ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಉಡುಪಿ, ಡಿ.3: ಕುತ್ಪಾಡಿ ಕಟ್ಟೆಗುಡ್ಡೆಯ ಜನತ ಕಾಲನಿಯ ನಿವಾಸಿ ಅಪ್ಪಿಪೂಜಾರ್ತಿ ಎಂಬವರ ಮಗ ಜಗದೀಶ್ ಎಂಬವರು ಡಿ.2ರಂದು ಮಧ್ಯಾಹ್ನ ಮಲಗುವ ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈಯಕ್ತಿಕ ಕಾರಣದಿಂದ ಮನನೊಂದ ವಳಕಾಡು ನಿವಾಸಿ ದೀಪಿಕಾ ಕಿಣಿ(49) ಎಂಬವರು ಡಿ.2ರಂದು ಬೆಳಗ್ಗೆ ದೇವರ ಕೋಣೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





