Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ರಾಹುಲ್ ಅಥವಾ ಪ್ರಿಯಾಂಕಾ?

ರಾಹುಲ್ ಅಥವಾ ಪ್ರಿಯಾಂಕಾ?

ವಾರ್ತಾಭಾರತಿವಾರ್ತಾಭಾರತಿ4 Dec 2016 12:16 AM IST
share

ಸಂಸತ್‌ನಲ್ಲಿ ಮನಮೋಹನ್‌ಸಿಂಗ್ ಮಾತನಾಡಿದ ದಿನವೇ ಮಹತ್ವದ ಪ್ರಕಟಣೆಗಾಗಿ 24 ಅಕ್ಬರ್ ರಸ್ತೆಗೆ ಧಾವಿಸುವಂತೆ ವರದಿಗಾರರಿಗೆ ಸೂಚನೆ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್‌ನಮುಖ್ಯ ಕಾರ್ಯಾಲಯವು ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಕೊನೆಗೂ ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಪದಗ್ರಹಣ ಮಾಡಲಿದ್ದಾರೆಂಬ ವದಂತಿಗಳು ಹಬ್ಬಿದ್ದವು. ಪ್ರಾಯಶಃ ಪ್ರಿಯಾಂಕ ಗಾಂಧಿ ಉತ್ತರಪ್ರದೇಶದಲ್ಲಿ ವಿಧ್ಯುಕ್ತವಾಗಿ ಪಕ್ಷದ ನೇತೃತ್ವ ವಹಿಸಿಕೊಳ್ಳಲಿದ್ದಾರೆಂಬ ಊಹಾಪೋಹಗಳು ಕೂಡಾ ಹರಡಿದ್ದವು, ರಾತ್ರಿ 8:30ರಿಂದ ರಾತ್ರಿ 9:00 ಗಂಟೆಯ ಮಧ್ಯೆ ಗಡಿಯಾರ ಮುಳ್ಳುಗಳು ಚಲಿಸುತ್ತಿರುವಂತೆಯೇ ಎಲ್ಲಾ ಪ್ರಮುಖ ಟಿವಿ ಜಾಲಗಳು ಬ್ರೇಕಿಂಗ್ ನ್ಯೂಸ್‌ನಲ್ಲಿ ಈ ವದಂತಿಗಳು ನಿರಂತರವಾಗಿ ಹರಿಯಬಿಟ್ಟಿದ್ದವು. ಆದರೆ ಈ ನಡುವೆ ಹಠಾತ್ತನೆ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಲಾಯಿತು. ಈ ಬಗ್ಗೆ ಹಲವಾರು ಗಾಳಿಸುದ್ದಿಗಳು ಕೂಡಾ ತೇಲಿಬರುತ್ತಿದ್ದವು. ಮರುದಿನದ ‘ಹೆಡ್‌ಲೈನ್’ಗಳಲ್ಲಿ ಮನಮೋಹನ್‌ಸಿಂಗ್‌ಗೆ ಸ್ಥಾನ ದೊರೆಯುವುದು 10ಜನಪಥ್‌ಗೆ ಬೇಕಿಲ್ಲವೆಂದು ಕೆಲವರು ಭಾವಿಸುತ್ತಾರೆ. ಈ ವಿಚಾರವಾಗಿ ರಾಹುಲ್ ಅಥವಾ ಪ್ರಿಯಾಂಕ ಕಸಿವಿಸಿಗೊಂಡಿದ್ದಾರೆಂದು ಪಕ್ಷದೊಳಗಿನ ಹಲವರು ನಂಬಿದ್ದಾರೆ.


