Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮಡಿಲ ಬೇನೆಯ ಕೂಗು

ಮಡಿಲ ಬೇನೆಯ ಕೂಗು

ಕೆ.ತಾರಾಭಟ್ಕೆ.ತಾರಾಭಟ್4 Dec 2016 4:17 PM IST
share
ಮಡಿಲ ಬೇನೆಯ ಕೂಗು

ತನ್ನ ಹೃದಯದ ಮೇಲೆ ಯಾರೋ ಕಲ್ಲು ಚಪ್ಪಡಿ ಹೇರಿದಂತಹ ಹೃದಯವಿದ್ರಾವಕ ಯಾತನೆ. ಯಾರಲ್ಲಿ ಹೇಳಿಕೊಳ್ಳಲಿ? ತನ್ನ ಹೃದಯವನ್ನೇ ಇರಿಯುತ್ತಿರುವ ಈ ದುಃಖ ಮತ್ತು ಕತ್ತಲೆಯಲ್ಲಿ ಇಡೀ ರಾತ್ರಿ ನಿದ್ರೆ ಇಲ್ಲದೆ ಮಗಳ ಬಿಕ್ಕಳಿಕೆ ಕೇಳುತ್ತಾ ಕಳೆಯಬೇಕು. ಈ ಯಾತನೆ ಸಹಿಸಲಾರೆ ಎನ್ನುವಂತೆ ಅವಳು ಕಣ್ಣು ಮುಚ್ಚಿದರೂ ಆ ಬಿಕ್ಕಳಿಕೆ ಕೇಳುತ್ತಲೇ ಇತ್ತು.

ರಾತ್ರಿ ಇಡೀ ಸುರಿಯುತ್ತಿರುವ ಮಳೆಯ ಭೋರ್ಗರೆತ. ಕತ್ತಲೆಯಲ್ಲಿ ಹೊರೆಗೆಲ್ಲೋ ದುಃಖದಿಂದ ಅರಚುತ್ತಿರುವ ಹಕ್ಕಿಯ ಕೂಗೊಂದು ಇಡೀ ವಾತಾವರಣವನ್ನೇ ಆವರಿಸಿ ಇಡೀ ಪ್ರಕೃತಿಯೇ ಯಾತನೆಯಿಂದ ಕಣ್ಣೀರು ಸುರಿಸುತ್ತಿದೆ ಏನೋ ಅನ್ನುವಂತೆ ಭಾಸವಾಗುತ್ತಿದೆ ಸೀತಾ ಬಾಯಿಗೆ.

ಇತ್ತೀಚೆಗೆ ಸೀತಾ ಬಾಯಿಗೆ ರಾತ್ರಿ ಮಲಗಿದಾಗೆಲ್ಲಾ ದೂರ ಬಹುದೂರದಿಂದ ಬಿಕ್ಕಳಿಕೆಯ ಸದ್ದು ನಟ್ಟರುಳ ರಾತ್ರಿಯಲ್ಲಿ ಕೇಳಿ ಬರುತ್ತಿದೆ. ಈ ಬಿಕ್ಕಳಿಗೆ ತನ್ನ ಮುದ್ದು ಮಗಳು ಅನುಪಮಾಳದ್ದೇ. ಆದರೆ ಇದು ತನಗೆ ಮಾತ್ರ ಕೇಳುವುದು ತನ್ನ ಭ್ರಮೆಯೋ ಏನೋ. ಯಾರೊಡನೆ ಹೇಳಿಕೊಳ್ಳುವುದು? ಹೇಳಿದರೆ ತನಗೆ ಹುಚ್ಚು ಎಂದು ಪ್ರಚಾರವೇ ಆಗುತ್ತದೆ. ಅದಕ್ಕೆ ತಕ್ಕಂತೆ ಆಗಾಗ ತನಗೆ ನೆನಪಿನ ಶಕ್ತಿಯೇ ಹೊರಟು ಹೋಗುತ್ತದೆ. ರಾತ್ರಿ ಇಡೀ ನಿದ್ದೆ ಇಲ್ಲದೇ ಮಲಗುವುದರಿಂದ ಏನೇನೋ ಕೆಟ್ಟ ಆಲೋಚನೆಗಳೂ ಸುಳಿಯುತ್ತವೆ. ಒಮ್ಮೆಗೇ ಅವಳು ಗಟ್ಟಿಯಾಗಿ ಕಿರುಚಿದಳು.

