ಸಮಾಜ ಸೇವೆಯಲ್ಲಿ ಯುವಕರ ಪಾತ್ರ ಅಗತ್ಯ: ಹಾಜಿ ರಫೀಕ್ ಮಾಸ್ಟರ್

ನೆಕ್ಕಿಲಾಡಿ, ಡಿ.5: ಉಮರುಲ್ ಫಾರೂಖ್ ಜುಮಾ ಮಸೀದಿ ಮತ್ತು ಇರ್ಷಾದುಲ್ ಮುಸ್ಲಿಮೀನ್ ವೆಲ್ಫೇರ್ ಎಸೋಸಿಯೇಶನ್ ನೆಕ್ಕಿಲಾಡಿ ಇದರ ಆಶ್ರಯದಲ್ಲಿ "ಇಸ್ಲಾಮಿನಲ್ಲಿ ಯುವಕರ ಪಾತ್ರ"ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ಇತ್ತೀಚೆಗೆ ನೆಕ್ಕಿಲಾಡಿಯ ಕುವ್ವತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಇರ್ಷಾದುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಇಸ್ಮಾಯಿಲ್ ಮೇದರಬೆಟ್ಟು ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ಇದರ ಗೌರವ ಸಲಹೆಗಾರರಾದ ಹಾಜಿ ರಫೀಕ್ ಮಾಸ್ಟರ್ ಉಪನ್ಯಾಸ ನೀಡಿ, ಪ್ರಸ್ತುತ ಸನ್ನಿವೇಶದಲ್ಲಿ ಇಸ್ಲಾಂನಲ್ಲಿ ಯುವಕರ ಪಾತ್ರ ಮತ್ತು ಸಮಾಜಸೇವೆಯ ಬಗ್ಗೆ ಮಾತನಾಡಿದರು.
ಉಮರುಲ್ ಫಾರೂಕ್ ಜುಮಾ ಮಸೀದಿ ಖತೀಬರಾದ ಇಬ್ರಾಹಿಂ ಸಅದಿ ಅಫ್ಳಲಿ ದುವಾ ಮತ್ತು ಉದ್ಘಾಟನೆ ನೆರವೇರಿಸಿದರು. ಶರೀಫ್ ಸಅದಿ ಕಿರಾಅತ್ ಪಡಿಸಿದರು.
ಈ ಸಂದರ್ಭದಲ್ಲಿ ಕೆ.ಮುಹಮ್ಮದ್ ಹಾಜಿ,ಶೇಖಬ್ಬ ಹಾಜಿ, ಹಸೈನಾರ್ ಹಾಜಿ,ಅರಫಾ ಸಿದ್ದೀಕ್ ಹಾಜಿ,ಆದಂಕುಂಞಿಹಾಜಿ,ಇಸ್ಹಾಕ್ ಹಾಜಿ ಮೇದರಬೆಟ್ಟು,ಇಬ್ರಾಹಿಂ ಹಾಜಿ ಅಗ್ನಾಡಿ,ಹುಸೈನ್ ಬಡಿಲ, ಖಾದರ್ ಸಂತೆಕಟ್ಟೆ,ಉಪಸ್ಥಿತರಿದ್ದರು.
ಝಕರಿಯಾ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರಹಿಮಾನ್ ಯುನಿಕ್ ಸ್ವಾಗತಿಸಿ,ಅಬ್ದುಲ್ ಅಝೀಝ್ ಪಿ.ಟಿ. ವಂದಿಸಿದರು





