Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಾಶ್ಮೀರ ಕಣಿವೆಯ ಬವಣೆಗಳು

ಕಾಶ್ಮೀರ ಕಣಿವೆಯ ಬವಣೆಗಳು

ವಾರ್ತಾಭಾರತಿವಾರ್ತಾಭಾರತಿ4 Dec 2016 11:39 PM IST
share
ಕಾಶ್ಮೀರ ಕಣಿವೆಯ ಬವಣೆಗಳು

ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಸಾರ್ವತ್ರಿಕವಾಗಿ ಸ್ವೀಕರಿಸಲಾದ ಮಾನವ ಹಾಗೂ ಪ್ರಜಾಸತ್ತಾತ್ಮಕ ಹಕ್ಕನ್ನು ಉಲ್ಲಂಘಿಸಿವೆ ಎಂದು ರಾಜಾರೋಷವಾಗಿ ಹೇಳಬಹುದು. ಕಾಶ್ಮೀರ ಕಣಿವೆಯ ಮೇಲೆ ಹೇರಲು ಬಯಸಿರುವ ಭಾರತೀಯ ಸಂವಿಧಾನದ ತತ್ವಗಳನ್ನೇ ಗಾಳಿಗೆ ತೂರಿವೆ. ಬದುಕುವ ಹಕ್ಕು, ಮುಕ್ತ ಅಭಿವ್ಯಕ್ತಿಯ ಹಕ್ಕು, ಸಂಘಟನೆಯ ಹಕ್ಕು, ಧಾರ್ಮಿಕ ಹಕ್ಕು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಹಜ ನ್ಯಾಯದ ತತ್ವಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ.

ಆಂಧ್ರಪ್ರದೇಶ, ಗುಜರಾತ್, ಜಮ್ಮು ಕಾಶ್ಮೀರ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾ ರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್ ಒಡಿಶಾ ಹಾಗೂ ತಮಿಳುನಾಡಿನ ಜನಪರ ಹೋರಾಟ, ಮಹಿಳಾ ಸಂಘಟನೆ, ಕಾರ್ಮಿಕ ಸಂಘಟನೆ, ಮಾನವಹಕ್ಕು ಸಂಘಟನೆ, ಯುವಕಸಂಘಗಳ ಕಾರ್ಯಕರ್ತರು, ಪತ್ರಕರ್ತರು, ಲೇಖಕರು, ಚಿತ್ರ ನಿರ್ಮಾಪಕರನ್ನೊಳಗೊಂಡಂತೆ 25 ಮಂದಿ 2016ರ ನವೆಂಬರ್ 11ರಿಂದ 20ರವರೆಗೆ ಕಾಶ್ಮೀರಕ್ಕೆ ಭೇಟಿ ನೀಡಿದೆವು. ಕಳೆದ ಜುಲೈ 8ರಂದು ಭಾರತೀಯ ಸೇನೆಯ ದಾಳಿಗೆ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಬುರ್ಹಾನ್ ವಾನಿ, ಸರ್ತಜ್ ಶೇಖ್ ಹಾಗೂ ಫರ್ವೇಝ್ ಲಷ್ಕರಿ ಬಲಿಯಾದ ಬಳಿಕ ನಾಲ್ಕೂವರೆ ತಿಂಗಳಿಂದ ಕಾಶ್ಮೀರ ಕಣಿವೆಯ ಜನರ ಸ್ಥಿತಿಗತಿ, ಜನಜೀವನ, ನಾಗರಿಕ ಸಮಾಜದ ಸ್ಥಿತಿಗತಿ ಬಗ್ಗೆ ಪ್ರತ್ಯಕ್ಷ ಅನುಭವ ಪಡೆಯುವುದು ನಮ್ಮ ಉದ್ದೇಶವಾಗಿತ್ತು.
ಕಳೆದ 135 ದಿನಗಳಲ್ಲಿ ಭಾರತೀಯ ಸೇನೆ, ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಕೇಂದ್ರ ಅರೆಮಿಲಿಟರಿ ಪಡೆಯ ಸಿಬ್ಬಂದಿ 102 ಮಂದಿ ಶಸ್ತ್ರರಹಿತ ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿ, ಪೆಲ್ಲೆಟ್ ದಾಳಿ ಹಾಗೂ ಶೆಲ್ ದಾಳಿಯಿಂದ ಸುಮಾರು 15 ಸಾವಿರ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 7,000 ಗಂಭೀರ ಗಾಯದ ಪ್ರಕರಣಗಳು. ಹೀಗೆ ಸತ್ತವರಲ್ಲಿ ಹಲವು ಮಂದಿ ಯುವಕರು ಹಾಗೂ ಅಪ್ರಾಪ್ತ ವಯಸ್ಸಿನವರು. ಈ ಮಾಹಿತಿಗಳು ಮಾಧ್ಯಮಗಳಲ್ಲಿ ದಾಖಲಾಗಿವೆ.