‘‘ಅಯ್ಯೋ ನನ್ನ ಮುದ್ದು ಮಗಳು ಚೆಂದದ ಗೊಂಬೆ ಅನುಪಮಾಳನ್ನು ಯಾರೋ ಹೊತ್ತುಕೊಂಡು ಹೋಗ್ತಾ ಇದ್ದಾರೆ. ಅಯ್ಯೋ ದೇವರೆ ಬಿಡಿಸಿಯಪ್ಪಾ ಅವಳನ್ನು’’ ಸೀತಾ ಬಾಯಿ ಕಿರುಚಿದಳು. ಅಷ್ಟರಲ್ಲಿಯೇ ಅವಳ ಸೊಸೆ, ಸೊಸೆಯ ತಾಯಿ ಒಳಗಿನಿಂದ ಬಂದರು. ‘‘ಯಾಕೆ ಹೀಗೆ ಕಿರುಚಿ ಬೊಬ್ಬೆ ಹೊಡೆಯುತ್ತೀರಿ. ನೀವು ನಿದ್ದೆ ಮಾಡುವುದಿಲ್ಲ. ಬೇರೆಯವರಿಗೂ ನಿದ್ದೆ ಮಾಡಲು ಬಿಡುವುದಿಲ್ಲ. ಏನಾಗಿದೆ ನಿಮಗೆ?’’ ಬೆದರಿಸಿದಳು ಸೊಸೆ.

‘‘ಈ ಮುದುಕಿಯನ್ನು ಇನ್ನೂ ಯಾಕೆ ಇಲ್ಲೇ ಇರಿಸಿಕೊಂಡಿದ್ದೀರಿ? ಯಾವುದೇ ಹುಚ್ಚರಾಸ್ಪತ್ರೆಗೆ ಸೇರಿಸಬಾರದೇ?’’ ದಢೂತಿಯಾದ ಸೊಸೆಯ ತಾಯಿ ತಿರಸ್ಕಾರದಿಂದ ನುಡಿದಳು.

‘‘ನಾನು ಹುಚ್ಚಿಯಲ್ಲ’’ ಹೇಳಬೇಕೆಂದರೂ ಶಬ್ದಗಳು ಬಾಯಿಂದ ಹೊರಡಲೇ ಇಲ್ಲ. ತಾನು ನಿಜವಾಗಿಯೂ ಹುಚ್ಚಿ ಇರಬಹುದೇ? ಅನುಮಾನ ಶುರು ಆಯಿತವಳಿಗೆ.

ಇಲ್ಲ, ನಾನು ಹುಚ್ಚಿ ಅಲ್ಲ. ನೆನಪಿನ ಶಕ್ತಿ ಹೋಗಿದೆ ಅಷ್ಟೇ. ಅದೂ ಕೆಲವೊಮ್ಮೆ. ಬರೀ ಚಿಂತಿಸಿ ಚಿಂತಿಸಿ ರಾತ್ರಿ ನಿದ್ರೆ ಮಾಡುವುದೇ ಮರೆತು ಹೋಗಿದೆ. ಆದರೂ ಕೆಲವು ನೆನಪುಗಳು ಗಾಢವಾಗಿ ಅಂಟಿಕೊಂಡೇ ಇದೆ.

