ಕಾಲುಜಾರಿ ನೀರಿಗೆ ಬಿದ್ದು ವ್ಯಕ್ತಿಯ ಸಾವು
ಕಡಬ, ಡಿ.4 : ಕೋಡಿಂಬಾಳ ಗ್ರಾಮದ ಬೆದ್ರಾಜೆ ನಿವಾಸಿಯೊಬ್ಬರು ತೋಟದ ಮಧ್ಯೆ ಇರುವ ಕಾಲು ಸೇತುವೆ ಮೇಲಿನಿಂದ ಕಾಲುಜಾರಿ ನೀರಿಗೆ ಬಿದ್ದು, ಮೃತಪಟ್ಟ ಘಟನೆ ಭಾನುವಾರ ರಾತ್ರಿ ಕಂಡುಬಂದಿದೆ.
ಕರಿಯ ಎಂಬವರ ಪುತ್ರ ಬಾಬು (55) ಮೃತ ವ್ಯಕ್ತಿ.
ಗಾಳ ಹಾಕಲೆಂದು ತೆರಳಿದವರು, ತೋಟದಲ್ಲಿನ ಕಾಲು ಸೇತುವೆಯಿಂದ ಕೆಳಗೆ ಬಿದ್ದಿದ್ದು, ಈ ಸಂದರ್ಭದಲ್ಲಿ ಕೆಲಗಡೆ ಇದ್ದ ಕಲ್ಲಿಗೆ ತಲೆ ತಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕಡಬ ಠಾಣಾ ಎಎಸ್ಐ ರವಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ಶವವನ್ನು ಕಡಬ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.
Next Story





