ಗುರುವಾರ ನಡೆದ ಸಿ40 ಮೇಯರ್‌ಗಳ ಶೃಂಗಸಭೆಯಲ್ಲಿ ಈ ಬದ್ಧತೆಯನ್ನು ವ್ಯಕ್ತಪಡಿಸಲಾಯಿತು.
ಈ ಒಪ್ಪಂದವು ಈ ನಗರಗಳಲ್ಲಿ ವಾಯುಮಾಲಿನ್ಯ ಹಾಗೂ ಅದಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕಡಿಮೆ ಮಾಡಲು ಹಾಗೂ ಹವಾಮಾನ ಗುರಿಗಳನ್ನು ತಲುಪಲು ಈ ನಗರಗಳಿಗೆ ಸಹಾಯ ಮಾಡುತ್ತವೆ ಎಂದು ಹೇಳಿಕೆಯೊಂದು ತಿಳಿಸಿದೆ.
‘‘ಡೀಸೆಲ್ ವಾಹನಗಳು ಜಗತ್ತಿನಾದ್ಯಂತ ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗಿವೆ’’ ಎಂದು ಪ್ಯಾರಿಸ್ ಮೇಯರ್ ಆ್ಯನ್ ಹಿಡಾಲ್ಗೊ ಶುಕ್ರವಾರ ಹೇಳಿದರು.
Next Story





