ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಎಪಿ ಉಸ್ತಾದ್
ಡಿಕೆಎಸ್‌ಸಿ 20ನೆ ವಾರ್ಷಿಕ ಮಹಾಸಮ್ಮೇಳನದ ಸಮಾರೋಪ
.jpg)
ಉಡುಪಿ, ಡಿ.4: ಹಲವು ಧರ್ಮಗಳಿರುವ ಭಾರತದಂತಹ ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಸುನ್ನೀ ಜಂ ಇಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದ್ದಾರೆ.
ಮೂಳೂರಿನ ಅಲ್ ಇಹ್ಸಾನ್ ಸ್ಕೂಲ್ ಕ್ಯಾಂಪಸ್‌ನಲ್ಲಿ ರವಿವಾರ ನಡೆದ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ 20ನೆ ವಾರ್ಷಿಕ ಮಹಾ ಸಮ್ಮೇಳನದ ಸಮಾರೋಪ ಮತ್ತು ಸನದುದಾನ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಇಸ್ಲಾಂ ಧರ್ಮವು ಶಾಂತಿ ಸೌಹಾರ್ದತೆಯನ್ನು ಕಲಿಸುತ್ತದೆಯೇ ಹೊರತು ಭಯೋತ್ಪಾದನೆಯನ್ನು ಅಲ್ಲ. ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡವ ರಿಗೂ ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲ. ಧಾರ್ಮಿಕ ಶಿಕ್ಷಣದ ಜೊತೆ ಲೌಕಿಕ ಶಿಕ್ಷಣಕ್ಕೂ ಮುಸ್ಲಿಮರು ಪ್ರಾಮುಖ್ಯತೆ ನೀಡಬೇಕು. ಇದು ಎರಡು ಇದ್ದಾಗ ಮಾತ್ರ ಯಶಸ್ವಿ ಜೀವನ ನಡೆಸಲು ಸಾಧ್ಯ ಎಂದರು.
ಉಡುಪಿ ಜಿಲ್ಲಾ ಖಾಝಿ ಮತ್ತು ಮೂಳೂರು ಅಲ್ ಇಹ್ಸಾನ್ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಡಿಕೆಎಸ್‌ಸಿ ಅಧ್ಯಕ್ಷ ಅಲ್‌ಹಾಜ್ ಅಸ್ಸಯ್ಯಿದ್ ಕೆ.ಎಸ್.ಆಟಕೋಟ ತಂಙಳ್ ಕುಂಬೋಲ್ ಅಲ್‌ಇಹ್ಸಾನ್ ಶರೀಅತ್ ಕಾಲೇಜ್ ವಿದ್ಯಾರ್ಥಿಗಳಿಗೆ ಸನದುದಾನ ಪ್ರದಾನ ಮಾಡಿದರು.
ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ, ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಶಾಸಕರಾದ ವಿನಯ ಕುಮಾರ್ ಸೊರಕೆ, ಮೊಹಿದೀನ್ ಬಾವ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿದರು.
ಕೆಸಿಎಫ್ ಇಂಟರ್ ನ್ಯಾಶನಲ್ ಕೌನ್ಸಿಲ್‌ನ ಅಧ್ಯಕ್ಷ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಅಲ್ ಖಾಮಿಲ್ ದಿಕ್ಸೂಚಿ ಭಾಷಣ ಮಾಡಿದರು.