ಗಂಡ ಬದುಕಿದ್ದಾಗ ಎಂತಹ ಸಂತೃಪ್ತ ಜೀವನ ತಮ್ಮದಾಗಿತ್ತು. ಎಷ್ಟೆಲ್ಲಾ ಜನರಿಗೆ ದಾನ ಧರ್ಮ ಮಾಡಿದ್ದೆ. ಗಂಡ ಯಾವುದಕ್ಕೂ ತಡೆ ಹಾಕಿದವರೇ ಅಲ್ಲ. ಆದರೆ ಹೀಗೇಕೆ ಆಯಿತು? ಭಕ್ತಿಯಿಂದ ಪೂಜಿಸುತ್ತಿದ್ದ ಶಿವನೇ ಜಾತ್ರೆ ಸಮಯ ಶಿವನ ಪೂಜೆ ಮಾಡಿ ಹೊರ ಬರಬೇಕಾದರೆ ಅಪಘಾತವಾಗಿ ಶಿವನ ಕಾಲ ಬುಡದಲ್ಲೇ ಅಸುನೀಗಬೇಕಾದದ್ದು ವಿಯಾಟವೇ ಇರಬೇಕು ಕೊನೆ ಗಳಿಗೆಯಲ್ಲೂ ಉಸಿರಿಸಿದ್ದು ‘‘ಅನುಪಮಾ... ಅನುಪಮಾ’’ ಎಂದೇ. ಅನುಪಮಾಳ ಬಗ್ಗೆ ಏನು ಹೇಳಬೇಕಿತ್ತೋ ಅವರಿಗೆ. ಎಲ್ಲವು ಯಾವುದೋ ವಿ ಆಟ ಇರಬೇಕು. ನಮ್ಮದು ಎನ್ನುವುದೆಲ್ಲವೂ ಕೇವಲ ಸುಳ್ಳು ಆಧಾರ ಮೇಲೆ ಮಾತ್ರ ನಮಗೆ ದೊರಕುವುದು ಇರಬೇಕು. ಹಿರಿಮಗ ರಾಮಕೃಷ್ಣನಿಗೆ ಹದಿನೈದು ವರುಷ. ಕಿರಿಮಗಳು ಅನುಪಮಾಳಿಗೆ ಬರೇ ಐದು ವರುಷ. ತಂದೆಯೇ ಮಗಳ ಗುಂಗುರು ಕೂದಲು, ಚೆಂದ ನೋಡಿ ಮುದ್ದಿನಲ್ಲಿಟ್ಟ ಹೆಸರು ಅನುಪಮಾ. ಅವಳೆಂದರೆ ಪಂಚಪ್ರಾಣ. ‘‘ನನ್ನ ಮಗಳು ಚೆಲುವಿನ ಗೊಂಬೆ. ಓದುವುದರಲ್ಲೂ ಅವಳು ಚುರುಕು. ಇಡೀ ಭಗವದ್ಗೀತೆ ಬಾಯಿ ಪಾಠ ಹೇಳಿ ಮಠದ ಸ್ವಾಮೀಜಿಯಿಂದ ಆ ಚಿಕ್ಕ ಪ್ರಾಯದಲ್ಲೇ ಬಹುಮಾನ ಗಿಟ್ಟಿಸಿಕೊಂಡು ಬಂದವಳು. ತಾನು ಅವಳನ್ನು ಕಲೆಕ್ಟರ್ ಮಾಡುವ ತನಕ ಓದಿಸುತ್ತೇನೆ’’ ಎಂದು ಎಲ್ಲರಲ್ಲೂ ಹೇಳಿಕೊಂಡು ತಿರುಗುತ್ತಿದ್ದವರು. ಒಮ್ಮೆಗೇ ಈ ಲೋಕವನ್ನೇ ತ್ಯಜಿಸಿ ಹೋಗುವರೆಂದು ಯಾರು ತಿಳಿದಿದ್ದರು. ಅವಳ ಬಗ್ಗೆ ಅವರ ನಿರೀಕ್ಷೆ ಎಷ್ಟೊಂದು ಇತ್ತು. ತಂಗಿಯನ್ನು ಅಪ್ಪ ಹೀಗೆ ಹೊಗಳುತ್ತಿದ್ದುದೇ ಮಗನಿಗೆ ಒಳಗೊಳಗೇ ದ್ವೇಷ ಬೆಳೆಯಲು ಕಾರಣವಿರಬೇಕು. ತಂಗಿಯ ಪಾಲಿಗೆ ಅವನು ‘ವಿಲನ್’ನೇ ಆದ.

ತಂದೆ ತೀರಿ ಹೋಗಿದ್ದೇ ತಮ್ಮನ್ನು ಸಾಕುವ ಹೊಣೆ ಹೊರೆ ಎನಿಸಿರಬೇಕು, ತಾನು ಇಂಜಿನಿಯರಿಂಗ್ ಕಲಿಯಬೇಕು ಎಂದು ಹಠ ಹಿಡಿದು ಕಾಲೇಜಿಗೆ ಸೇರಿದ. ಸೂಕ್ಷ್ಮವಾಗಿ ಅವನು ತಾಯಿ ಮತ್ತು ತಂಗಿ ನೋಡುವ ದೃಷ್ಟಿಯೇ ಬದಲಾಯಿತು. ವರ್ತನೆಯೂ ಬದಲಾಯಿತು. ತಂಗಿಯ ಮೇಲೆ ಮಾತುಮಾತಿಗೆ ಸಿಡುಕ ತೊಡಗಿದ.

