ಕಾಸರಗೋಡು: ಪೀಠೋಪಕರಣ ತಯಾರಿ ಘಟಕಕ್ಕೆ ಬೆಂಕಿ ತಗಲಿ ಲಕ್ಷಾಂತರ ರೂ. ನಷ್ಟ

ಕಾಸರಗೋಡು, ಡಿ.4: ಪೀಠೋಪಕರಣ ತಯಾರಿ ಘಟಕಕ್ಕೆ ಬೆಂಕಿ ತಗಲಿ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ವಿದ್ಯಾನಗರದಲ್ಲಿ ಬೆಳಿಗ್ಗೆ ನಡೆದಿದೆ.
ಚೆಟ್ಟ೦ಗುಯಿಯಲ್ಲಿರುವ ಘಟಕಕ್ಕೆ ಬೆಂಕಿ ತಗಲಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಘಟಕಗಳ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ , ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದರು.
ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಘಟಕದಲ್ಲಿದ್ದ ಹಲವು ತರದ ಪೀಠೋಪಕರಣಗಳು, ಮರಮಟ್ಟು ಸುಟ್ಟು ಭಸ್ಮವಾಗಿದ್ದು, ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣ ಎನ್ನಲಾಗಿದೆ.
ಎಂ . ಸಲೀಂ ಎಂಬವರ ಮಾಲಕತ್ವದಲ್ಲಿರುವ ಈ ಘಟಕ ಚೆಟ್ಟ೦ಗುಯಿ ಹಿದಾಯತ್ ನಗರದಲ್ಲಿ ಕಾರ್ಯಾಚರಿಸುತ್ತಿದೆ.
ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





