ಮುಲ್ಕಿ: ರಸ್ತೆ ಉದ್ಘಾಟನೆ

ಮುಲ್ಕಿ, ಡಿ.4 : ಸುಮಾರು 16.5 ಲಕ್ಷ ವೆಚ್ಚದಲ್ಲಿ ಡಾಮರೀಕರಣಗೊಂಡ ಪಡುಪಣಂಬೂರು ಗ್ರಾಮಪಂಚಾಯತಿ ವ್ಯಾಪ್ತಿಯ ಪಡುಪಣಂಬೂರು - ಎಸ್‌ಕೋಡಿ -ತೋಕೂರು ರಸ್ತೆಯ ಉದ್ಘಾಟನೆಯನ್ನು ಶಾಸಕ ಅಭಯಚಂದ್ರ ಜೈನ್ ನೆರವೇರಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು,ಪಡುಪಣಂಬೂರು ಗ್ರಾ,ಪಂ. ಅಧ್ಯಕ್ಷ ಮೋಹನ್‌ದಾಸ್,ತಾ.ಪಂ. ಸದಸ್ಯ ದಿವಾಕರ್,ಮೂಡಾದ ಸದಸ್ಯ ವಸಂತ್ ಬೆರ್ನಾಡ್,ಮೂಲ್ಕಿ ಬ್ಲಾಕ್ ಕಾಂಗ್ರಸ್ಸ್ ಅಧ್ಯಕ್ಷ ಧನಂಜಯ ಮಟ್ಟು, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು,ಸಾಹುಲ್ ಹಮದ್,ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜ,ಅಶೋಕ್ ಪೂಜಾರ್,ವಿನೋದ್ ಸಾಲ್ಯಾನ್,ಧರ್ಮಾನಂದ ತೊಕೂರು,ಎಂಜಿನಿಯರ್ ಪ್ರಶಾಂತ್ ಆಳ್ವ,ಗುತ್ತಿಗೆದಾರ ಸಂತೋಷ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ವಾಹೀದ್ ತೋಕೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Next Story