ನೆನಪುಗಳು ಬೇಡ ಬೇಡವೆಂದರೂ ತೇಲಿ ಬರುತ್ತಿವೆ. ತಾನು ಅವನಿಗೋಸ್ಕರ ಏನೆಲ್ಲಾ ಮಾಡಿಲ್ಲ. ತನ್ನೆಲ್ಲಾ ಚಿನ್ನದ ಆಭರಣಗಳನ್ನೆಲ್ಲಾ ಮಾರಿ ಹಾಗೂ ಸಾಲ-ಸೋಲ ಮಾಡಿ ಅವನ ಶಿಕ್ಷಣ, ಅವನ ಖರ್ಚಿಗೆಂದು ಧಾರೆ ಎರೆದದ್ದು ಮರೆತೇ ಬಿಟ್ಟ. ಪತಿಯ ಆಸೆ ಪೂರೈಸಬೇಕೆಂದು ಅವರಿವರ ಮನೆಯಲ್ಲಿ ಬಾಣಂತನ ಮಾಡುವ ಕೆಲಸ ಹಿಡಿದು ಸಂಸಾರದ ಭಾರ ನಿಭಾಯಿಸುತ್ತಾ ಅನುಪಮಾಳಿಗೆ ಮೆಟ್ರಿಕ್ ಓದಿಸುವುದು ಸಾಧ್ಯವಾಯಿತು. ಅವಳು ತುಂಬಾ ಜಾಣೆ. ತಾಯಿಯ ದುಃಖ ಬಳಲಿಕೆ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾಳೆ. ತನಗೆ ಮುಂದೆ ಓದಿಸುವುದು ತಾಯಿಗೆ ಕಷ್ಟ ಎಂದು ಅರಿತಿದ್ದಾಳೆ. ತಾನು ಎಲ್ಲಿಯಾದರೂ ಕೆಲಸ ಹುಡುಕುತ್ತೇನೆ ಎಂದರೆ ಮಗ ಅವಳು ಕೆಲಸಕ್ಕೆ ಹೋದರೆ ತನಗೆ ಕೆಟ್ಟ ಹೆಸರು ಬರುತ್ತದೆ ಎಂದು ಅದಕ್ಕೆ ಸಂಚಕಾರ ತಂದ. ಓದಲೂ ಅಡ್ಡಿಪಡಿಸಿದಾಗಲೂ ಅನುಪಮಾ ಚಕಾರ ಮಾತೆತ್ತಲಿಲ್ಲ. ಅವನು ಓದು ಮುಗಿಸಿದ್ದೇ ಅಲ್ಲಿಯದೇ ಒಬ್ಬಳನ್ನು ಮದುವೆಯೂ ಮಾಡಿಕೊಂಡು ಬಂದ. ಇಡೀ ಮನೆಯ ಕಾರುಭಾರವೆಲ್ಲ ಅವನ ಹೆಂಡತಿ ಮನೆಯವರೇ ಹೊತ್ತುಕೊಂಡರು. ಹೆಂಡತಿಯ ಮನೆಯವರದೇ ಅಕಾರ ಚಲಾಯಿಸುವುದು ಶುರುವಾದಾಗ ಸೀತಾ ಬಾಯಿ ಮತ್ತು ಅನುಪಮಾ ತಮ್ಮದೇ ಮನೆಯಲ್ಲಿ ಕೆಲಸದವರಾದರು. ಎಲ್ಲದಕ್ಕೂ ಅಂತಿಮ ನಿರ್ಣಯ ಅವರದೇ. ಅನುಪಮಾ ಮನೆಯಲ್ಲಿ ದುಡಿಯುವುದು ನೋಡಿಯೇ ಸೊಸೆ ಮತ್ತು ಸೊಸೆಯ ತಾಯಿ ಲೆಕ್ಕಾಚಾರ ಮಾಡಿ ಅವಳನ್ನು ತನ್ನ ಸೊಸೆ ಮಾಡಿಕೊಳ್ಳಲು ತೀರ್ಮಾನಿಸಿಯೇ ಬಿಟ್ಟರು.

