ಮತ್ತೆ ಕಾಣಿಸಿಕೊಂಡ ಕಿಮ್ ಜೊಂಗ್ ಪತ್ನಿ

ಸಿಯೋಲ್, ಡಿ.4: ಉತ್ತರ ಕೊರಿಯದ ಅಧ್ಯಕ್ಷ ಕಿಮ್ ಜೊಂಗ್-ಉನ್ ಅವರ ಪತ್ನಿ ರಿ ಸೊಲ್-ಜು 9 ತಿಂಗಳುಗಳ ಸುದೀರ್ಘ ಅಂತರದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ಪತಿಯ ಜೊತೆಗೆ ಸೇನಾ ಪರೇಡ್‌ನ್ನು ವೀಕ್ಷಿಸುವ ಮೂಲಕ, ಹಲವು ಊಹಾಪೋಹಗಳಿಗೆ ತೆರೆಯೆಳೆದಿದ್ದಾರೆ.
ಕಳೆದ ಮಾರ್ಚ್ 28ರಂದು ಪ್ಯೊಂಗ್‌ಯಾಂಗ್‌ನಲ್ಲಿರುವ ವಾಣಿಜ್ಯ ಸಂಕೀರ್ಣವೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆನಂತರ ರಿ ಸೊಲ್-ಜು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲೇ ಇಲ್ಲ.
Next Story