ಒಂಬತ್ತು ದಿನಗಳಲ್ಲಿ ನಾವು, ಅನಂತನಾಗ್, ಬಂಡಿಪುರ, ಬಾರಾಮುಲ್ಲಾ, ಬುದಗಾಮ್, ಗಂದೇರ್‌ಬಲ್, ಕುಲ್‌ಗಾಮ್, ಕುಪ್ವಾರ, ಪುಲ್ವಾಮಾ, ಸೋಫಿಯನ್ ಹಾಗೂ ಶ್ರೀನಗರ ಜಿಲ್ಲೆಗಳಿಗೆ ಭೇಟಿ ನೀಡಿದೆವು. ಭದ್ರತಾ ಪಡೆಗಳಿಂದ ಹತ್ಯೆಯಾದವರ ಕುಟುಂಬಗಳನ್ನು ಭೇಟಿ ಮಾಡಿದೆವು. ಮಾನವಹಕ್ಕು ಹೋರಾಟಗಾರರು ಸೇರಿದಂತೆ ಸ್ಥಳಾಂತರಗೊಂಡ ಅಥವಾ ಸೆರೆಮನೆಗೆ ತಳ್ಳಲ್ಪಟ್ಟವರನ್ನೂ ಮಾತನಾಡಿಸಿದೆವು. ಪಾವಾ ಶೆಲ್ ದಾಳಿ ಹಾಗೂ ಪೆಲ್ಲೆಟ್ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಸಂತ್ರಸ್ತರು, ಹತ್ತು ಜಿಲ್ಲೆಗಳ ಜನಸಾಮಾನ್ಯರು. ಜಮ್ಮು ಕಾಶ್ಮೀರ ವಕೀಲರ ಸಂಘದ ಮುಖಂಡರು, ವ್ಯಾಪಾರಿಗಳು, ರಾಜ್ಯ ಸರಕಾರಿ ನೌಕರರು, ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಸಂಘಟನೆಗಳು, ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ಮುಖಂಡರು, ಮುಸ್ಲಿಂ ಲೀಗ್, ಕಾಶ್ಮೀರಿ ಪಂಡಿತರು, ಪರಿಹಾರ ಸಂಸ್ಥೆಗಳು, ಸ್ವಯಂಸೇವಕರು ಹಾಗೂ ಸಮಾಜ ಕಲ್ಯಾಣ ಸಂಘಟನೆಗಳ ಕಾರ್ಯಕರ್ತರು, ಅಂಗವಿಕಲರ ಶಿಕ್ಷಣ ಸಂಸ್ಥೆಗಳು, ಚಿಂತಕರು, ಶಿಕ್ಷಣ ತಜ್ಞರು, ಪತ್ರಕರ್ತರು, ವೈದ್ಯರು, ಕಲಾವಿದರು ಮತ್ತು ರಂಗಕರ್ಮಿಗಳನ್ನು ಭೇಟಿ ಮಾಡಿ, ಚರ್ಚೆ ನಡೆಸಿದೆವು.
ಹಿಜ್ಬುಲ್ ಮುಜಾಹಿದೀನ್ ಕಾರ್ಯಕರ್ತರನ್ನು ಕಾನೂನುಬಾಹಿರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾದ ಘಟನೆಯ ಮರುದಿನದಿಂದಲೇ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹೋರಾಟಗಾರರ ಮೇಲೆ ಭದ್ರತಾ ಪಡೆಗಳು ಪೆಲ್ಲೆಟ್ ಗನ್ ದಾಳಿ, ಪಾವಾ ಶೆಲ್ ದಾಳಿ ಹಾಗೂ ಗುಂಡಿನ ದಾಳಿಯನ್ನೂ ನಡೆಸಿದವು. ಪ್ರತಿಭಟನೆಯಲ್ಲಿ ಇಲ್ಲದ ಕೆಲ ವ್ಯಕ್ತಿಗಳನ್ನೂ ಹುಡುಕಿ ಹತ್ಯೆ ಮಾಡಿದವು ಎಂದೂ ಜನ ದೂರಿದರು. ಮೃತಪಟ್ಟ ಬಹುತೇಕ ಮಂದಿಗೆ ಯಾವ ಎಚ್ಚರಿಕೆಯೂ ನೀಡದೆ ಸೊಂಟದಿಂದ ಮೇಲೆ ಗುಂಡು ಹಾರಿಸಲಾಗಿತ್ತು. ಪೆಲ್ಲೆಟ್‌ಗನ್ ದಾಳಿಯಿಂದ ಆದ ಗಾಯ ಕೂಡಾ ಸೊಂಟದಿಂದ ಮೇಲೆ ಆಗಿತ್ತು. ಕಣ್ಣಿನ ಮಟ್ಟದಲ್ಲಿ ಈ ದಾಳಿ ನಡೆದಿದ್ದು, ಶಾಶ್ವತ ದೃಷ್ಟಿಹೀನತೆ ಹಾಗೂ ಅಂಗವೈಕಲ್ಯಕ್ಕೆ ಇದು ಕಾರಣವಾಗಿದೆ. ಸಾವು ಸಂಭವಿಸಿದ ಪ್ರಕರಣಗಳಲ್ಲಿ ಜಮ್ಮು ಕಾಶ್ಮೀರ ಪೊಲೀಸರು, ಮೃತಪಟ್ಟವರ ವಿರುದ್ಧವೇ ರಾಷ್ಟ್ರವಿರೋಧಿ ಚಟುವಟಿಕೆಯಂಥ ಆರೋಪ ಹೊರಿಸಿ, ಎಫ್‌ಐಆರ್ ದಾಖಲಿಸಿರುವ ಘಟನೆಗಳೂ ಬೆಳಕಿಗೆ ಬಂದವು. ಸರಕಾರದ ಈ ಕ್ರಮಗಳು ಖಂಡಿತವಾಗಿಯೂ ಜೀವಿಸುವ ಹಕ್ಕನ್ನು ಉಲ್ಲಂಘಿಸುವಂಥವು. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯಡಿ ಸುರಕ್ಷೆ ಪಡೆದಿರುವವರ ವಿರುದ್ಧ ಜನರು ಕಾನೂನಾತ್ಮಕ ಪರಿಹಾರಕ್ಕೆ ಮುಂದಾದರೆ, ಅಂಥವರನ್ನು ಪದೇ ಪದೇ ಬಂಧಿಸುವುದು, ಚಿತ್ರಹಿಂಸೆ ನೀಡುವುದು, ದಾಳಿ ಮಾಡುವುದು ಮತ್ತಿತರ ಪ್ರತೀಕಾರ ಕ್ರಮಗಳ ಮೂಲಕ ಹತ್ತಿಕ್ಕಲಾಗುತ್ತಿದೆ. ಇದು ಅಪರಾಧ ಕೃತ್ಯ ಮಾತ್ರವಲ್ಲದೇ, ನ್ಯಾಯ ಪಡೆಯುವುದರಿಂದ ಜನಸಾಮಾನ್ಯರನ್ನು ವಂಚಿಸುವ ಹುನ್ನಾರ.
ಈಗ ಬಂಧನದಲ್ಲಿರುವ ವ್ಯಕ್ತಿಗಳ ವಿರುದ್ಧದ ಬಹುತೇಕ ಆರೋಪಗಳು ಜಮ್ಮು ಕಾಶ್ಮೀರ ಸಾರ್ವಜನಿಕ ಸುರಕ್ಷಾ ಕಾಯ್ದೆ- 1978ರ ಉಲ್ಲಂಘನೆ ಮಾಡಿದ್ದಕ್ಕೆ ಸಂಬಂಧಿಸಿದವು. ಒಂದೇ ರೀತಿಯ ಆರೋಪಗಳನ್ನು ಹೊರಿಸಲಾಗಿದ್ದು, ಬಹುತೇಕ ಎಲ್ಲವೂ ನಿರಾಧಾರ.
ಜಮ್ಮು ಕಾಶ್ಮೀರ ಹೈಕೋರ್ಟ್ ಕಲಾಪವನ್ನೂ ನಾವು ವೀಕ್ಷಿಸಿದೆವು. ಬಹುತೇಕ ಎಲ್ಲ ಪ್ರಕರಣಗಳಲ್ಲಿ ಸರಕಾರಿ ವಕೀಲರು ಸಮಯಾವಕಾಶ ಕೇಳುತ್ತಿದ್ದುದನ್ನು ಗಮನಿಸಿದೆವು. ಬಹಳಷ್ಟು ಮಂದಿ ನ್ಯಾಯಾಲಯ ಮೂಲಕ ಬಿಡುಗಡೆ ಹೊಂದಿದವರೂ ಕಂಡುಬಂದರು. ಹಲವು ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಸಿನವರನ್ನೂ ಬಂಧಿಸಿದ್ದು ಗಮನಕ್ಕೆ ಬಂತು. ಹೀಗೆ ಬಂಧಿಸಲ್ಪಟ್ಟ ನಾಗರಿಕರಿಗೆ ಪೊಲೀಸ್ ಠಾಣೆ ಹಾಗೂ ಜೈಲುಗಳಲ್ಲಿ ವ್ಯಾಪಕ ಚಿತ್ರಹಿಂಸೆ ನೀಡಿರುವುದನ್ನೂ ಆರೋಪಿಗಳ ಕುಟುಂಬದವರು ನಮ್ಮ ಗಮನಕ್ಕೆ ತಂದರು. ಹಲವು ಹಂತಗಳಲ್ಲಿ ಗುಪ್ತಚರ ವಿಭಾಗದವರು ಭೀತಿ ಹುಟ್ಟಿಸುವುದು, ಪರಸ್ಪರ ಅಪನಂಬಿಕೆ ಹಾಗೂ ಶಂಕೆ ಹುಟ್ಟುಹಾಕುತ್ತಿರುವ ಬಗ್ಗೆಯೂ ಜನ ದೂರು ನೀಡಿದರು.
