ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ಮೂಡ ಆಕಾಂಕ್ಷಿ

ಮಂಗಳೂರು ,ಡಿ.4 : ದ.ಕ. ಜಿಲ್ಲಾ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಸಂತೋಷ್ ಕುಮಾರ್ ಶೆಟ್ಟಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಇಬ್ರಾಹೀಂ ಕೋಡಿಜಾಲ್ ರಿಂದ ತೆರವಾದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರು , ಕೈ ತಪ್ಪಿ ಹೋದ ನಂತರ ತೀವ್ರ ನಿರಾಸೆಗೊಂಡಿದ್ದರು.
ಇಂದು ರಾಜೀನಾಮೆ ನೀಡುವ ಮೂಲಕ ಜಲ್ಲಾ ಕಾಂಗ್ರೆಸ್ ನ ಭಿನ್ನಮತವನ್ನು ಬಹಿರಂಗಗೊಂಡಿದೆ.
Next Story





