ಆರಾಧನೆಗಳಲ್ಲಿ ಲಿಂಗನ್ಯಾಯಕ್ಕಾಗಿ ಮುಂದಿನ ಗುರಿ ಶಬರಿ ಮಲೆ: ತೃಪ್ತಿದೇಸಾಯಿ

ಮುಂಬೈ,ಡಿಸೆಂಬರ್ 4: ನಲ್ವತ್ತು ದಿವಸಗಳ ವೃತ ಹಿಡಿದೇ ಶಬರಿ ಮಲೆ ಸಂದರ್ಶಿಸುವೆ ಎಂದು ಮಹಾರಾಷ್ಟದ ಭೂಮಾತಾ ಬ್ರಿಗೇಡ್‌ನ ನಾಯಕಿ ತೃಪ್ತಿ ದೇಸಾಯಿ ಹೇಳಿದ್ದಾರೆ. ಆರಾಧನೆಗಳಲ್ಲಿ ಲಿಂಗ ಸಮಾನತೆಯನ್ನು ಗಳಿಸಲಿಕ್ಕಾಗಿ ಮುಂದಿನ ಹೋರಾಟದ ಗುರಿ ಶಬರಿ ಮಲೆಯಾಗಿದೆ. ಮುಟ್ಟು ಸ್ತ್ರೀ ಅಶುದ್ಧ, ಶುದ್ಧತೆಯ ಅಳತೆಗೋಲಲ್ಲ ಎಂದು ತೃಪ್ತಿದೇಸಾಯಿ ಅಭಿಪ್ರಾಯ ಪಟ್ಟಿದ್ದಾರೆಂದು ವರದಿಯಾಗಿದೆ.
ಸುಪ್ರೀಂಕೋರ್ಟಿನ ಬಲವಾದ ಮಧ್ಯಪ್ರವೇಶದಿಂದಾಗಿ ಶಬರಿಮಲೆಯಲ್ಲಿ ಲಿಂಗನ್ಯಾಯ ದೃಢಗೊಳ್ಳುವ ಭರವಸೆಯಿದೆ. ಆದರೆ ಅನೂಕೂಲಕರ ತೀರ್ಪಿಗಾಗಿ ಕಾದು ನಿಲ್ಲದೆ ಹೋರಾಟವನ್ನು ಮುಂದುವರಿಸುವೆ. ಶಬರಿಮಲೆ ದರ್ಶನಕ್ಕೆ ಸಂಬಂಧಿಸಿ ವಿವಿಧಭಾಗಗಳಿಂದ ಎದ್ದಿರುವ ಬೆದರಿಕೆಗೆ ತಾನು ಹೆದರುವುದಿಲ್ಲ. ಕೇರಳ ಸರಕಾರ ಮತ್ತು ಮುಖ್ಯಮಂತ್ರಿ ಮಹಿಳೆಯರಿಗೆ ಭದ್ರತೆ ಒದಗಿಸಲಿದ್ದಾರೆಂದು ಭಾವಿಸುತ್ತೇನೆ ಎಂದು ಅವರು ಮತ್ತು ಅವರ ತಂಡ ಮುಂಬೈಯ ಹಾಜಿಅಲಿದರ್ಗಾ ಸಂದರ್ಶಿಸುತ್ತಿದ್ದ ವೇಳೆ ಹೇಳಿದ್ದಾರೆ.
ಜನವರಿಯಲ್ಲಿ ತಾನು ಮತ್ತು ತನ್ನ ಸಂಗಡಿಗರು ಶಬರಿಮಲೆ ಸಂದರ್ಶಿಸಲಿದ್ದೇವೆ ಎಂದು ಈ ಹಿಂದೆ ಅವರು ಘೋಷಿಸಿದ್ದರು. ಶಬರಿಮಲೆಗೆ ಬಂದರೆ ಅವರನ್ನು ಪಂಪೆಯಲ್ಲಿ ತಡೆಯುವುದಾಗಿ ವಿಶ್ವಹಿಂದೂ ಪರಿಷತ್ ಮಹಿಳಾ ವಿಭಾಗವಾದ ದುರ್ಗಾವಾಹಿನಿ ಘೋಷಿಸಿದೆ ಎಂದು ವರದಿ ತಿಳಿಸಿದೆ.