ಅಸ್ಸಯ್ಯಿದ್ ಜಅ್ಫರ್ ಸ್ವಾದಿಕ್ ತಂಙಳ್, ಸಯ್ಯಿದ್ ಅಲವಿ ತಂಙಳ್ ಕರ್ಕಿ ಹೊನ್ನಾವರ, ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಮನ್‌ಶರ್, ಸಯ್ಯಿದ್ ತ್ವಾಹ ಬಾಫಕೀ ತಂಙಳ್ ಯು.ಎ.ಇ., ಮಾಣಿ ದಾರುಲ್ ಇರ್ಶಾದ್ ಎಜುಕೇಶನ್ ಸೆಂಟರ್‌ನ ಅಧ್ಯಕ್ಷ ಶೈಖುನಾ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್, ಮಂಜನಾಡಿ ಅಲ್ ಮದೀನಾ ಅಧ್ಯಕ್ಷ ಶೈಖುನಾ ಅಲ್‌ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್, ಯೇನಪೋಯ ವಿವಿಯ ಕುಲಪತಿ ಯೇನಪೋಯ ಅಬ್ದುಲ್ ಕುಂಞಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯಹ್ಯಾ ನಖ್ವಾ, ಹಾಜಿ ಝಕ ರಿಯಾ ಜೋಕಟ್ಟೆ, ರಾಜ್ಯ ಎಸ್‌ಇಡಿಸಿ ಅಧ್ಯಕ್ಷ ಕೆ.ಕೆ.ಎಂ.ಕಾಮಿಲ್ ಸಖಾಫಿ, ಡಿಕೆಎಸ್‌ಸಿ ಸ್ಥಾಪಕಾಧ್ಯಕ್ಷ ಹಸನುಲ್ ಫೈಝಿ ಅಜ್ಜಾವರ, ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಕಿನ್ಯ, ಮುಹಮ್ಮದ್ ಅಲ್ ಕಾಸಿಮಿ ಅಳಕೆಮಜಲು, ಅಲ್‌ಹಾಜ್ ಝೈನುದ್ದೀನ್ ಮುಕ್ವೆ, ಎಂ.ಇ.ಮೂಳೂರು, ಮೊಯ್ದಿನ್ ಕುಟ್ಟಿ ಕಕ್ಕಿಂಜೆ, ಇಬ್ರಾಹಿಂ ಕನ್ನಂಗಾರ್, ಹಾಜಿ ಮೊಯ್ದಿನ್ ಗೋಲ್ಡನ್ ಕಂಪೌಂಡ್, ಇಬ್ರಾಹಿಂ ಹಾಜಿ ಕಿನ್ಯ, ಹಾತಿಂ ಕಂಚಿ, ಕೆ.ಎಚ್.ರಫೀಕ್, ನಝೀರ್ ಕಾಶಿಪಟ್ಣ, ಅಬ್ಬಾಸ್ ಎಲಿಮಲೆ, ಇಕ್ರಾ ಮುಲ್ಲಾ ಸಖಾಫಿ, ಇಸ್ಮಾಯಿಲ್ ಮದನಿ, ಬದ್ರುದ್ದೀನ್ ಬಜ್ಪೆ, ಅಶ್ರಫ್ ಅಂಜದಿ, ಅಶ್ರಫ್ ಸಅದಿ ಮಲ್ಲೂರು, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಮನ್‌ಹರ್ ಇಬ್ರಾಹಿಂ, ಅಬೂಬಕ್ಕರ್ ಬರ್ವ, ಹಾಜಿ ಎಚ್.ಬಿ. ಮುಹಮ್ಮದ್, ಇಲ್ಯಾಸ್ ಅಡ್ವಕೇಟ್, ಶಾಬಾನ್ ಹಂಗ್ಳೂರು, ಚೆರಿಯಬ್ಬ ಹಾಜಿ ಮಾವಿನಕಟ್ಟೆ, ಹಾಜಿ ಮೊಯ್ದಿನ್ ಗುಡ್‌ವಿಲ್, ಹಾಜಿ ಅಬೂಬಕ್ಕರ್ ಮುಸ್ಲಿಯಾರ್, ಎಂ.ಎ.ಬಾವ ಹಾಜಿ, ಅಬೂಬಕ್ಕರ್ ನೇಜಾರು, ಅಶ್ರಫ್ ಸಖಾಫಿ, ಹಾಜಿ ಹಾತಿಂ ಕೂಳೂರು, ಶರೀಫ್ ಮಣಿಪಾಲ, ರೈಸ್ಕೊ ಅಬೂಬಕ್ಕರ್ ಪಡುಬಿದ್ರಿ, ಶೇಕಬ್ಬ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ಅಲ್‌ಹಾಜ್ ಬಿ.ಎಂ.ಮುಮ್ತಾಝ್ ಅಲಿ ಕೃಷ್ಣಾಪುರ ಸ್ವಾಗತಿಸಿದರು.
ಮರ್ಕಝ್ ತಅ್ಲೀಮಿಲ್ ಇಹ್ಸಾನ್ ಮ್ಯಾನೇಜರ್ ಯು.ಕೆ.ಮುಸ್ತಫಾ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಫೀಕ್ ಮಾಸ್ಟರ್ ಕಾರ್ಯಕರಮ ನಿರೂಪಿಸಿದರು.