ಅವರೆಲ್ಲರಿಗೂ ಅಡುಗೆ ಮಾಡಿ ಹಾಕುವುದೇ ನಮ್ಮ ಕಾಯಕವಾಯಿತು. ಮಗಳು ಅನುಪಮಾ ನಕ್ಕು ನಲಿಯುವ ಪ್ರಾಯದಲ್ಲಿ ಕಮಕ್-ಕಿಮಕ್ ಅನ್ನದೇ ಇಡೀ ದಿನ ಗೇಯುವುದನ್ನು ನೋಡಿ ಕರುಳು ಕಿತ್ತು ಬರುತ್ತಿತ್ತು. ಅವಳ ತಂದೆ ಇದ್ದಿದ್ದರೆ...?

ಒಂದರ ಹಿಂದೆ ಒಂದು ನೆನಪು ನುಗ್ಗಿಯೇ ಬರುತ್ತಿತ್ತು. ತನಗೆ ಮರೆವೆಯ ರೋಗ ಬಂದಿರುವಾಗ ಈ ನೆನಪು ಮಾತ್ರ ಯಾಕೆ ಗಟ್ಟಿಯಾಗಿ ಉಳಿದೇ ಬಿಟ್ಟಿದೆ ಎನ್ನುವುದೇ ಆಶ್ಚರ್ಯ. ಈ ತನ್ನ ಮಗನಿಗೆ ತಂಗಿ ಎಂದರೆ ಯಾಕೆ ಇಷ್ಟೊಂದು ಕಿರಿಕಿರಿ ಅರ್ಥವೇ ಆಗುವುದಿಲ್ಲ. ಅವಳ ಮದುವೆ ತನ್ನ ಹೆಂಡತಿ ಅಣ್ಣನೊಡನೆ ನಿಶ್ಚಯ ಮಾಡಿಯೇ ಬಿಟ್ಟಿದ್ದ.

ತನಗೆ ಮದುವೆಯೇ ಬೇಡಾ ಎಂದು ಅವಳು ಅತ್ತು ಗೋಗರೆದರೂ ಕೇಳದೇ ಇವಳು ಮದುವೆಯಾಗದೇ ಊರಿನಲ್ಲಿ ತನ್ನ ಮರ್ಯಾದೆ ತೆಗೆಯುತ್ತಾಳೆ ಎಂದು ಬೆದರಿಸಿದ. ಕೊನೆಗೆ ತನ್ನನ್ನೇ ಅಸ ಮಾಡಿಕೊಂಡು ಅವರೆಲ್ಲ ಕೂಡಿ ನನಗೆ ಬೋಧನೆ ಮಾಡಲು ಶುರು ಮಾಡಿದರು. ‘‘ಮಗಳಿಗೆ ಬುದ್ಧಿ ಹೇಳಿ. ಮದುವೆ ಮಾಡಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿ ಸಾಯುತ್ತೇನೆ ಹೇಳಿ. ಆಗಲಾದರೂ ಅವಳು ಮದುವೆಗೆ ಒಪ್ಪಬಹುದು. ಮಗಳಿಗೆ ಮದುವೆಯೇ ಆಗದಿದ್ದರೆ ಅವಳ ಅವಸ್ಥೆ ಏನಾಗಬಹುದು ಯೋಚಿಸಿ. ನಿಮಗೆ ಮೊದಲೇ ಮೆರವೆ ರೋಗ ಇದೆ. ಅದು ಉಲ್ಬಣಿಸಿ ಹುಚ್ಚಾಗಿ ಬಿಟ್ಟರೆ ಹುಚ್ಚಿಯ ಮಗಳನ್ನು ಯಾರು ಮದುವೆಯಾಗುತ್ತಾರೆ’’ ಹೇಳಿ ಹೇಳಿ ಅದನ್ನು ಕೇಳಿಯೇ ತನಗೆ ನಿಜವಾಗಿ ಹುಚ್ಚು ಬಡಿಯುತ್ತದೆ ಎಂಬ ಹೆದರಿಕೆಯಲ್ಲೇ ಈ ಒತ್ತಾಯ ತಾಳಲಾರದೇ ಸಿಟ್ಟಿನಲ್ಲಿ ಮಗಳಿಗೆ ಹೇಳಿ ಬಿಟ್ಟಿದ್ದೆ.

