Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕ್ಯಾಶ್ ಲೆಸ್ ಮಾತ್ರವಲ್ಲ, ಇನ್ನು ಬರಲಿದೆ...

ಕ್ಯಾಶ್ ಲೆಸ್ ಮಾತ್ರವಲ್ಲ, ಇನ್ನು ಬರಲಿದೆ ಕಾರ್ಡ್ ಲೆಸ್ ಪೇಮೆಂಟ್ ! ಹೇಗೆ ? ಏನು ?

ವಾರ್ತಾಭಾರತಿವಾರ್ತಾಭಾರತಿ5 Dec 2016 1:45 PM IST
share
ಕ್ಯಾಶ್ ಲೆಸ್ ಮಾತ್ರವಲ್ಲ, ಇನ್ನು ಬರಲಿದೆ ಕಾರ್ಡ್ ಲೆಸ್ ಪೇಮೆಂಟ್ ! ಹೇಗೆ ? ಏನು ?

ಲಂಡನ್, ಡಿ.5: ನೀವು ಸುಪರ್ ಮಾರ್ಕೆಟ್ ಗೆ ಹೋಗಿ ನಿಮಗೆ ಬೇಕಿದ್ದೆಲ್ಲವನ್ನೂ ಖರೀದಿಸಿ ನಿಮ್ಮ ಶಾಪಿಂಗ್ ಬ್ಯಾಗ್ ಹಿಡಿದುಕೊಂಡು ಹೊರ ನಡೆದರಷ್ಟೇ ಸಾಕು, ನೀವೇನೂ ಶಾಪಿಂಗ್ ಮಾಡಿದ್ದಕ್ಕೆ ಬಿಲ್ ಪಾವತಿಸುವ ಅಗತ್ಯವಿಲ್ಲ. ಕಾರ್ಡ್ ಸ್ವೈಪ್ ಮಾಡುವ ಅಗತ್ಯವಿಲ್ಲ. ಸುಮ್ಮನೇ ಹಾಗೆಯೇ ಮನೆಗೆ ಹಿಂದಿರುಗಬಹುದು. ಹೇಗಂತೀರಾ ? ನೀವೇನು ಹಣ ಕೊಡದೆ ಸಾಮಾನು ಖರೀದಿಸಿಲ್ಲ.  ಸೂಪರ್ ಮಾರ್ಕೆಟ್ ನಲ್ಲಿ ನಿಮ್ಮ ಇರುವಿಕೆಯನ್ನು ಗುರುತಿಸಿ, ನೀವು ಶಾಪಿಂಗ್ ಮಾಡಿದ ವಸ್ತುಗಳನ್ನು ಸ್ಕ್ಯಾನ್ ಮಾಡಿ ನಿಮ್ಮ  ಖಾತೆಯಿಂದ ಬಿಲ್ ಹಣ ಸಂದಾಯ ಮಾಡುವ  ತಂತ್ರಜ್ಞಾನವೊಂದು ಭವಿಷ್ಯದಲ್ಲಿ ಬರಲಿದೆ. ಇದು ಕ್ಯಾಶ್ ಲೆಸ್ ಮಾತ್ರವಲ್ಲ, ಕಾರ್ಡ್ ಲೆಸ್ ಪೇಮೆಂಟ್ ಕೂಡ ಹೌದು.

ಇಂತಹ ಒಂದು ತಂತ್ರಜ್ಞಾನ ಅಭಿವೃದ್ಧಿಗೊಂಡಾಗ ಅದು ಈಗಿನ ಪ್ಲಾಸ್ಟಿಕ್ ಕ್ರೆಡಿಟ್ ಕಾರ್ಡಿನ ಅಂತ್ಯ ಹಾಡಲಿದೆಯೆಂದು ಇಂಗ್ಲೆಂಡಿನಲ್ಲಿ  50 ವರ್ಷಗಳ ಹಂದೆ ಕ್ರೆಡಿಟ್ ಕಾರ್ಡ್  ಪ್ರಸ್ತುತ ಪಡಿಸಿದ  ಬಾರ್ಕ್ ಲೇ ಕಾರ್ಡ್ ಸಂಸ್ಥೆಯ ಮುಖ್ಯ ಕಾಯನಿರ್ವಹಣಾಧಿಕಾರಿ ಅಮೆರ್ ಸಾಜೆದ್ ಹೇಳುತ್ತಾರೆ.

