ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕೆ ಸರಕಾರಿ ಮಟ್ಟದಲ್ಲಿ ಕ್ರಮ : ಇ . ಚಂದ್ರಶೇಖರನ್

ಕಾಸರಗೋಡು, ಡಿ.3 : ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕೆ ಸರಕಾರಿ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇರಳ ಕಂದಾಯ ಸಚಿವ ಇ . ಚಂದ್ರಶೇಖರನ್ ಹೇಳಿದರು.
ಅವರು ವಿಕಲಚೇತನ ದಿನಾಚಾರಣೆಯಂಗವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಚೆಂಗಳ ಮಾರ್ ತೋಮ ಅಂಧರ ವಿದ್ಯಾಲಯದಲ್ಲಿ ನಡೆದ ವಿಕಲ ಚೇತನ ವಿದ್ಯಾರ್ಥಿಗಳ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಳೆದ ಆರು ತಿಂಗಳ ಅವಧಿಯಲ್ಲಿ ೭೮ ವಿಕಲ ಚೇತನರಿಗೆ ಪಿ ಎಸ್ ಸಿ ಮೂಲಕ ಉದ್ಯೋಗ ನೀಡಲಾಗಿದೆ. ವಿಕಲಚೇತನರ ಬಗ್ಗೆ ಸರಕಾರಕ್ಕೆ ವಿಶೇಷ ಕಾಳಜಿ ಇದೆ. ಇವರ ಸಂರಕ್ಷ ಣೆ ಯ ಜವಾಬ್ದಾರಿ ಸಮಾಜಕ್ಕೂ ಇದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಎನ್ . ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕು೦ಞ, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಹಿನಾ ಸಲೀಂ , ಸದಸ್ಯೆ ಸುಫೈಝ ಮುನೀರ್ , ಮಾರ್ ತೋಮಾ ವಿದ್ಯಾಲಯದ ಮುಖ್ಯಸ್ಥ ಫಾದರ್ ಎ . ಜೆ ಮ್ಯಾಥ್ಯೂ ಮೊದಲಾದವರು ಮಾತನಾಡಿದರು.
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪಿ. ಭರತನ್ ಸ್ವಾಗತಿಸಿ , ಎಂ. ಪಿ ಅಬ್ದುಲ್ ರಹಮಾನ್ ವಂದಿಸಿದರು





