ಕ್ಯಾಸ್ಟ್ರೋಗೆ ಸ್ಮಾರಕವಿಲ್ಲ
ಸ್ಯಾಂಟಿಯಾಗೊ, ಡಿ.4: ಮರಣಾನಂತರ ತನ್ನ ಗೌರವಾರ್ಥವಾಗಿ ಯಾವುದೇ ಪ್ರತಿಮೆಗಳನ್ನು ಸ್ಥಾಪಿಸಕೂಡದು ಹಾಗೂ ರಸ್ತೆಗಳಿಗೆ ತನ್ನ ಹೆಸರನ್ನು ಇರಿಸಕೂಡದೆಂಬ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ ಅಂತಿಮ ಇಚ್ಚೆಯನ್ನು ಕ್ಯೂಬಾ ಗೌರವಿಸುವುದಾಗಿ ಅಧ್ಯಕ್ಷ ರಾವುಲ್ ಕ್ಯಾಸ್ಟ್ರೋ ಶನಿವಾರ ತಿಳಿಸಿದ್ದಾರೆ. ಫಿಡೆಲ್ ಕ್ಯಾಸ್ಟ್ರೋ ಅವರ ಈ ಆಶಯವನ್ನು ಈಡೇರಿಸಲು ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಅಸೆಂಬ್ಲಿಯ ಸಭೆಯಲ್ಲಿ ಶಾಸನವೊಂದನ್ನು ಮಂಡಿಸ ಲಾಗುವುದು ಎಂದವರು ತಿಳಿಸಿದ್ದಾರೆ. ಕ್ಯಾಸ್ಟ್ರೋ ಅಂತ್ಯಕ್ರಿಯೆಗೆ ಮುನ್ನಾ ದಿನವಾದ ಶನಿವಾರ ಸ್ಯಾಂಟಿಯಾಗೊ ಡೆ ಕ್ಯೂಬಾ ನಗರದಲ್ಲಿ ಬೃಹತ್ ರ್ಯಾಲಿಯೊಂದರಲ್ಲಿ ವುಲ್ ಕ್ಯಾಸ್ಟ್ರೋ ಈ ವಿಷಯವನ್ನು ತಿಳಿಸಿದರು.
Next Story