ಗಡ್ಕರಿಯ ಸಮಸ್ಯೆಗಳು!
 ನೋಟು ಅಮಾನ್ಯತೆಯು ಯಾವುದೇ ಮದುಮಗಳ ತಂದೆಗೆ ಅತ್ಯಂತ ಕಠಿಣವಾದ ವಿಷಯವಾಗಿ ಪರಿಣಮಿಸಿದೆ. ಪ್ರಾಸಂಗಿಕವೆಂಬಂತೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡಾ ಅವರಲ್ಲೊಬ್ಬರಾಗಿದ್ದಾರೆ. ಆರು ದಿನಗಳ ಕಾಲ ನಡೆಯಬೇಕಿದ್ದ ತನ್ನ ಪುತ್ರಿಯ ವಿವಾಹ ಸಮಾರಂಭವನ್ನು ಅವರು ವಿಧಿಯಿಲ್ಲದೆ ಮೂರು ದಿನಗಳಿಗೆ ಇಳಿಸಬೇಕಾಯಿತು. ನಾಗಪುರ, ಮುಂಬೈ ಹಾಗೂ ದಿಲ್ಲಿಯಲ್ಲಿ ನಡೆಯಲಿದ್ದ ಮೂರು ಆರತಕ್ಷತೆ ಸಮಾರಂಭಗಳಿಗೆ ಅವರು ಅಹ್ವಾನಿತರ ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿಟ್ಟಿದ್ದರು. ಆದರೆ ನೋಟು ನಿಷೇಧದ ಹಿನ್ನೆಲೆಯಲ್ಲಿ ಆಹ್ವಾನಿತರ ಪಟ್ಟಿಯನ್ನು ಕೂಡಾ ಮೊಟಕುಗೊಳಿಸಬೇಕಾಯಿತು. ಈ ಅರತಕ್ಷತೆಗಳಿಗೆ ಆಹ್ವಾನಿಸಲು ಸಾಧ್ಯವಾಗದವರಿಗೆ ದಂಪತಿಯನ್ನು ಹರಸಲು ದಿಲ್ಲಿಯಲ್ಲಿ ಪ್ರತ್ಯೇಕ ಸಮಾರಂಭವನ್ನು ಏರ್ಪಡಿಸಲಾಗುವುದೆಂದು ತನಗೆ ಆಪ್ತರಾದ ಕೆಲವು ಪತ್ರಕರ್ತರಿಗೂ ಗಡ್ಕರಿ ತಿಳಿಸಿದ್ದರು. ಕೆಲವು ವರ್ಷಗಳ ಹಿಂದೆ ತನ್ನ ಪುತ್ರನ ಅದ್ದೂರಿ ವಿವಾಹ ಏರ್ಪಡಿಸುವ ಮೂಲಕ ತಲೆಬರಹದ ಸುದ್ದಿಯಾಗಿದ್ದ ಗಡ್ಕರಿ, ಈ ಬಾರಿ ದುಬಾರಿ ಮದುವೆಯಿಂದ ದೂರವಿದ್ದರು. ಯಾಕೆಂದರೆ ಜನಾರ್ದನ ರೆಡ್ಡಿಯಂತೆ ಮಾಧ್ಯಮಗಳ ಹದ್ದಿನಗಣ್ಣಿಗೆ ಬೀಳುವುದು ಅವರಿಗೆ ಬೇಡವಾಗಿದೆ.


