ನೋಟು ರದ್ದತಿ ಗುಜರಾತ್ ಹತ್ಯಾಕಾಂಡದ ಇನ್ನೊಂದು ಮುಖ: ಕೇರಳದ ವಿತ್ತ ಸಚಿವ

ಹೊಸದಿಲ್ಲಿ, ಡಿ. 4: ಕಪಟ ರಾಷ್ಟ್ರೀಯತೆಯ ಮರೆಯಲ್ಲಿ ಪ್ರಧಾನಿ ನರೇಂದ್ರಮೋದಿ ರಾಷ್ಟ್ರಮಟ್ಟದಲ್ಲಿಆರ್ಥಿಕಸಂಹಾರ ನಡೆಸುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ ನಡೆದ ಜನಾಂಗೀಯ ಹತ್ಯೆಯ ಇನ್ನೊಂದು ಮುಖ ಇದು ಎಂದು ಕೇರಳ ಸರಕಾರದ ವಿತ್ತ ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆಂದು ವರದಿಯಾಗಿದೆ.
2002ರ ಗುಜರಾತ್ ಗಲಭೆಯ ಸಮಯದಲ್ಲಿ ಮೋದಿ ಅಲುಗಾಡಿಲ್ಲ. ಅದರಮೂಲಕ ಶಕ್ತಿಸಂಚಯಿಸಿಕೊಂಡು ನಾಯಕರಾಗಲು ಯತ್ನಿಸಿದ್ದರು. ಆರ್ಥಿಕ ಸಂಹಾರದ ಈಗಿನ ಸಮಯದಲ್ಲಿಯೂ ಮೋದಿ ಅಲುಗಾಡಿಲ್ಲ. ಆರ್ಥಿಕ ದುರಂತದ ನಡುವೆ ರಾಷ್ಟ್ರೀಯ ವಿಗ್ರಹ ಆಗಲು ಮೋದಿ ಶ್ರಮಿಸುತ್ತಿದ್ದಾರೆ. ವಿಷಯ ನಿಯಂತ್ರಣ ಕಳೆದುಕೊಂಡು ಹೋದರೂ ಅವರಲ್ಲಿ ವಿವೇಕೋದಯವಾಗಿಲ್ಲ. ಪಾರ್ಲಿಮೆಂಟನ್ನು ಮೀರಿ ನಿಲ್ಲಲು ದಾರಿ ಹುಡುಕುತ್ತಿದ್ದಾರೆ. ವರಮಾನ ಅರ್ಧದಷ್ಟು ಕಡಿಮೆಯಾಗಿದ್ದು ರಾಜ್ಯಗಳು ಆತಂಕಕ್ಕೊಳಗಾಗಿವೆ. ಸಂಬಳ ಕೊಡಲು ಡಿಸೆಂಬರ್‌ನಲ್ಲಿ ನೋಟಿಲ್ಲದ್ದು ಸಮಸ್ಯೆಯಾಗಿದೆ. ಜನವರಿಯಲ್ಲಿ ವರಮಾನವಿಲ್ಲದ್ದು ಸಮಸ್ಯೆಯಾಗಲಿದೆ. ಕೇರಳದ ವರಮಾನದಲ್ಲಿ ಶೇ.40ರಷ್ಟು ಕುಸಿತ ಆಗಲಿದೆ. ನಿರುದ್ಯೋಗ ಹೆಚ್ಚಳವಾಗುತ್ತಿದೆ. ಸಂಬಳ ಕೊಡಲು ಕಷ್ಟ ಆಗುತ್ತಿದೆ. ಸಣ್ಣವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ರಾಜ್ಯಗಳೊಂದಿಗೆ ಚರ್ಚಿಸಲು ಕೂಡಾ ಕೇಂದ್ರ ಸಿದ್ಧವಾಗಿಲ್ಲ. ಹೆಚ್ಚು ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸುವ ಮೂಲಕ ಒಂದು ಕೋಟಿ ರೂಪಾಯಿ ಬ್ಯಾಂಕಿಗೆಬರಲಾರದು. ಕಳ್ಳನೋಟುಆಗಿ ಹೊರದಬ್ಬಲ್ಪಡಬಹುದು ಎಂದು ಸರಕಾರವೇ ಭಾವಿಸಿದೆ. ಎರಡೂವರೆ ಲಕ್ಷ ಕೋಟಿ ರೂಪಾಯಿ ವರಮಾನ ನಷ್ಟಮಾಡಿಕೊಂಡು ಒಂದು ಲಕ್ಷ ಕೋಟಿ ಲಾಭಮಾಡುವುದರ ಅರ್ಥಶಾಸ್ತ್ರ ಏನೆಂದು ಅರ್ಥವಾಗುತ್ತಿಲ್ಲ. ಕಪ್ಪುಹಣ, ಭಯೋತ್ಪಾದನೆಗೆ ಕಾರಣವೆಂದು ಹೇಳಿ ನೋಟು ಅಮಾನ್ಯಗೊಳಿಸುವುದನ್ನು ಆರಂಭಿಸಲಾಯಿತು. ಆದರೆ ಅದು ಕೂಡಾ ನಿಜವಲ್ಲವೆಂದೇ ಸಾಬೀತುಗೊಂಡಿತು. ನೋಟುರಹಿತ ಅರ್ಥವ್ಯವಸ್ಥೆಗೆ ಮೋದಿಗಮನ ಹರಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆಂದು ಥಾಮಸ್‌ಐಸಾಕ್ ಹೇಳಿರುವುದಾಗಿ ವರದಿ ತಿಳಿಸಿದೆ.