ಹತ್ಯೆಗಳು ನಡೆದ ಪ್ರದೇಶಗಳ ಜನರನ್ನು ಭೇಟಿ ಮಾಡಿ ಚರ್ಚಿಸಿದಾಗ, ಭದ್ರತಾ ಪಡೆಗಳು ಬೇಕಾಬಿಟ್ಟಿ ಗುಂಡುಹಾರಿಸಿ ರುವುದು, ಮದುವೆ ಹಾಗೂ ಅಂತ್ಯಸಂಸ್ಕಾರದಂಥ ಕ್ರಿಯೆಗಳು ನಡೆಯುತ್ತಿದ್ದಾಗ ಕೂಡಾ ದಾಳಿ ಮಾಡಿ ಹತ್ಯೆ ಮಾಡಿದ್ದನ್ನು ಗಮನಕ್ಕೆ ತಂದರು. ಹಲವು ನಿದರ್ಶನಗಳಲ್ಲಿ ಮನೆಗಳ ಕಿಟಕಿ ಮುರಿದು, ಗೃಹಬಳಕೆ ವಸ್ತುಗಳನ್ನು ಹಾನಿ ಮಾಡಿರುವುದು, ಜಾನುವಾರು ಹಾಗೂ ಆಹಾರಧಾನ್ಯಗಳಿಗೆ ಹಾನಿ ಮಾಡಿರುವ ಬಗ್ಗೆಯೂ ಜನ ದೂರಿದರು. ಸಶಸ್ತ್ರ ಪಡೆಗಳು ದಾಳಿಗೆ ಮುನ್ನ ವಿದ್ಯುತ್ ಪರಿವರ್ತಕಗಳಿಗೆ ಹಾನಿಪಡಿಸಿ, ಇಡೀ ಹಳ್ಳಿ ಅಥವಾ ನಗರಕ್ಕೆ ವಿದ್ಯುತ್ ಸರಬರಾಜು ಆಗದಂತೆ ಕೃತ್ಯಗಳನ್ನು ಎಸಗಿರುವುದು ಕೂಡಾ ಗಮನಕ್ಕೆ ಬಂತು. ಅಂದರೆ ಇದು ಸಾಮೂಹಿಕವಾಗಿ ಜನರನ್ನು ಶಿಕ್ಷಿಸುವ ಅಪರಾಧ.
ಭದ್ರತಾ ಪಡೆಯ ಸಿಬ್ಬಂದಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ, ಅನುಚಿತವಾಗಿ ನಡೆದುಕೊಂಡ ಸಾಕಷ್ಟು ನಿದರ್ಶನಗಳನ್ನು ಮಹಿಳೆಯರು ವಿವರಿಸಿದರು. ಜತೆಗೆ ಶೋಧ ಕಾರ್ಯಾಚರಣೆ ಹೆಸರಿನಲ್ಲಿ ಮಹಿಳೆಯರಿಗೆ ದೈಹಿಕ ಕಿರುಕುಳ ನೀಡಿರುವುದು, ನಿಂದಿಸಿರುವ ಬಗ್ಗೆಯೂ ಮಹಿಳೆಯರು ದೂರಿದರು.
ಈ ಕಾರ್ಯಾಚರಣೆಯ ಅವಧಿಯಲ್ಲಿ ಮಹಿಳೆಯರ ಮೇಲೆ ನಡೆದ ದೈಹಿಕ ಹಿಂಸೆ ಕಾರಣದಿಂದ ಹಲವು ಮಂದಿಗೆ ಗರ್ಭಪಾತವಾಗಿದ್ದನ್ನು ಆರೋಗ್ಯ ಕಾರ್ಯಕರ್ತರು ವಿವರಿಸಿದರು. ಇದು ಎಲ್ಲ ಕಾನೂನುಗಳನ್ನು ಉಲ್ಲಂಘಿಸುವ ಹಾಗೂ ಮಹಿಳೆಯರನ್ನು ಲೈಂಗಿಕ ಹಾಗೂ ಇತರ ದೌರ್ಜನ್ಯಗಳಿಂದ ರಕ್ಷಿಸುವ ಕುರಿತ ಅಂತಾರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸುವಂಥದ್ದು.
ಈ ಅವಧಿಯಲ್ಲಿ ಭದ್ರತಾ ಪಡೆಗಳ ದಾಳಿಯಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು, ದಾದಿಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಸಲ್ಲಿಸಿದ ಸೇವೆ ಮಾತ್ರ ಅಮೋಘ. ಬಹುತೇಕ ಎಲ್ಲರೂ ಕಳೆದ ನಾಲ್ಕೂವರೆ ತಿಂಗಳಲ್ಲಿ ಎರಡು ಮೂರು ದಿನಗಳ ಕಾಲ ನಿರಂತರವಾಗಿ ಅಹೋರಾತ್ರಿ ದುಡಿದಿದ್ದಾರೆ. ಇಷ್ಟಾಗಿಯೂ ಹಲವು ವೈದ್ಯರಿಗೆ ಸರಕಾರ ಹಾಗೂ ಗುಪ್ತಚರ ವಿಭಾಗದವರು ಕಿರುಕುಳ ನೀಡಿ, ರೋಗಿಗಳ ಗುರುತನ್ನು ಬಹಿರಂಗಪಡಿಸುವಂತೆ ಒತ್ತಡ ತರುತ್ತಿರುವ ವಿಚಾರ ಕೂಡಾ ಗಮನಕ್ಕೆ ಬಂತು. ಭದ್ರತಾ ಪಡೆಗಳು ಆಸ್ಪತ್ರೆಗಳ ಮೇಲೆ, ಮಹಿಳಾ ವಾರ್ಡ್‌ಗಳ ಮೇಲೂ ದಾಳಿ ನಡೆಸಿ, ಆ್ಯಂಬುಲೆನ್ಸ್ ಚಾಲಕರನ್ನು ಬೆದರಿಸಿದ್ದು ಕೂಡಾ ಗಮನಕ್ಕೆ ಬಂತು. ಇಂಥ ರೋಗಿಗಳ ನೆರವಿಗಾಗಿ ಸ್ವಯಂಸೇವಾ ಸಂಸ್ಥೆಗಳು, ಸಮಾಜ ಕಲ್ಯಾಣ ಸಂಘಟನೆಗಳು ಹಾಗೂ ಉದ್ಯಮಿಗಳು ಆರಂಭಿಸಿದ ಪರಿಹಾರ ಕೇಂದ್ರಗಳನ್ನು ಕೂಡಾ ಭದ್ರತಾ ಪಡೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು. ಒಂದು ಪ್ರಕರಣದಲ್ಲಂತೂ ತೀವ್ರ ನೆರವು ಘಟಕದ ಮುಖಂಡನನ್ನು ಹದಿನೈದು ದಿನಗಳ ಕಾಲ ಜೈಲಿಗೆ ಅಟ್ಟಲಾಗಿತ್ತು ಎನ್ನುವುದನ್ನು ಹಿರಿಯ ಸರಕಾರಿ ವೈದ್ಯರೊಬ್ಬರು ಗಮನಕ್ಕೆ ತಂದರು. ಸರಕಾರದ ಈ ಕ್ರಮವಂತೂ ಭಾರತ ವಿಶ್ವಸಂಸ್ಥೆಯ ಜತೆ ಮಾಡಿಕೊಂಡ ಒಪ್ಪಂದವನ್ನೇ ಉಲ್ಲಂಘಿಸುವಂಥದ್ದು.
