ಗ್ರಾಮೀಣ ಕ್ರೀಡಾಕೂಟಗಳಿಂದ ಕ್ರೀಡಾ ಪ್ರತಿಭೆಗಳ ಗುರುತಿಸುವಿಕೆ ಸಾಧ್ಯ : ಕೆ.ಅಭಯಚಂದ್ರ ಜೈನ್

ಮೂಲ್ಕಿ ,ಡಿ.4 : ಗ್ರಾಮೀಣ ವಲಯದಲ್ಲಿ ನಡೆಯುವ ಕ್ರೀಡಾಕೂಟಗಳಿಂದ ಕ್ರೀಡಾ ಪ್ರತಿಭೆಗಳ ಗುರುತಿಸುವಿಕೆ ಸಾಧ್ಯಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ಅಮಲೋದ್ಭವ ಮಾತಾ ಚರ್ಚ್ ಪ್ರಾಂಗಣದಲ್ಲಿ ಭಾನುವಾರ ಮೂಲ್ಕಿ ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ ಮತ್ತು ಅದಾನಿ-ಯುಪಿಸಿಎಲ್ ಆಶ್ರಯದಲ್ಲಿ ನಡೆದ ಮಂಗಳೂರು ಧರ್ಮ ಪ್ರಾಂತ್ಯದ ಅಂತರ್ ಚರ್ಚ್‌ಗಳ ಪ್ರೋ ಕಬಡ್ಡಿ ಮತ್ತು ತ್ರೋಬಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾರಂಭದ ಮುಖ್ಯ ಅತಿಥಿ ಅದಾನಿ-ಯುಪಿಸಿಎಲ್ ಪವರ್ ಕಂಪನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ,ಕ್ರೀಡೆ ಮತ್ತುಯುವ ಪ್ರತಿಭೆಗಳ ಅನ್ವೇಷಣೆಗೆ ಅದಾನಿ ಯುಪಿಸಿಎಲ್ ಸಾಕಷ್ಟು ಉತ್ತೇಜನ ನೀಡುತ್ತಿದೆ. ಕಾಪು ಕ್ಷೇತ್ರ ವ್ಯಾಪ್ತಿಯಲ್ಲಿ ಆಧುನಿಕ ರೀತಿಯ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದೇ ರೀತಿ ಆರೋಗ್ಯ, ಶಿಕ್ಷಣ, ಕ್ರೀಡೆ ಹಾಗೂ ಗ್ರಾಮೀಣ ಮೂಲಭೂತ ಸಮಸ್ಯೆ ನಿವಾರಣೆಗೆ ಹಲವಾರು ದೀರ್ಘಾವಧಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಉದಯ ಚೌಟ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಬ್ಬಡ್ಡಿ ಕ್ರೀಡೆಯು ಅಭಿವೃದ್ಧಿ ಪಥದಲ್ಲಿದ್ದು ಅಂತರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿದೆ.ಅವಿಭಜಿತ ದಕ ಜಿಲ್ಲೆಯ ಪ್ರತಿಭಾವಂತ ಕಬಡ್ಡಿ ಆಟಗಾರರಿಗೆ ಬೃಹತ್ ಉದ್ದಿಮೆಗಳು ಉದ್ಯೋಗವಕಾಶ ಕಲ್ಪಿಸಿ ಕ್ರೀಡೆಯ ಉನ್ನತಿಗೆ ಸಡಹಕಾರಿಯಾಗಬೇಕು ಎಂದರು.
ಉಡುಪಿ ಜಿಲ್ಲಾ ವಾರ್ತಾಧಿಕಾರಿ ಕೆ. ರೋಹಿಣಿ, ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಮ್.ಎಚ್. ಅರವಿಂದ ಪೂಂಜಾ, ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ಮೂಲ್ಕಿ ಪೆರಿಷ್ ಪಸ್ಟೋರಲ್ ಪರಿಷದ್ ಉಪಾಧ್ಯಕ್ಷ ಜೋಯೆಲ್ ಹೆರಾಲ್ಡ್ ಡಿಸೋಜಾ, ಅಶ್ವಿನ್ ಆಳ್ವಾರಿಸ್, ಆಸ್ಟನ್ ಫುರ್ಟಾಡೊ, ರತನ್ ಶೆಟ್ಟಿ,ಜಾಯ್ ಕರ್ವಾಲೋ ಮುಖ್ಯ ಅತಿಥಿಗಳಾಗಿದ್ದರು.
ಚರ್ಚ್ ಧರ್ಮಗುರು ರೆ,ಫಾ.ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಸ್ವಾಗತಿಸಿದರು.ಲಿರಿಶಾ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.ಕ್ರಿಸ್‌ಲ್ ಡಿಸೋಜಾ ವಂದಿಸಿದರು.