‘‘ನೀನು ಮದುವೆಯಾಗುವುದಿಲ್ಲ ಎಂದು ಹಠ ಮಾಡಿದರೆ ನಾನೇ ಸಾಯುತ್ತೇನೆ’’ ಹೇಳಿಯೇ ಬಿಟ್ಟೆ.

ಒಡನೆಯೇ ಪಾಪದ ಅನುಪಮಾ ನನ್ನನ್ನು ಬಿಗಿದಪ್ಪಿ ‘‘ಅಮ್ಮಾ... ಅಮ್ಮಾ! ನೀನು ಸಾಯಬಾರದು. ಅಪ್ಪ ಹೋದ ಮೇಲೆ ನೀನೇ ನನಗೆ ದಿಕ್ಕು. ನೀನು ಸಾಯಬಾರದು ಅಮ್ಮಾ. ನಿನಗೆ ಸಂತೋಷ ಆಗುವುದಾದರೆ ನಾನು ಮದುವೆಯಾಗುತ್ತೇನೆ. ನೀನು ಸಾಯಬಾರದು ಅಮ್ಮಾ’’ ಎಂದು ಗೋಗರೆದಿದ್ದಳು. ಅವಳು ಮದುವೆಯಾಗಲು ಒಪ್ಪಿಗೆ ಕೊಟ್ಟಾಗಲೇ ನಾನು ನಿಜವಾಗಿ ಆಂತರ್ಯದಲ್ಲಿ ಸತ್ತೇ ಹೋಗಿದ್ದೆ.

ಒಪ್ಪಿಗೆ ಕೊಟ್ಟ ಹದಿನೈದು ದಿನದಲ್ಲೇ ತರಾತುರಿಯಲ್ಲೇ ಇನ್ನೂ ಸರಿಯಾಗಿ ಹದಿನೆಂಟು ತುಂಬಿರದ ಚೆಂದದ ಅನುಪಮಾಳ ಮದುವೆ ಅವಳಿಗಿಂತ ಇಪ್ಪತ್ತು ವರ್ಷ ದೊಡ್ಡವನಾದ ಸೊಸೆಯ ಅಣ್ಣನೊಂದಿಗೆ ಜರಗಿಯೇ ಬಿಟ್ಟಿತು. ಅವರ ಮನೆಯಲ್ಲಿ ಮಗಳನ್ನು ತವರು ಮನೆಗೆ ಕರೆಯುವ ಆಚರಣೆಗೆಂದು ಹೋದಾಗ ಅವರ ನೆರೆಮನೆಯವರು ನಾನು ಹುಡುಗಿಯ ತಾಯಿ ಎಂದು ತಿಳಿದಾಗ ನನ್ನನ್ನು ಕರೆದು ಚೆನ್ನಾಗಿ ಜರೆದಿದ್ದರು.

‘‘ಎಂತಹ ರಾಕ್ಷಸಿ ತಾಯಿ ನೀನು! ಅಂತಹ ಚೆಂದದ ಮುದ್ದು ಮಗಳನ್ನು ಯಾರೂ ಹೆಣ್ಣು ಕೊಡದ ಆನೆ ಕಾಲಿರುವ ಆ ಗಂಡಸಿನ ಕೊರಳಿಗೆ ಕಟ್ಟಿದೆಯಲ್ಲ. ಕಟುಕರ ಮನೆಗೆ ಕುರಿಮರಿಯನ್ನು ಕೊಟ್ಟಂತೆ. ನಿನಗೇನಾದರೂ ಬುದ್ಧಿ ಭ್ರಮಣೆಯಾಗಿದೆಯಾ. ಇದಕ್ಕಿಂತ ಮಗಳನ್ನು ಬಾವಿಗೆ ಹಾಕಿ ಸಾಯಿಸಬಹುದಿತ್ತು’’ ಎಂದು ಬದುಕಿಯೂ ಸತ್ತ ದರ್ಶನವಾಗಿತ್ತು. ಅವರಿಗೆ ಮನೆಯಲ್ಲಿ ದುಡಿಯುವ ಸೊತ್ತು ಒಂದು ಬೇಕಿತ್ತು ಎಂದೆಲ್ಲಾ ನನ್ನ ಮೇಲೆ ಉಗಿದಿದ್ದರು.