ಸ್ಥಳೀಯ ಪಟ್ಟಣ ಹಾಗೂ ಗ್ರಾಮಗಳಲ್ಲಿ ಮಸೀದಿಗಳನ್ನು ಸರಕಾರಿ ಅಧಿಕಾರಿಗಳು ಮುಚ್ಚಿಸಿದ್ದಕ್ಕೆ ನಾವೇ ಸಾಕ್ಷಿಗಳು. ಶ್ರೀನಗರದ ಜಾಮಿಯಾ ಮಸೀದಿ, ಸೋಫಿಯನ್‌ನ ಜಾಮಿಯಾ ಮಸೀದಿ ಸೇರಿದಂತೆ ಕಾಶ್ಮೀರ ಕಣಿವೆಯ ಎಲ್ಲೆಡೆ ಇಂಥ ಪ್ರಕರಣಗಳು ಕಂಡುಬಂದವು. ಇದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ತರುವಂಥ ಕ್ರಮ.
ಇಂಟರ್‌ನೆಟ್, ಮೊಬೈಲ್ ಹಾಗೂ ದೂರವಾಣಿ ಸೇವೆಗಳನ್ನು ನಿಷೇಧಿಸಿರುವುದನ್ನೂ ನಾವು ಗಮನಿಸಿದೆವು. ಭದ್ರತಾ ಪಡೆಗಳ ದಾಳಿಯ ಬಗ್ಗೆ ವರದಿ ಮಾಡಿದ ಪತ್ರಿಕೆಗಳನ್ನು ಜುಲೈ ತಿಂಗಳ ಹಲವು ದಿನಗಳ ಕಾಲ ಮುಚ್ಚಿರುವುದು ಹಾಗೂ ಕಾಶ್ಮೀರ ರೀಡರ್ ಪತ್ರಿಕೆಯನ್ನು ಖಾಯಂ ಆಗಿ ಮುಚ್ಚಿಸಿರುವುದು ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ. ಸರಕಾರಿ ಅಧಿಕಾರಿಗಳನ್ನೂ ಗುರಿ ಮಾಡಿರುವ ನಿದರ್ಶನಗಳು ಕೂಡಾ ಗೋಚರಿಸಿದವು. 12 ಮಂದಿಯನ್ನು ಏಕಕಾಲಕ್ಕೆ ವಜಾ ಮಾಡಿರುವುದು, ವೇತನ ಪಾವತಿ ನಿರಾಕರಿಸಿರುವುದು, ಶೋಕಾಸ್ ನೋಟಿಸ್ ನೀಡಿರುವುದು ಮತ್ತಿತರ ಸೇಡಿನ ಕ್ರಮಗಳ ವಿರುದ್ಧ ಸರಕಾರಿ ನೌಕರರ ಸಂಘಟನೆಗಳು ಪ್ರತಿಭಟನೆಯನ್ನೂ ಮಾಡಿವೆ. ಇದು ಸಂಘಟನೆಯ ಹಕ್ಕನ್ನು ಉಲ್ಲಂಘಿಸುವ ಕೃತ್ಯ,
ನಾವು ಕಾಶ್ಮೀರದಲ್ಲಿದ್ದ ಒಂಬತ್ತು ದಿನಗಳ ಕಾಲ ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ನೀಡಿದ ಬಂದ್ ಕರೆಗೆ ಜನ ಸಕಾರಾತ್ಮಕವಾಗಿ ಸ್ಪಂದಿಸಿದರು. ಇದು ಭಾರತ ಸರಕಾರದ ವಿರುದ್ಧದ ಜನರ ಪ್ರತಿಭಟನಾತ್ಮಕ ಮನೋಭಾವವನ್ನು ತೋರಿಸಿಕೊಟ್ಟಿತು.
