ಕರಾಚಿ ಹೋಟೆಲ್‌ನಲ್ಲಿ ಬೆಂಕಿ; 11ಸಾವು

ಕರಾಚಿ, ಡಿ.5: ಇಲ್ಲಿನ ನಾಲ್ಕು ಅಂತಸ್ತಿನ ಹೊಟೇಲ್ ಕಟ್ಟಡ ಒಂದರಲ್ಲಿ ಬೆಂಕಿ ಆಕಸ್ಮಿಕದಿಂದಾಗಿ 11 ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು,ಗಾಯಗೊಂಡವರಲ್ಲಿ ಕೆಲವು ವಿದೇಶಿಯರು , ಅಂತಾರಾಷ್ಟ್ರೀಯ ಮತ್ತು ದೇಶಿಯ ಕ್ರಿಕೆಟಿಗರು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಕಟ್ಟಡದ ನೆಲಂತಸ್ತಿನಲ್ಲಿರುವ ಹೋಟೆಲ್‌ನ ಅಡುಗೆ ಕೋಣೆಯಲ್ಲಿರುವ ಬೆಂಕಿ ಕಟ್ಟಡದ ಇತರ ಕೋಣೆಗಳಿಗೆ ವ್ಯಾಪಿಸಿ ದುರಂತ ಸಂಭವಿಸಿದೆ. ಹಲವು ಮಂದಿ ಕಟ್ಟಡದಲ್ಲಿ ಬೆಂಕಿಯಿಂದಾಗಿ ವ್ಯಾಪಿಸಿಕೊಂಡ ದಟ್ಟ ಹೊಗೆಯಿಂದ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸತತ ಮೂರು ಗಂಟೆಗಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
Next Story