ಕ್ಯಾಪ್ಟನ್ ಪಂದ್ಯ ಸೋತರೆ...
 ಚುನಾವಣೆಗೆ ತೆರಳುತ್ತಿರುವ ಪಂಜಾಬ್‌ನಲ್ಲಿ ರಾಜಕೀಯ ದಿನೇ ದಿನೇ ಹೆಚ್ಚಿನ ಕಾವು ಪಡೆದುಕೊಳ್ಳುತ್ತಿದೆ. ಮಾಜಿ ಒಲಿಂಪಿಕ್ ಕ್ರೀಡಾಪಟು ಹಾಗೂ ಮಾಜಿ ಹಾಕಿ ಕ್ಯಾಪ್ಟನ್ ಪರ್ಗತ್‌ಸಿಂಗ್ ಮತ್ತು ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಂಗ್ ಅವರ ಪತ್ನಿ ನವ್‌ಜೋತ್ ಕೌರ್ ಸಿಧು, ನವೆಂಬರ್ 28ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ‘ಕ್ಯಾಪ್ಟನ್’ ಅಮರೀಂದರ್ ಸಿಂಗ್, ಕಾಂಗ್ರೆಸ್‌ನ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿಯವರನ್ನು ಪಕ್ಷದ ಹಿಂದೂ ಮುಖವಾಗಿ ಬಿಂಬಿಸಲು ಪ್ರಿಯಾಂಕಾ ಸೂಚಿಸಿದ್ದಾರೆ. ಕ್ಯಾಪ್ಟನ್ ಅಮರೀಂದರ್‌ಸಿಂಗ್ ಸಿಖ್ಖ್ ಮತಗಳನ್ನು ತಂದುಕೊಡಲಿದ್ದರೆ, ಅಲ್ಪಸಂಖ್ಯಾತ ಹಿಂದೂ ಮತಗಳನ್ನು ಮನೀಶ್ ತಿವಾರಿ ಕ್ರೋಢೀಕರಿಸಲಿದ್ದಾರೆ. ಆದರೆ ಇತ್ತೀಚಿನ ಸಮೀಕ್ಷೆಯೊಂದು ಕಾಂಗ್ರೆಸ್, ಆಮಿ ಆದ್ಮಿ ಪಕ್ಷ ಹಾಗೂ ಅಕಾಲಿಗಳಿಗೆ ಸಮಾನ ಅಂಕಗಳನ್ನು ನೀಡಿದೆ. ಆದರೆ ಕಾಂಗ್ರೆಸ್ ಮಾತ್ರ ಕ್ಯಾಪ್ಟನ್‌ರನ್ನು ಅತಿಯಾಗಿ ಅವಲಂಬಿಸಿದೆ. ಒಂದು ವೇಳೆ ಅವರು ಸೂಕ್ತ ಫಲಿತಾಂಶವನ್ನು ತಂದುಕೊಡದೆ ಇದ್ದಲ್ಲಿ, ಪಕ್ಷವು ತೀವ್ರ ಸಂಕಟಕ್ಕೆ ತುತ್ತಾಗಲಿದೆ.


ಶರದ್ ಯಾದವ್‌ರ ಗೊಂದಲ

ನೋಟು ಅಮಾನ್ಯತೆಯ ಬಳಿಕ, ಅದರ ವಿರುದ್ಧ ರಾಜ್ಯಸಭೆಯಲ್ಲಿ ಅತ್ಯಂತ ಪರಿಣಾಮಕಾರಿ ಭಾಷಣ ಮಾಡಿದವರಲ್ಲೊಬ್ಬರೆಂದರೆ ಜೆಡಿಯು ನಾಯಕ ಶರದ್ ಯಾದವ್. ಅವರು ಈ ಕ್ರಮವನ್ನು ಟೀಕಿಸಿದರಲ್ಲದೆ, ಪ್ರಧಾನಿ ವಿರುದ್ಧವೂ ವಾಗ್ದಾಳಿ ನಡೆಸಿದರು. ಆದರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿಯ ಈ ನಡೆಯನ್ನು ಬೆಂಬಲಿಸಲು ಆರಂಭಿಸಿದ ಬಳಿಕ, ಯಾದವ್ ಅವರಿಗೆ ಭಾವನೆಗಳನ್ನು ಹತ್ತಿಕ್ಕಲು ಸಾಧ್ಯವಾಗದೆ, ನಿತೀಶ್‌ರ ನಿಲುವನ್ನು ಕಟುವಾಗಿ ದೂರತೊಡಗಿದ್ದಾರೆ. ನೋಟು ಬ್ಯಾನ್ ಬಗ್ಗೆ ಯಾದವ್ ಇತ್ತೀಚೆಗೆ ಮಾತನಾಡಿದಾಗ, ಗಾಯದ ಮೇಲೆ ಉಪ್ಪು ಸವರಿದಂತೆ, ಅವರಿಗೆ ಸಚಿವ ಅರುಣ್ ಜೇಟ್ಲಿಯವರು ನಗದು ಅಮಾನ್ಯತೆಯ ಬಗ್ಗೆ ಏನನ್ನಾದರೂ ಹೇಳಬೇಕೆನಿಸಿದರೆ ಅದಕ್ಕಿಂತ ಮೊದಲು ನಿತೀಶ್‌ಕುಮಾರ್‌ರ ಅಭಿಪ್ರಾಯವನ್ನು ಪರಿಶೀಲಿಸುವಂತೆ ಹೇಳಿದ್ದರು. ತನ್ನನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದಕ್ಕಾಗಿ ಶರದ್ ಯಾದವ್ ಅವರು ನಿತೀಶ್ ಜೊತೆ ಮಾತಿನ ಸಮರಕ್ಕಿಳಿಯುವ ಸಾಧ್ಯತೆಯೂ ಇಲ್ಲದಿಲ್ಲ.

