ಮುಂಬೈ ಟೆಸ್ಟ್‌ಗೆ ಸಹಾ ಅಲಭ್ಯ?

ಮುಂಬೈ, ಡಿ.4: ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ದಿಮಾನ್ ಸಹಾ ಎಡಗಾಲಿನ ನೋವಿನಿಂದ ಸಂಪೂರ್ಣ ಚೇತರಿಸಿಕೊಳ್ಳದಿದ್ದರೆ ರವಿವಾರ ಮುಂಬೈನಲ್ಲಿ ಆರಂಭವಾಗಲಿರುವ ನಾಲ್ಕನೆ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ.
ಸಹಾ ಆಡಲು ಫಿಟ್ ಆಗದೇ ಇದ್ದರೆ ಪಾರ್ಥಿವ್ ಪಟೇಲ್ ಇಂಗ್ಲೆಂಡ್ ವಿರುದ್ಧ ನಾಲ್ಕನೆ ಟೆಸ್ಟ್ ಪಂದ್ಯ ಆಡಲಿದ್ದಾರೆ. ಪಟೇಲ್ ದೀರ್ಘ ಸಮಯದ ಬಳಿಕ ಮೊಹಾಲಿಯಲ್ಲಿ ಭಾರತದ ಪರ ಟೆಸ್ಟ್ ಪಂದ್ಯ ಆಡಿದ್ದರು.
ಮೊದಲ ಮೂರು ಟೆಸ್ಟ್ ಪಂದ್ಯಗಳಿಗೆ ತಂಡಕ್ಕೆ ಆಯ್ಕೆಯಾಗಿದ್ದ ಇಶಾಂತ್ ಶರ್ಮ ಮದುವೆಯ ಹಿನ್ನೆಲೆಯಲ್ಲಿ 14 ಸದಸ್ಯರ ತಂಡದಿಂದ ಹೊರಗಿಡಲು ಆಯ್ಕೆಗಾರರು ನಿರ್ಧರಿಸಿದ್ದಾರೆ.
‘‘ರಣಜಿ ಟ್ರೋಫಿ ನಡೆಯುತ್ತಿರುವ ಕಾರಣ ತಂಡದಲ್ಲಿ ಹೆಚ್ಚಿನ ಆಟಗಾರರನ್ನು ಇರಿಸಿಕೊಳ್ಳುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ಥಿವ್ ಪಟೇಲ್ ಮೊಹಾಲಿ ಟೆಸ್ಟ್‌ನಲ್ಲಿ ಮುರಳಿ ವಿಜಯ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ್ದರು. ಎಡಗೈ ಬ್ಯಾಟ್ಸ್‌ಮನ್ ಪಟೇಲ್ 42 ಹಾಗೂ ಅಜೇಯ 67 ರನ್ ಗಳಿಸಿದ್ದರು. ಈ ಮೂಲಕ ಭಾರತ ತಂಡ ಇಂಗ್ಲೆಂಡ್‌ನ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿ 1-0 ಮುನ್ನಡೆ ಸಾಧಿಸಲು ನೆರವಾಗಿದ್ದರು.
ಕೆಎಲ್ ರಾಹುಲ್ ಮುಂಬೈ ಟೆಸ್ಟ್‌ಗೆ ಫಿಟ್ ಆಗುವ ನಿರೀಕ್ಷೆಯಿದೆ. ಒಂದು ವೇಳೆ ರಾಹುಲ್ ಆಡಲು ಫಿಟ್‌ನೆಸ್ ಪಡೆದರೆ ಪಾರ್ಥಿವ್ ಪಟೇಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಮೊಹಾಲಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಕರುಣ್ ನಾಯರ್ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ.
ಮುಂಬೈ ಟೆಸ್ಟ್‌ಗೆ ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಪಾರ್ಥಿವ್ ಪಟೇಲ್(ವಿಕೆಟ್‌ಕೀಪರ್), ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಎಂ.ವಿಜಯ್, ಚೇತೇಶ್ವರ ಪೂಜಾರ, ಕರುಣ್ ನಾಯರ್, ಆರ್.ಅಶ್ವಿನ್, ರವೀಂದ್ರ ಜಡೇಜ, ಜಯಂತ್ ಯಾದವ್, ಅಮಿತ್ ಮಿಶ್ರಾ, ಮುಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ ಕುಮಾರ್.







