ಟ್ರಂಪ್ ಪ್ರಮಾಣಕ್ಕೆ ನವಾಝ್?

ಇಸ್ಲಾಮಾಬಾದ್,ಡಿ.4: ಜನವರಿಯಲ್ಲಿ ನಡೆಯಲಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಕ್ ಪ್ರಧಾನಿ ನವಾಝ್ ಶರೀಫ್ ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ವಾರ ಶರೀಫ್ ಹಾಗೂ ಟ್ರಂಪ್ ನಡುವೆ ದೂರವಾಣಿ ಮಾತುಕತೆ ನಡೆದ ಬೆನ್ನಲ್ಲೇ ಈ ವರದಿಗಳು ಬಂದಿವೆ. ನವಾಝ್ ಶರೀಫ್ ಅವರ ಅಮೆರಿಕ ಪ್ರವಾಸ ಕಾರ್ಯಕ್ರಮಕ್ಕೆ ಅಂತಿಮ ರೂಪುರೇಷೆ ನೀಡಲು ವಿದೇಶಾಂಗ ವ್ಯವಹಾರಗಳ ವಿಶೇಷ ಸಹಾಯಕ ಅಲ್‌ಫತೇಮಿ ಶೀಘ್ರದಲ್ಲೇ ವಾಶಿಂಗ್ಟನ್‌ಗೆ ತೆರಳಲಿದ್ದಾರೆಂದು ಮೂಲಗಳು ತಿಳಿಸಿವೆ.
Next Story