ಕಾಶ್ಮೀರ ಕಣಿವೆಯ ಬಹುತೇಕ ಎಲ್ಲರೂ, ಭಾರತ- ಪಾಕಿಸ್ತಾನ ವಿಭಜನೆ ಕಾಲದಿಂದಲೂ ಇರುವ ಕಾಶ್ಮೀರ ವಿಷಯದ ಬಗೆಗಿನ ವ್ಯಾಜ್ಯದ ಬಗ್ಗೆ ಮಾತನಾಡುತ್ತಾರೆ. ಜತೆಗೆ ಕಾಶ್ಮೀರ ಜನರ ಸ್ವಯಂಬದ್ಧತೆಯ ಪ್ರಯತ್ನಗಳನ್ನೂ ಜನ ವಿವರಿಸುತ್ತಾರೆ. 1989ರ ಬಳಿಕವಂತೂ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಿಸುತ್ತಲೇ ಬಂದ ಭಾರತ ಸರಕಾರದ ಕ್ರಮದ ಬಗ್ಗೆ ಜನರಲ್ಲಿ ಆಕ್ರೋಶ ಮಡುಗಟ್ಟಿದೆ.
ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೂ ಭಾರತ ಸರಕಾರ ಹಾಗೂ ಯಾವ ಪಕ್ಷಗಳೂ, ಕಾಶ್ಮೀರ ಜನತೆಯ ರಾಜಕೀಯ ಭಾವನೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿಲ್ಲ. ಹಾಲಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರ ಹಾಗೂ ರಾಜ್ಯದ ಚುಕ್ಕಾಣಿ ಹಿಡಿದಿರುವ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ, ಜನರ ಭಾವನೆಗಳಿಗೆ ಸ್ಪಂದಿಸದಿರುವುದು ಮಾತ್ರವಲ್ಲದೇ ಕಾಶ್ಮೀರ ಜನತೆ ಜತೆ ಮಾತುಕತೆಗೂ ಸಿದ್ಧವಿಲ್ಲ ಎಂಬ ಬಗ್ಗೆಯೂ ಜನ ಆಕ್ರೋಶ ವ್ಯಕ್ತಪಡಿಸಿದರು.
ಪಿಡಿಪಿ ಮುಖಂಡರ ಜತೆ ನಾವು ಮಾತುಕತೆ ನಡೆಸಿದಾಗಲೂ, ಕಾಶ್ಮೀರ ಜನತೆಯ ಜತೆ ಯಾವ ಮಾತುಕತೆಯೂ ಇಲ್ಲ ಎಂಬ ಕೇಂದ್ರದ ನಿರ್ಧಾರವನ್ನೇ ಬೆಂಬಲಿಸಿದರು. ಈ ನಾಲ್ಕೂವರೆ ತಿಂಗಳ ಅವಧಿಯಲ್ಲಿ ಕೇಂದ್ರ ಸರಕಾರ ಪಾಕಿಸ್ತಾನದ ಜತೆಗೆ ಯುದ್ಧದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದು, ಉರಿ ಘಟನೆಯ ಹೆಸರಿನಲ್ಲಿ ಹಿಂದೂ ಬಹುಸಂಖ್ಯಾತ ಭಾವನೆಗಳನ್ನು ಕಾಶ್ಮೀರ, ಪಾಕಿಸ್ತಾನ ಹಾಗೂ ಇಸ್ಲಾಮಿಕ್ ನಂಬಿಕೆಗಳ ವಿರುದ್ಧವಾಗಿ ಕೆರಳಿಸುವ ಪ್ರಯತ್ನ ಮಾಡಿದೆ.
ಅಂತಿಮವಾಗಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಸಾರ್ವತ್ರಿಕವಾಗಿ ಸ್ವೀಕರಿಸಲಾದ ಮಾನವ ಹಾಗೂ ಪ್ರಜಾಸತ್ತಾತ್ಮಕ ಹಕ್ಕನ್ನು ಉಲ್ಲಂಘಿಸಿವೆ ಎಂದು ರಾಜಾರೋಷವಾಗಿ ಹೇಳಬಹುದು. ಕಾಶ್ಮೀರ ಕಣಿವೆಯ ಮೇಲೆ ಹೇರಲು ಬಯಸಿ ರುವ ಭಾರತೀಯ ಸಂವಿಧಾನದ ತತ್ವಗಳನ್ನೇ ಗಾಳಿಗೆ ತೂರಿವೆ. ಬದುಕುವ ಹಕ್ಕು, ಮುಕ್ತ ಅಭಿವ್ಯಕ್ತಿಯ ಹಕ್ಕು, ಸಂಘಟನೆಯ ಹಕ್ಕು, ಧಾರ್ಮಿಕ ಹಕ್ಕು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಹಜ ನ್ಯಾಯದ ತತ್ವಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ. ಬಿಜೆಪಿಯ ಹಿರಿಯ ಮುಖಂಡರು ಪದೇ ಪದೇ ಕಾಶ್ಮೀರ ಜನತೆ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಕೂಡಾ ಕಳವಳಕಾರಿ. ಸರಕಾರಿ ಕ್ರಮಗಳ ಹೊಣೆಗಾರಿಕೆ ಬಗ್ಗೆ ಮಾತನಾಡುವ ಧೈರ್ಯ ಸಂಸತ್ತಿನ ವಿರೋಧ ಪಕ್ಷಗಳಿಗೂ ಇಲ್ಲದಿರುವುದು ನಿಜಕ್ಕೂ ವಿಷಾದನೀಯ. ಉಭಯ ಸರಕಾರಗಳು ಸಾಧ್ಯವಿರುವ ಎಲ್ಲ ಬಲ ಪ್ರಯೋಗ ಮಾಡುವ ಮೂಲಕ, ಜನರ ಆಕಾಂಕ್ಷೆಗಳಿಗೆ ವಿರುದ್ಧವಾಗಿ ವರ್ತಿಸುತ್ತಿವೆ. ಸಮಾಜದ ವೈವಿಧ್ಯಮಯ ವರ್ಗವನ್ನು ಪ್ರತಿನಿಧಿಸುವ ನಾವು ಅಂತಿಮವಾಗಿ ಹೇಳುವುದೆಂದರೆ ಸರಕಾರಿ ಕ್ರಮಗಳು ಪ್ರಜಾಸತ್ತಾತ್ಮಕ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಆದ್ದರಿಂದ ಕೇಂದ್ರ ಸರಕಾರ ಈ ಕೆಳಗಿನ ಕ್ರಮ ಕೈಗೊಳ್ಳಬೇಕು ಎಂದು ಪ್ರಬಲವಾಗಿ ಆಗ್ರಹಿಸುತ್ತೇವೆ.
1. ಕಾಶ್ಮೀರ ಸಮಸ್ಯೆಯನ್ನು ಸರಿಯಾಗಿ ಗುರುತಿಸಿ, ಇದರ ಪರಿಹಾರಕ್ಕೆ ರಾಜಕೀಯ ಇತ್ಯರ್ಥ ಅನಿವಾರ್ಯ ಎನ್ನುವುದನ್ನು ಒಪ್ಪಿಕೊಳ್ಳಿ. ಇದರ ಬದಲಾಗಿ ಮಿಲಿಟರಿ ಹಸ್ತಕ್ಷೇಪ ಹಾಗೂ ಜನರ ಹಕ್ಕುಗಳನ್ನು ಹತ್ತಿಕ್ಕುವುದರಿಂದ ಇದು ಸಾಧ್ಯವಿಲ್ಲ.
2. ಸಿಆರ್‌ಪಿಎಫ್, ಸೇನೆ ಹಾಗೂ ಅರೆಮಿಲಿಟರಿ ಪಡೆಯನ್ನು ತಕ್ಷಣ ಇಲ್ಲಿಂದ ವಾಪಸ್ ಕರೆಸಿಕೊಳ್ಳಬೇಕು.
3. ಜಮ್ಮು ಕಾಶ್ಮೀರ ಸಾರ್ವಜನಿಕ ಸುರಕ್ಷಾ ಕಾಯ್ದೆ- 1978ನ್ನು ರದ್ದು ಮಾಡಬೇಕು ಹಾಗೂ ಸಶಸ್ತ್ರ ಪಡೆಗಳ (ಜಮ್ಮು ಮತ್ತು ಕಾಶ್ಮೀರ) ವಿಶೇಷಾಧಿಕಾರ ಕಾಯ್ದೆ- 1990ರ ರದ್ದತಿ
4. ಎಲ್ಲ ರಾಜಕೀಯ ಕೈದಿಗಳ ಬಿಡುಗಡೆ. ಅದರಲ್ಲೂ ಮುಖ್ಯವಾಗಿ ಜಮ್ಮು ಕಾಶ್ಮೀರ ಸಾರ್ವಜನಿಕ ಸುರಕ್ಷಾ ಕಾಯ್ದೆ- 1978ರ ಅನ್ವಯ ಬಂಧಿಸಲಾದ ಮಂದಿಯನ್ನು ಬಿಡುಗಡೆ ಮಾಡುವುದು.
5. ಮಾನವಹಕ್ಕುಗಳ ಹೈಕಮಿಷನ್ ಹಾಗೂ ವಿಶ್ವಸಂಸ್ಥೆಯ ಸತ್ಯಶೋಧನಾ ತಂಡ ಇಲ್ಲಿಗೆ ಭೇಟಿ ನೀಡಲು ಅವಕಾಶ ಮಾಡಿಕೊಡಬೇಕು.
6. ಎಲ್ಲ ಕಾನೂನು ಬಾಹಿರ ಹತ್ಯೆಗಳ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ನ್ಯಾಯಮಂಡಳಿಯನ್ನು ರಚಿಸಬೇಕು.