ತನ್ನ ಹೃದಯದ ಮೇಲೆ ಯಾರೋ ಕಲ್ಲು ಚಪ್ಪಡಿ ಹೇರಿದಂತಹ ಹೃದಯವಿದ್ರಾವಕ ಯಾತನೆ. ಯಾರಲ್ಲಿ ಹೇಳಿಕೊಳ್ಳಲಿ? ತನ್ನ ಹೃದಯವನ್ನೇ ಇರಿಯುತ್ತಿರುವ ಈ ದುಃಖ ಮತ್ತು ಕತ್ತಲೆಯಲ್ಲಿ ಇಡೀ ರಾತ್ರಿ ನಿದ್ರೆ ಇಲ್ಲದೆ ಮಗಳ ಬಿಕ್ಕಳಿಕೆ ಕೇಳುತ್ತಾ ಕಳೆಯಬೇಕು. ಈ ಯಾತನೆ ಸಹಿಸಲಾರೆ ಎನ್ನುವಂತೆ ಅವಳು ಕಣ್ಣು ಮುಚ್ಚಿದರೂ ಆ ಬಿಕ್ಕಳಿಕೆ ಕೇಳುತ್ತಲೇ ಇತ್ತು.

ಒಳಗಿನಿಂದ ಗೊರಕೆಯ ಸದ್ದು ಕೇಳಿಸುತ್ತಿತ್ತು. ಯಾರೋ ಒಬ್ಬರು ಗೊಣಗುಟ್ಟುವುದೂ ಅಸ್ಪಷ್ಟವಾಗಿ ಕೇಳುತ್ತಲಿತ್ತು.

‘‘ಈ ಮುದುಕಿಗೆ ಸುಮ್ಮನೇ ಬಿದ್ದುಕೊಳ್ಳಲೂ ಆಗುವುದಿಲ್ಲ. ಇಡೀ ರಾತ್ರಿ ಬಡಬಡಿಸುತ್ತಲೇ ಇರುತ್ತಾಳೆ. ಈ ಮುದುಕಿ ಕಾಟ ಯಾವಾಗ ತಪ್ಪುತ್ತೋ. ಆದಷ್ಟು ಬೇಗ ಹುಚ್ಚರಾಸ್ಪತ್ರೆಗೆ ಸೇರಿಸಲೇಬೇಕು.

ಇದ್ದಕ್ಕಿದ್ದಂತೆ ಹೇಳಲಾರದ ನೋವು ಜೊತೆಯಲ್ಲೇ ಸಿಟ್ಟು ಒಳಗೆ ಸಿಡಿಯಿತು. ಮುಚ್ಚಿದ ಕಣ್ಣ ಮುಂದೆ ಅಕರಾಳ, ವಿಕರಾಳ ಆಕೃತಿಗಳು. ಅವಳ ಹತ್ತಿರ ಬಂದು ಕೇಕೆ ಹಾಕುತ್ತಾ ಕುಣಿಯ ತೊಡಗಿದವು. ಅವಳ ಕೈ ಕಾಲು ಕಟ್ಟಲು ಬಂದವು. ಧೈರ್ಯವನ್ನೆಲ್ಲಾ ಕೂಡಿಸಿ ಅವಳು ಎದ್ದಳು. ಕತ್ತಲೆಯಲ್ಲೇ ಎದ್ದು ಬಿದ್ದು ಬಾಗಿಲು ತೆರೆದು ಹೊರಗೆ ಓಡುತ್ತಾ ಹೋದಳು. ಈ ಎಲ್ಲಾ ಕಷ್ಟಗಳಿಂದ ಅನುಪಮಾಳನ್ನು ಬಿಡುಗಡೆ ಮಾಡಿಯೇ ಬಿಡುತ್ತೇನೆ ಎಂದು ಕಲ್ಲು, ಮುಳ್ಳು ಚುಚ್ಚುತ್ತಿದ್ದರೂ ಓಡಿದಳು, ಓಡಿದಳು, ಓಡುತ್ತಲೇ ಹೋದಳು.

share
ಕೆ.ತಾರಾಭಟ್
ಕೆ.ತಾರಾಭಟ್
Next Story
X