Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪಠ್ಯಕ್ರಮದಲ್ಲಿ ರೆತರಿಗೂ ಆದ್ಯತೆಯಿರಲಿ:...

ಪಠ್ಯಕ್ರಮದಲ್ಲಿ ರೆತರಿಗೂ ಆದ್ಯತೆಯಿರಲಿ: ಕೃಷಿ ವಿಜ್ಞಾನಿ ಮಹದೇವಯ್ಯ

ವಾರ್ತಾಭಾರತಿವಾರ್ತಾಭಾರತಿ3 Dec 2016 11:53 PM IST
share
ಪಠ್ಯಕ್ರಮದಲ್ಲಿ ರೆತರಿಗೂ ಆದ್ಯತೆಯಿರಲಿ: ಕೃಷಿ ವಿಜ್ಞಾನಿ ಮಹದೇವಯ್ಯ

ಕೃಷಿ ವಿಶ್ವವಿದ್ಯಾಲಯಗಳು, ಸರಕಾರ ವಿವಿಧ ಇಲಾಖೆ ಗಳು ನಿಷ್ಕೃಿಯವಾಗಿವೆ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ನಿಗದಿತ ಗುರಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಖ್ಯಾತ ಕೃಷಿ ವಿಜ್ಞಾನಿ ಪದ್ಮವಿಭೂಷಣ ಡಾ.ಎಂ.ಮಹಾದೇವಪ್ಪ ಕಳವಳ ವ್ಯಕ್ತಪಡಿಸಿದರು.

ಅವರು ನಗರದ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೃಷಿ ಸಂಸ್ಕೃತಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತಕ್ಕೆ ಇಡೀ ಪ್ರಪಂಚಕ್ಕೆ ಅನ್ನ ನೀಡುವ ತಾಕತ್ತಿದೆ. ದೇಶದಲ್ಲಿ 265 ಮಿಲಿಯನ್ ಟನ್ ಆಹಾರದ ಉತ್ಪಾದನೆ ಮಾಡಲಾಗುತ್ತಿದೆ. ಚೀನಾ ನಮಗಿಂತಲೂ ಹೆಚ್ಚು ಉತ್ಪಾದನೆ ಮಾಡುತ್ತಿದೆ. ಪ್ರಪಂಚದಲ್ಲಿ 10 ಲಕ್ಷ ಬೀಜ ತಳಿ ಇವೆ. ಅದರ ದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಬೀಜ ತಳಿ ನಮ್ಮ ದೇಶದಲ್ಲಿವೆ. ನಮ್ಮಲ್ಲಿ ರೈತರೇ ವಿಜ್ಞಾನಿಗಳಾಗಿದ್ದಾರೆ. ಕೃಷಿ ಕ್ಷೇತ್ರದ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ರೈತರು ಕೃಷಿಯ ಜೊತೆಗೆ ಮಾತೃ ಭಾಷೆ ಉಳಿಸಿಕೊಂಡು ಬಂದಿದ್ದಾರೆ. ಪಠ್ಯಕ್ರಮದಲ್ಲಿ ಕೃಷಿಯ ಬಗ್ಗೆ ತಿಳಿದವರೂ ಸದಸ್ಯರಾಗಬೇಕು. ಅದರಲ್ಲಿ ಮಾಹಿತಿ ಒದಗಿಸಲು ಆದ್ಯತೆ ನೀಡಬೇಕು. ಕಾವೇರಿ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಸರಕಾರಕ್ಕೆ ವರದಿ ನೀಡ ಲಾಗಿದೆ. ಆದರೆ ಅದು ಜಾರಿಯಾಗದೇ ಧೂಳು ತಿನ್ನುತ್ತಿದೆ. ಈ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದರು.


ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಸಾಕಷ್ಟು ಬೆಳವಣಿಗೆ ಯಾಗಿದೆ. ಕೃಷಿ ಅಳವಡಿಸಿಕೊಳ್ಳಬೇಕಾಗಿದೆ. ರೈತರು-ಕೃಷಿ ವಿಜ್ಞಾನಿಗಳು ಮುಖಾಮುಖಿ ಭೇಟಿ ಚರ್ಚೆ ನಡೆದಾಗ ಮಾತ್ರ ಪರಿಹಾರ ಕಾಣಲು ಸಾಧ್ಯ ಎನುವುದನ್ನು ಅರಿತು ಕೊಳ್ಳಬೇಕು. ಕೃಷಿ ಸಂಸ್ಕೃತಿ ಇಲ್ಲದಿದ್ದರೆ ಏನೂ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು. ಕೇಂದ್ರ ಸರಕಾರ ರಾಜ್ಯದಲ್ಲಿ ಕೇಂದ್ರೀಯ ಕೃಷಿ ವಿಶ್ವವಿದ್ಯಾ ನಿಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಸಾಹಿತ್ಯ - ಕೃಷಿ ಸಂವೇದನೆ ಕುರಿತಾಗಿ ಪ್ರಾಧ್ಯಾಪಕ ಡಾ.ಬಸವರಾಜ ಡೋಣೂರು ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕೃಷಿ ಸಂಸ್ಕೃತಿಯೂ ಒಂದು ಸಂವೇದನೆಯಾಗಿ ಕನ್ನಡ ಸಾಹಿತ್ಯದಲ್ಲಿ ಒಳಗೊಂಡಿದೆ. 9 ರಿಂದ 12ನೆ ಶತಮಾನದಲ್ಲಿ ರನ್ನ, ಪೊನ್ನ ಇನ್ನಿತರ ಕವಿಗಳಲ್ಲಿ ಕೃಷಿ ಸಂವೇದನೆ ಮೂಡಿ ಬಂದಿಲ್ಲ. 12ನೆ ಶತಮಾನದಲ್ಲಿ ವಚನ ಸಾಹಿತ್ಯ ಮಾನವೀಯ ಚಳವಳಿಗೆ ಕ್ರಾಂತಿಗೀತೆ ಹಾಡಿತು. ವಚನ ಕಾರರು ರೈತ ಸಮುದಾಯದಿಂದ ಬಂದವರಾಗಿದ್ದಾರೆ. ಅಲ್ಲಮಪ್ರಭು ಕೃಷಿಯಲ್ಲಿ ಅಧ್ಯಾತ್ಮವನ್ನು ಕಂಡವರು. ಬಸವಣ್ಣ ಕೃಷಿಯನ್ನು ಸಾಮಾಜಿಕ ಚಳವಳಿಗೆ ಬಳಸಿಕೊಂಡರು. ನಂತರ 16ನೆ ಶತಮಾನದವರೆಗೆ ಕೃಷಿ ಸಂವೇದನೆ ಕಾಣೆಯಾಯಿತು. ನಂತರ ಸಾಹಿತ್ಯದಲ್ಲಿ ಕೃಷಿ ಪ್ರಧಾನವಾಗಿದೆ. ಕನಕದಾಸರು ರಾಮಧಾನ್ಯ ಚರಿತೆಯಲ್ಲಿ ಕೃಷಿ ಸಂವೇದನೆ ಕಾಣಬಹುದು. ತತ್ವಪದಕಾರರು ಅನಕ್ಷರಸ್ಥರಾಗಿದ್ದರೂ ಸಾಕಷ್ಟು ಕೃಷಿ ರೂಪಕಗಳನ್ನು ನೀಡಿದ್ದಾರೆ ಎಂದರು.
ವೀರಶೈವ, ದಲಿತ ಸಾಹಿತ್ಯ ಕೃಷಿ ಪ್ರಧಾನವಾಗಿದೆ. ಜೈನ ಮತ್ತು ವೈಷ್ಣವ ಸಾಹಿತ್ಯದಲ್ಲಿ ಕೃಷಿ ಸಾಹಿತ್ಯ ಬೆಳೆದು ಬರಲಿಲ್ಲ. ಆಧುನಿಕ ನವೋದಯ ಸಾಹಿತ್ಯದಲ್ಲಿ ಕುವೆಂಪು, ಬೇಂದ್ರೆ, ಕಾರಂತರು ಕೃಷಿ ಸಂಬಂಧಿತ ಸಾಹಿತ್ಯ ರಚಿಸಿದರು. ಕುವೆಂಪು ಅವರ ಮಲೆಗಳಲ್ಲಿ ಮಧುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ, ನೇಗಿಲ ಯೋಗಿ ಕೃತಿಗಳು ಸಾಕ್ಷೀಕರಿಸುತ್ತವೆ. ಪ್ರಗತಿಶೀಲ ಸಾಹಿತ್ಯದಲ್ಲಿ ಬಸವರಾಜ ಕಟ್ಟಮನಿ, ನಿರಂತನ ಸೇರಿದಂತೆ ಅನೇಕ ಕವಿಗಳು, ಕೃಷಿ ಸಾಹಿತ್ಯದ ಬಗೆಗೆ ಒಲವು ತೋರಿದ್ದಾರೆ. ನವ್ಯ ಸಾಹಿತ್ಯದಲ್ಲಿ ಕೃಷಿಯ ಬಗ್ಗೆ ವ್ಯಾಪಕ ಕೃತಿಗಳು ಹೊರ ಬಂದಿವೆ. ಪಿ.ಲಂಕೇಶ ಅವರ ಅವ್ವ ಕೃಷಿಯಲ್ಲಿ ತಾಯಿಯನ್ನು ಭೂತಾಯಿಗೆ ಹೋಲಿಕೆ ಮಾಡಿದ್ದಾರೆ. ಇನ್ನೂ ದಲಿತ ಮತ್ತು ಬಂಡಾಯ ಸಾಹಿತ್ಯದಲ್ಲಿ ಡಾ.ರಾಮಚಂದ್ರಪ್ಪ ಬರಗೂರು, ಡಾ.ಸಿದ್ದಲಿಂಗಯ್ಯ ಹಾಗೂ ಇನ್ನಿತರರು ಕೃಷಿ ಬದುಕಿನ ಬಗ್ಗೆ ಚಿತ್ರಿಸಿದ್ದಾರೆ ಎಂದರು.

ಆದರೆ ಇಂದು ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಬರೀ ಲೇಖನ, ಭಾಷಣದಿಂದ ಏನೂ ಲಾಭವಾಗುತ್ತಿಲ್ಲ. ರಾಜಕಾರಣ ಹಾಗೂ ಅಧಿಕಾರಿ ವರ್ಗ ಕೃಷಿ ಕ್ಷೇತ್ರವನ್ನು ಮರೆತಿದೆ. ಸಮ್ಮೇಳನದಲ್ಲಿ ಯಾರು ಕೇಳಬೇಕಾಗಿತ್ತೋ ಅವರೇ ಇಲ್ಲ. ಹೇಗೆ ಅನುಷ್ಠಾನ ಮಾಡಲು ಸಾಧ್ಯ. ಕುಡಿಯುವ ನೀರು ಕೊಡಲಾಗದ ಸರಕಾರ ಸರಾಯಿ ಅಂಗಡಿ ಕೊಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರದ ಬಿಕ್ಕಟ್ಟುಗಳ ಕುರಿತು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು. ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಹಾಗೂ ಇತರರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X