ಧರ್ಮ, ದೇವರ ಹೆಸರಿನಲ್ಲಿ ವೌಢ್ಯಾಚರಣೆ ದುರಂತದ ಸಂಗತಿ
ಆಹಾರವನ್ನು ಬಡವರಿಗೆ ಹಂಚಿ, ಲೋಕ ಕಲ್ಯಾಣಕ್ಕೆ ಮುಂದಾಗಲು ಕರೆ

ಸುದರ್ಶನ ಹೋಮಕ್ಕೆ ಪ್ರಗತಿಪರ ಚಿಂತಕರ ಖಂಡನೆ
ದಾವಣಗೆರೆ, ಡಿ.4: ನಗರದ ಮೋತಿ ವೀರಪ್ಪಕಾಲೇಜು ಮೈದಾನದ ಆವರಣದಲ್ಲಿ ಸುದರ್ಶನ ಹೋಮ ನಡೆಯುತ್ತಿರುವುದನ್ನು ಖಂಡಿಸಿ ಪ್ರಗತಿಪರ ಚಿಂತಕರು ಪ್ರತಿಭಟನೆ ನಡೆಸಿದರು.
ರವಿವಾರ ನಗರದ ಜಯದೇವ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಸವಪ್ರಭು ಸ್ವಾಮೀಜಿ, ದೇವರು, ಧರ್ಮದ ಹೆಸರಿನಲ್ಲಿ ತಿನ್ನುವ ಆಹಾರ ಮತ್ತು ಬಟ್ಟೆಯನ್ನು ಹೋಮಕ್ಕೆ ಹಾಕಿ ವ್ಯರ್ಥ ಮಾಡುತ್ತಿರುವುದು ಖಂಡನೀಯ ಎಂದ ಅವರು, ಹೋಮದ ಹೆಸರಿನಲ್ಲಿ ಹಾಲು, ತುಪ್ಪ, ರೇಷ್ಮೆ ಬಟ್ಟೆ ಸೇರಿದಂತೆ ವಿವಿಧ ಆಹಾರ ಪದಾರ್ಥ ಬೆಂಕಿಗೆ ಹಾಕಲಾಗುತ್ತಿದೆ. ಇದರಿಂದ ನಾವು ಬಳಸುವ ಪದಾರ್ಥವನ್ನು ಆಹುತಿ ಮಾಡಿದಂತಾಗುತ್ತದೆ. ಇದರ ಬದಲಾಗಿ ಬಡವರಿಗೆ ಹಾಲು, ತುಪ್ಪವನ್ನು ಹಂಚಬೇಕು. ಆ ಮೂಲಕ ಲೋಕಕಲ್ಯಾಣ ಮಾಡಿದಂತಾಗುತ್ತದೆ ಎಂದರು.
12ನೆ ಶತಮಾನದಲ್ಲಿ ಬಸವಾದಿ ಶರಣರು ಕಾಯಕ ಮಾಡಿ ಬಂದಂತಹ ಹಣದಲ್ಲಿ ದಾಸೋಹ ಮಾಡುತ್ತಿದ್ದರು. ಅಂದು ನಿಜವಾದ ಲೋಕ ಕಲ್ಯಾಣವಾಗುತ್ತಿತ್ತು. ಈಗಲೂ ನಾವು ಅದನ್ನು ಪ್ರತಿಪಾದಿಸಬೇಕು. ಅನಾಥರಿಗೆ, ಬಡವರು, ದೀನದಲಿತರಿಗೆ ಸಹಾಯ ಹಸ್ತ ಚಾಚುವುದರ ಮೂಲಕ ಅವರಲ್ಲಿ ದೇವರನ್ನು ಕಾಣುವ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಪ್ರತಿಪಾದಿಸಿದರು.
ವೌಢ್ಯಾಚರಣೆ ವಿರುದ್ಧ ಹೋರಾಟ ನಡೆಸುತ್ತಿರುವ ಕ್ರಿಯಾ ಸಮಿತಿಯ ಸಂಚಾಲಕ ಶಿವನಕೆರೆ ಬಸವ ಲಿಂಗಪ್ಪಅವರ ಮನೆ ಮೇಲೆ ಕಿಡಿಗೇಡಿಗಳು ಕಳೆದ ರಾತ್ರಿ ಕಲ್ಲು ಎಸೆದಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.
ಶಿವನಕೆರೆ ಬಸವಲಿಂಗಪ್ಪಮಾತನಾಡಿ, ಮಧ್ಯರಾತ್ರಿ 1:35ರ ಸುಮಾರಿನಲ್ಲಿ ತಾನು ಮನೆಯಲ್ಲಿ ಇದ್ದ ವೇಳೆ ಯಾರೋ ಕಲ್ಲು ತೂರಿ ಮನೆಯ ಕಿಟಕಿ ಗಾಜುಗಳು ಪುಡಿ ಮಾಡಿದ್ದಾರೆ. ಸುದರ್ಶನ ಹೋಮದ ವಿರುದ್ಧ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಈ ರೀತಿ ಕಲ್ಲು ತೂರಾಟ ನಡೆಸಿ ಬೆದರಿಸುವ ಪ್ರಯತ್ನ ನಡೆದಿರಬಹುದು ಎಂದರು.
ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪಮಾತನಾಡಿ, ಧರ್ಮ ಮತ್ತು ದೇವರ ಹೆಸರಿನಲ್ಲಿ ವೌಢ್ಯಾಚರಣೆ ಮಾಡುತ್ತಿರುವುದು ವಿಷಾದಕರ ಸಂಗತಿ ಎಂದರು.
ಪ್ರತಿಭಟನೆಯಲ್ಲಿ ಪತ್ರಕರ್ತ ಬಿ.ಎನ್. ಮಲ್ಲೇಶ್, ಕೆ.ಎಲ್. ಭಟ್, ಅನಿಷ್ ಪಾಷಾ, ಸುಮತಿ ಜಯಪ್ಪ, ರಾಘು ದೊಡ್ಮನಿ, ಆವರಗೆರೆ ಚಂದ್ರು, ಆವರಗೆರೆ ವಾಸು, ಸಾಗರ್ ಮತ್ತಿತರರಿದ್ದರು. ದೇಶದಲ್ಲಿ ವೈಚಾರಿಕತೆ ಮತ್ತು ಜ್ಞ್ಞಾನ ಜಾಗೃತಿ ಮೂಡಿಸುತ್ತಿರುವವರ ಮೇಲೆ ಪದೇಪದೇ ಹಲ್ಲೆಗಳು ನಡೆಯುತ್ತಿರುವುದು ವಿಷಾದನೀಯ ಸಂಗತಿ. ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಸಾಹಿತಿ ಕಲಬುರ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಆದರೆ ಆರೋಪಿಗಳನ್ನು ಪತ್ತೆ ಹಚ್ಚದಿರುವುದು ವಿಷಾದನೀಯ. ಬಸವಪ್ರಭು ಸ್ವಾಮೀಜಿ