ಜನರು  ಆನ್ ಲೈನ್ ಅಥವಾ ಆಫ್ ಲೈನ್ ಶಾಪಿಂಗ್ ಮಾಡಬಹುದು ಅಥವಾ ಆ್ಯಪ್ ಮೂಲಕವೂ ಶಾಪಿಂಗ್ ಮಾಡಬಹುದು. ಆದರೆ ಇದರಿಂದ ಬ್ಯಾಂಕುಗಳು ಹಾಗೂ ತಂತ್ರಜ್ಞಾನ ಕಂಪೆನಿಗಳು  ನಮ್ಮ ಡಿಜಿಟಲ್ ವಾಲೆಟ್ ಮೇಲೆ ನಿಯಂತ್ರಣ ಸಾಧಿಸಲು, ಸಮರ ಸಾರಲು  ಆರಂಭಿಸುವವಲ್ಲದೆ ನಮ್ಮ ಖಾಸಗಿತನ ಹಾಗೂ ಸುರಕ್ಷತೆಯ ಬಗ್ಗೆ ಚರ್ಚೆಯೂ ಇದರಿಂದ ಆರಂಭಗೊಳ್ಳಬಹುದು.

ತಮ್ಮ ಕಂಪೆನಿಯ ಉದ್ಯೋಗಿಗಳಿಗೆಂದೇ ಇರುವ ಸ್ಥಳದಲ್ಲಿ ಅವರು ಚಿಪ್ ಇರುವ  ಪ್ಲಾಸ್ಟಿಕ್ ಉಂಗುರು, ಬ್ರೇಸ್ ಲೆಟ್  ಹಾಗೂ ಕೀಚೈನ್ ತೋರಿಸುತ್ತಾರೆ ಹಾಗೂ ಇದರಿಂದ ವ್ಯಕ್ತಿಯೊಬ್ಬ ಯಾವುದೇ ಕಾರ್ಡ್ ಇಲ್ಲದೆಯೇ ಹಣ ಪಾವತಿಸಲು ಸಾಧ್ಯ ಎನ್ನುತ್ತಾರೆ.  ಈ ತಂತ್ರಜ್ಞಾನವು ಗ್ರಾಹಕರನ್ನು  ಅವರ ಕಣ್ಣುಗಳು ಯಾ ಬೆರಳಚ್ಚುಗಳಿಂದ ಅವರ ಸ್ಮಾರ್ಟ್ ಫೋನ್ ಮುಖಾಂತರ ಗುರುತಿಸಲಾಗುತ್ತದೆ ಹಾಗೂ ಗ್ರಾಹಕರು ಬಿಲ್ ಪಾವತಿಸಲು ಕ್ಯೂ ನಿಲ್ಲುವ ತಾಪತ್ರಯವನ್ನು ಇಲ್ಲವಾಗಿಸುತ್ತದೆ.

ಆದರೆ ಹ್ಯಾಕರುಗಳ ಹಾವಳಿಯಿರುವ ಇಂತಹ ಸಮಯದಲ್ಲಿ ಇಂತಹ ಒಂದು ತಂತ್ರಜ್ಞಾನದ ಅಭಿವೃದ್ಧಿಯಾದರೆ ಹೇಗಪ್ಪಾ ಎಂದು ಯೋಚಿಸುವವರೂ ಇದ್ದಾರೆ. ಆದರೆ ಈ ತಂತ್ರಜ್ಞಾನದಲ್ಲಿ ಯಾವುದೂ  ಬಳಕೆದಾರನ ಅನುಮತಿಯಿಲ್ಲದೇ ನಡೆಯುವುದಿಲ್ಲ ಎಂದು ಸಾಜೆದ್ ಸ್ಪಷ್ಟಪಡಿಸುತ್ತಾರೆ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X