ಸಚಿವ ಶರ್ಮಾ ಪೇಚಾಟ
ಇತ್ತೀಚೆಗೆ ನ್ಯೂಝಿಲ್ಯಾಂಡ್ ಪ್ರವಾಸೋದ್ಯಮ ಸಚಿವಾಲಯವು ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಆ ದೇಶದ ಪ್ರಧಾನಿ ಜಾನ್ ಕಿ ಭಾಗವಹಿಸಿದ್ದರು. ಕಿವೀಸ್ ಪ್ರಧಾನಿಯನ್ನು ಸಚಿವ ಮಹೇಶ್ ಶರ್ಮಾ ಹೃತ್ಪೂರ್ವವಾಗಿ ಸ್ವಾಗತಿಸಿದರು. ಆದರೆ ಅವರನ್ನು ಪ್ರಧಾನಿ ಮ್ಯಾಕ್‌ಲಮ್ ಎಂದೇ ಕರೆದರು. ಅವರು ಬಾಯ್ತಪ್ಪಿ ಹಾಗೆ ಕರೆದರೆಂದು ಸುಮ್ಮಗಿರಬಹುದಾಗಿತ್ತು. ಆದರೆ ಅವರು, ‘‘ಪ್ರಧಾನಿ ಮ್ಯಾಕ್‌ಲಮ್ ಭಾರತಕ್ಕೆ ಬಂದಿರುವುದು ನರೇಂದ್ರ ಮೋದಿಜಿಯವರಿಗೆ ತುಂಬಾ ಸಂತಸವಾಗಿದೆ’’ ಎಂದು ಹೇಳಿದಾಗ ಅಲ್ಲಿದ್ದವರಿಗೆ ಕಸಿವಿಸಿಯಾಯಿತು. ಕೀಯವರಿಗೂ ಇದರಿಂದ ತುಂಬಾ ಮುಜುಗರವಾಯಿತು.
 ತದನಂತರ ಶರ್ಮಾ ಅವರು ತನ್ನ ಆಪ್ತರೊಬ್ಬರ ಬಳಿ, ತನಗೆ ಕೀ ಅವರ ಭಾರತ ಪ್ರವಾಸದ ಬಗ್ಗೆ ಸಮರ್ಪಕವಾದ ಮಾಹಿತಿ ದೊರೆತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ವಾಸ್ತವವೇನೆಂದರೆ ಶರ್ಮಾ, ತನ್ನ ಪ್ರಮಾದಗಳಿಂದಾಗಿಯೇ ಸುದ್ದಿಯಾಗುತ್ತಿದ್ದಾರೆ. ಅವರದನ್ನು ಪದೇ ಪದೇ ಎಸಗುತ್ತಲೇ ಇದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X