7. ಕಾಶ್ಮೀರ ಜನತೆಯ ಜತೆ ಮುಕ್ತ ಹಾಗೂ ಪಾರದರ್ಶಕ ಮಾತುಕತೆಗೆ ಮುಂದಾಗಬೇಕು. ಭಾರತ ಸರಕಾರದ ಕ್ರಮಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದದ್ದು ಮತ್ತು 21ನೆ ಶತಮಾನದ ನಾಗರಿಕ ಸಮಾಜದ ಮೌಲ್ಯಗಳಿಗೆ ಅನುಗುಣವಾಗಿ ಸ್ವೀಕಾರಾರ್ಹವಲ್ಲ ಎನ್ನುವುದನ್ನು ಭಾರತೀಯ ನಾಗರಿಕರು ಗಮನಿಸಬೇಕು ಎಂಬ ಮನವಿಯನ್ನೂ ಮಾಡುತ್ತಿದ್ದೇವೆ. ಕಾಶ್ಮೀರ ಜನತೆಗೆ ಆಗುತ್ತಿರುವ ಅನ್ಯಾಯವನ್ನು ಕೊನೆಗೊಳಿಸಿ, ಅವರ ಪ್ರಜಾಸತ್ತಾತ್ಮಕ ಆಕಾಂಕ್ಷೆಗಳನ್ನು ಈಡೇರಿಸುವಂತೆಯೂ ಮನವಿ ಮಾಡುತ್ತಿದ್ದೇವೆ.

ಸಹಿ ಮಾಡಿದವರು: ಅಮೃತರಾಜ್ ಸ್ಟೀಫನ್, ಛಾಯಾಗ್ರಾಹಕ.
ಅನುರಾಧಾ ಭಾಸಿನ್, ಈದ್ ಖಜೂರಿಯಾ, ಜತಿನ್ ದೇಸಾಯಿ, ಸಂತೋಷ್ ಖಜೂರಿಯಾ -ಪಾಕಿಸ್ತಾನ್ ಇಂಡಿಯಾ ಪೀಪಲ್ಸ್ ಫೋರಂ ಫಾರ್ ಪೀಸ್ ಆ್ಯಂಡ್ ಡೆಮಾಕ್ರಸಿ.
ಬಿಲಾಲ್ ಖಾನ್ -ಘರ್ ಬಚಾವೊ ಘರ್ ಬನಾವೊ ಆಂದೋಲನ್
ಮೇಧಾ ಪಾಟ್ಕರ್, ದೇವಿಸಿಂಗ್ ತೋಮರ್-ನರ್ಮದಾ ಬಜಾವೊ ಆಂದೋಲನ
ಗೌತಮ್ ಮೋದಿ -ನ್ಯೂ ಟ್ರೇಡ್ ಯೂನಿಯನ್ ಇನಿಶಿಯೇಟಿವ್
ಕವಿತಾ ಕೃಷ್ಣನ್ -ಆಲ್ ಇಂಡಿಯಾ ಪ್ರೊಗ್ರೆಸ್ಸೀವ್ ವುಮನ್ಸ್ ಅಸೋಸಿಯೇಶನ್
ಲಕ್ಷ್ಮೀ ಪ್ರೇಂಕುಮಾರ್ -ಸಂಶೋಧಕಿ
ಮಧುರೇಶ್ ಕುಮಾರ್- ನ್ಯಾಷನಲ್ ಅಲೈನ್ಸ್ ಆಫ್ ಪೀಪಲ್ಸ್ ಮೂವ್‌ಮೆಂಟ್
ಮುಜಾಹಿದ್ ನಫೀಸ್ -ನ್ಯಾಷನಲ್ ಫೋರಂ ಆನ್ ರೈಟ್ ಟೂ ಎಜ್ಯುಕೇಶನ್
ಫೊಕ್ರೇಲ್ ಕೃಜೀನಿ, ರಜೆಂದೈ ಬೈರಿಯಾಮ್ -ನಾಗಾ ಪೀಪಲ್ಸ್ ಮೂವ್‌ಮೆಂಟ್ ಫಾರ್ ಹ್ಯೂಮನ್ ರೈಟ್ಸ್
ಪ್ರಮೋದ್ ಪೂಝಾ, ಪ್ರಜಾಕ್ತ ಧುಲಪ್, ಪ್ರಿಯಾಂಕಾ ಕೋತಂರಾಜು -ಪತ್ರಕರ್ತರು
 ರಾಜೇಂದ್ರ ರವಿ -ನ್ಯಾಷನಲ್ ಅಲೈನ್ಸ್ ಆಫ್ ಪೀಪಲ್ಸ್ ಮೂವ್‌ಮೆಂಟ್
ಸಂಜೀವ್ ಕುಮಾರ್ -ದಿಲ್ಲಿ ಸಾಲಿಡಾರಿಟಿ ಗ್ರೂಪ್
ಶಂಕರ್ ಮಹಾನಂದ್ -ಜನವಾದಿ ಸಾಂಸ್ಕೃತಿಕ ಆಂದೋಲನ
ಸೊರೋಜ್ ಮಹಾಂತಿ -ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ (ಒಡಿಶಾ)
ಎಸ್.ಪಿ.ಉದಯಕುಮಾರ್, ಪೀಪಲ್ಸ್ ಮೂವ್‌ಮೆಂಟ್ ಎಗನೆಸ್ಟ್ ನ್ಯೂಕ್ಲಿಯರ್ ಎನರ್ಜಿ
ಸ್ವಾತಿ ಶೇಷಾದ್ರಿ -ಸಂಶೋಧಕಿ
ವಸುಂಧರಾ ಜೈರತ್ -ನ್ಯೂ ಸೋಶಿಯನ್ ಇನಿಶಿಯೇಟಿವ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X